ಹುಬ್ಬಳ್ಳಿ- ೨೯: ಶ್ಯಾಮಿಯಾನ ಗೋಡಾವಣದಲ್ಲಿ ನಗದು ಹಣ ಮತ್ತು ಎಲ್.ಇ.ಡಿ.ಟಿ.ವಿಯನ್ನು ಕಳವು ಮಾಡಿದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು ಕಳವು ಮಾಡಿದ 2,98,000 ರೂ ನಗದು ಹಣ ಹಾಗೂ ಎಲ್,ಇ,ಡಿ, ಟಿ.ವಿ ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ ಆಯುಕ್ತ ಆರ್.ದಿಲೀಪ, ಉಪ-ಪೊಲೀಸ ಆಯುಕ್ತ ಡಿ.ಎಲ್.ನಾಗೇಶ ಹಾಗೂ ಹುಬ್ಬಳ್ಳಿ ಉತ್ತರ ಉಪ-ವಿಭಾಗ ಎಸಿಪಿ ಎಸ್.ಎಂ.ರಾಗಿ ಇವರುಗಳ ಮಾರ್ಗದರ್ಶನದಲ್ಲಿ ಠಾಣೆಯ ಇನ್ಸಪೆಕ್ಟರ್ ನಾಗರಾಜ ಎಂ ಕಮ್ಮಾರ ರವರು ತಮ್ಮ ಠಾಣೆಯ ಸಿಬ್ಬಂದಿಯವರೊಂದಿಗೆ ಆರೋಪಿತರ ಪತ್ತೆ ಕಾರ್ಯವನ್ನು ಕೈಕೊಂಡು ಖಚಿತ ಮಾಹಿತಿ ಸಂಗ್ರಹಿಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿಂತೆ ಆರೋಪಿತರಿಂದ ಒಟ್ಟು 2,98,000ರೂ ನಗದು ಹಣ, ಒಂದು ಎಲ್.ಇ.ಡಿ ಟಿ.ವಿ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.
ಆರೋಪಿತರ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಠಾಣೆಯ ಅಧಿಕಾರಿ ಸಿಬ್ಬಂದಿ ಜನರಾದ ನಾಗರಾಜ ಎಂ ಕಮ್ಮಾರ, ಪಿ.ಐ, ಎ.ಎನ್.ಪುಟ್ಟಣ್ಣನವರ, ಎ.ಎಸ್.ಐ. ಎನ್. ಐ ನೀಲಗಾರ, ಎಸ್. ಎಂ. ಕುರಹಟ್ಟಿ, ಎಂ.ಸಿ. ಹೊನ್ನಪ್ಪನವರ. ಬಿ.ಎಫ್. ಬೆಳಗಾವಿ, ಅನೀಲ ಹುಗ್ಗಿ, ಸಂಜೀವ ಕಣಬೂರ, ರಮೇಶ ಕೋತಂಬ್ರಿ, ಹಾಗೂ ತಾಂತ್ರಿಕ ಸಹಾಯ ಘಟಕದ ಆರ್.ಕೆ.ಭಡಂಕರ, ರವಿ ಗೋಮಪ್ಪನವರ, ಎಮ್.ಎಸ್.ಚಿಕ್ಕಮಠ ಇವರ ತಂಡವನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಅಭಿನಂದಿಸಿ ನಗದು ಬಹುಮಾನ ಘೋಷಿಸಿದ್ದಾರೆ.
ಹುಬ್ಬಳ್ಳಿ ಕೇಶ್ವಾಪೂರ ಹೇಮಂತನಗರ ನಿವಾಸಿ ಪ್ರಶಾಂತ ಮೋಹನಲಾಲ್ ಅಗರವಾಲ ಇವರು ಗೋಕುಲರೋಡ 1 ನೇ ಗೇಟ್ನಲ್ಲಿರುವ ತಮ್ಮ ಶಾಮಿಯಾನದ ಗೋಡೌನ್ ಛಾವಣಿಯ (ಸೂರು) ಮೇಲೆ ಹತ್ತಿ ಸೂರಿನ ಸಿಮೆಂಟ್ ಶೀಟಗಳನ್ನು ಒಡೆದು ಯಾರೋ ಕಳ್ಳರು ಒಳಗೆ ಪ್ರವೇಶಿಸಿ ನಗದು ಹಣ ಸುಮಾರು 3,00,000 ರೂ. ಮತ್ತು ಒಂದು ಎಲ್.ಈ.ಡಿ ಟಿವಿ ಕಳವು ಮಾಡಿದ ಕುರಿತು ನೀಡಿದ ದೂರಿನನ್ವಯ ಗೋಕುಲರೋಡ ಪೊಲೀಸ್ ಠಾಣೆಯಲ್ಲಿ ಇದೇ ಡಿ. .25ರಂದು ಪ್ರಕರಣ ದಾಖಲಾಗಿತ್ತು.