ಬೆಳಗಾವಿ ಡಿ.30 : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಪ್ರತಿಭಾ ಗಂಗಯ್ಯ ಗೊಡಚಿ (35) ಎಂಬ ಮಹಿಳೆ ನವೆಂಬರ್ 30 ರಂದು ಮೂರಾರ್ಜಿ ಶಾಲೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಎಂದು ಪತಿ ಗಂಗಯ್ಯ ಗೊಡಚಿ ಅವರು ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಮಹಿಳೆ ಬಗ್ಗೆ ಮಾಹಿತಿ ದೊರೆತಲ್ಲಿ ಕುಲಗೋಡ ಪೊಲೀಸ್ ಠಾಣೆಗೆ ತಿಳಿಸಲು ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.