ಯೋಜನಾ ಹಣಕಾಸು ಹಾಗೂ ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಸಭೆ

ಬೆಳಗಾವಿ, 22: ಜಿಲ್ಲಾ ಪಂಚಾಯತ ಯೋಜನಾ, ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಸಭೆ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ. ಪ್ರ. ಐಹೊಳೆ ಇವರ ಅಧ್ಯಕ್ಷತೆಯಲ್ಲಿ ಅಗಸ್ಟ್ 21 ರಂದು ಜಿಲ್ಲಾ ಪಂಚಾಯತ ಕಾಯರ್ಾಲಯದಲ್ಲಿ ಜರುಗಿಸಲಾಯಿತು. 

ಈ ಸಭೆಯಲ್ಲಿ ಎಲ್ಲ ಇಲಾಖೆಯ ಪ್ರಗತಿ ಪರಿಶೀಲಿಸಲಾಯಿತು ಮತ್ತು ಪ್ರಗತಿ ಕುಂಠಿತ ಇಲಾಖೆಯವರಿಗೆ ಕಟ್ಟುನಿಟ್ಟಾಗಿ ಪ್ರಗತಿ ಸಾಧಿಸಲು ಸೂಚನೆ ನೀಡಲಾಯಿತು. ಅದರಲ್ಲಿ ವಿಶೇಷವಾಗಿ ವಿವರವಾಗಿ ಗುರಪ್ಪ ಶಿವನಿಂಗ ದಾಶ್ಯಾಳ, ಸದಸ್ಯರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬೆಳಗಾವಿ, ಚಿಕ್ಕೋಡಿ ನೀರು ಸರಬರಾಜು ಇಲಾಖೆ ಮುಖ್ಯಸ್ಥರ ಚಚರ್ೆ ಮಾಡಿದರು.

ಆರೋಗ್ಯ ಇಲಾಖೆ ಕಾಮಗಾರಿಗಳನ್ನು ವಿವರವಾಗಿ ಚಚರ್ಿಸಿ ತೆಲಸಂಗ ಆರೋಗ್ಯ ಕಟ್ಟಡ ಬಗ್ಗೆ ಅಧಿಕಾರಿಗಳೊಂದಿಗೆ ಚಚರ್ಿಸಿದರು. ಅದೇ ರೀತಿ ಅಂಗನವಾಡಿ ಕಟ್ಟಡಗಳ ಮಾಹಿತಿಯನ್ನು ಪರಿಶೀಲಿಸಿ ಬಾಕಿ ಉಳಿದ ಕಟ್ಟಡಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಉಪನಿದರ್ೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕೋಡಿ, ಬೆಳಗಾವಿ ರವರೊಂದಿಗೆ ಪ್ರವಾಹದಿಂದ ಶಾಲಾ ಕಟ್ಟಡಗಳು ಹಾಗೂ ಅಡುಗೆ ಕಟ್ಟಡಗಳ ಕೊಠಡಿಗಳ ಕಟ್ಟಡದ ಸ್ಥಿತಿ ಬಗ್ಗೆ ಚಚರ್ಿಸಿ ಕಟ್ಟಡ ಮಾಹಿತಿಯನ್ನು ಸವಿಸ್ತಾರವಾಗಿ ಸಲ್ಲಿಸಬೇಕೆಂದು ಎಚ್ಚರಿಕೆಯನ್ನು ನೀಡಿದರು ಹಾಗೂ ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗ ಬೆಳಗಾವಿ, ಚಿಕ್ಕೋಡಿ ಇವರಿಗೆ ಸಭೆಗೆ ವಿವರವಾದ ಮಾಹಿತಿಯನ್ನು  ಸಲ್ಲಿಸಲು ಕಟ್ಟುನಿಟ್ಟಾಗಿ ಸೂಚಿಸಿದರು. 

ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ. ಪ್ರ. ಐಹೊಳೆ ಇವರು ಶಾಲಾ ಕಟ್ಟಡಗಳ ಪ್ರಗತಿ ಬಗ್ಗೆ ವ್ಯವಸ್ಥಿತವಾಗಿ ಕ್ರಮ ವಹಿಸಲು ಹಾಗೂ ಪ್ರವಾಹ ಪೀಡಿತ ಪ್ರದೇಶದಲ್ಲಿ ಆರೋಗ್ಯ ಇಲಾಖೆಯವರ ಸೇವೆ ಹೆಚ್ಚು ಅವಶ್ಯಕ ಆದ ಕಾರಣ ತಾವು 24ಘಿ7 ಕರ್ತವ್ಯ ನಿರ್ವಹಿಸುವ ವ್ಯವಸ್ಥೆ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಯೋಜನಾ ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಆಶಾ. ಪ್ರ. ಐಹೊಳೆ ಇವರು ಎಲ್ಲ ಸದಸ್ಯರುಗಳಾದ ಅಜೀತ. ಕೃ. ದೇಸಾಯಿ, ಗುರಪ್ಪ. ಶಿ. ದಾಶ್ಯಾಳ, ಮಾಧುರಿ ಅ. ಹೆಗಡೆ, ಗುರುನಾಥ. ಶಂ. ಗಂಗಲ, ಸಭೆಯ ಕಾರ್ಯದಶರ್ಿಗಳಾದ ಪರುಶುರಾಮ ದುಡಗುಂಟಿ ಹಾಗೂ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.