ಗದಗ 10: ಸ್ಥಳೀಯ ಸಂಸ್ಥೆಗಳಿಂದ ವಸತಿ ಬಹು ಮಹಡಿ ಅಥವಾ ಗುಂಪು ಮನೆಗಳ ಬದಲಿಗೆ ಸ್ವಚ್ಛತಾ ಕಾರ್ಮಿಕರಿಗೆ ಸ್ವಂತ ನಿವೇಶನಗಳನ್ನು ನೀಡಲು ಈಗಾಗಲೇ ಪ್ರಸ್ತಾವಿತ ಪ್ರಸ್ತಾವನೆಗಳಿಗೆ ಸೂಕ್ತ ಮಾರ್ಪಾಡು ಮಾಡಿ ರಾಜ್ಯ ಸರ್ಕಾರಕ್ಕೆ ಅನುಮತಿಗಾಗಿ ಸಲ್ಲಿಸಲು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಸೂಚನೆ ನೀಡಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಹಾಗೂ ಸಫಾಯಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಸ್ವಚ್ಛತಾ ಕೆಲಸಗಾರರಿಗೆ ನೀಡುವ ವಿವಿಧ ಸೇವಾ ಸೌಲಭ್ಯ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಬಹು ಮಹಡಿ ಅಥವಾ ಗುಂಪು ಮನೆಗಳಿಂದ ಬಹುತೇಕ ಅವಿಭಕ್ತ ಕುಟುಂಬ ವ್ಯವಸ್ಥೆ ಇರುವ ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ಅನಾನುಕೂಲವೇ ಜಾಸ್ತಿ. ಅವರ ಅವಲಂಬಿತರಿಗೆ ಕೈಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಡಿ ಸ್ವಯಂ ಉದ್ಯೋಗಿಗಳಾಗಲು, ಕೈಗಾರಿಕೆ ಆರಂಭಿಸಲು, ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ ಹೀಗೆ ಹಲವಾರು ಅವಕಾಶಗಳ ಹೊಸ ಆಯಾಮ ಕುರಿತು ಜಾಗೃತಿ ಮೂಡಿಸಿ ಹೊಸ ಬದುಕು ಕಟ್ಟಿಕೊಡಲು ಅಧಿಕಾರಿಗಳು ಪ್ರಯತ್ನಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾಮರ್ಿಕರ ನೇಮಕಾತಿ ಕುರಿತು ದೇಶದ ಸವರ್ೋಚ್ಛ ನ್ಯಾಯಾಲಯ 2007ರಲ್ಲಿ ನೀಡಿದ ತೀಪರ್ಿನನ್ವಯ ಬಾಕಿ ಉಳಿದ ನೇಮಕಾತಿ ಅವಧಿ ವಿಸ್ತರಣೆ ಅಗತ್ಯ. ಕ್ಷೇಮಾಭಿವೃದ್ಧಿ ಯೋಜನೆಯಡಿ ಆದ ನೇಮಕಾತಿ ಹಾಗೂ 2017ರ ಹೊಸ ನಿಯಮಗಳ ರೀತ್ಯ ಆಗಿರುವ ಸಫಾಯಿ ಕಾಮರ್ಿಕರ ನೇಮಕಾತಿ ಕುರಿತು ತಮಗೆ ಮಾಹಿತಿ ನೀಡಬೇಕು ಎಂದು ಜಗದೀಶ ಹಿರೇಮನಿ ನುಡಿದರು.
ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕೆಲಸಗಾರರ ಕುರಿತು ಮಾತನಾಡಿದ ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕ ರುದ್ರೇಶ ಜಿಲ್ಲೆಯ 9 ಸ್ಥಳೀಯ ಸಂಸ್ಥೆಯಲ್ಲಿ ಒಟ್ಟು 671 ಮಂಜೂರಾದ ಹುದ್ದೆಗಳ ಪೈಕಿ 259 ಖಾಯಂ, 234 ಗುತ್ತಿಗೆ ಆಧಾರಿತ ಸಫಾಯಿ ಕಾಮರ್ಿಕರು ಕಾರ್ಯನಿರ್ವಹಿಸುತ್ತಿದ್ದು 2017ರ ನೇಮಕಾತಿ ನಿಯಮಾವಳಿ ರೀತ್ಯ ಒಟ್ಟು 170 ಜನರ ನೇಮಕಕ್ಕೆ ಕ್ರಮ ಜರುಗಿಸಲಾಗುತ್ತಿದೆ. 239 ಕಾಮರ್ಿಕರ ಖಾತೆಗೆ ನೇರ ಹಣ ಪಾವತಿಯಾಗುತ್ತಿದೆ ಎಂದರು.
ವಸತಿ: ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ರಾಜ್ಯ ಸಕರ್ಾರದಿಂದ 6 ಲಕ್ಷ ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1.50 ಲಕ್ಷ. ರೂ ಗಳನ್ನು ನೀಡಲಾಗುತ್ತದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 70ಕಾಮರ್ಿಕರಿಗೆ ಮನೆ ನಿಮರ್ಾಣಕ್ಕೆ ಮಂಜೂರಾತಿ ಇದ್ದು 40 ಮನೆಗಳು ಪೂರ್ಣಗೊಂಡಿವೆ. ಗದಗ -ಬೆಟಗೇರಿ ನಗರಸಭೆಯ 135 ವಸತಿ ರಹಿತ ಕಾಮರ್ಿಕರಿಗೆ ವಸತಿ ಸಂಕೀರ್ಣ ನಿಮರ್ಾಣ ಕುರಿತು ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ವೈದ್ಯಕೀಯ ತಪಾಸಣೆ: ಎಲ್ಲ ಕಾರ್ಮಿಕರಿಗೆ ತ್ರೈಮಾಸಿಕ ವೈದ್ಯಕೀಯ ತಪಾಸಣೆ, ಜಿಲ್ಲಾಸ್ಪತ್ರೆಯಲ್ಲಿ ವಾಷರ್ಿಕವಾಗಿ 11 ಬಗೆಯ ಆರೋಗ್ಯ ತಪಾಸಣೆ, ಉಚಿತ ವೈದ್ಯಕೀಯ ತಪಾಸಣೆ, ಹಾಗೂ ಜೀವ ವಿಮೆಗೆ ಅಲ್ಲದೇ ಕಾರ್ಯನಿರ್ವಹಣೆ ವೇಳೆ ಕಡ್ಡಾಯವಾಗಿ ಸುರಕ್ಷತಾ ಪರಿಕರ ಬಳಸಲು ತಿಳಿ ಹೇಳಲಾಗುತ್ತದೆ. ಇದೇ 27 ರಂದು ಪೌರಕಾಮರ್ಿಕರಿಗಾಗಿ ವಿಶೇಷ ಆರೋಗ್ಯ ಶಿಬಿರ ಆಯೋಜಿಸಲಾಗುತ್ತಿದೆ ಎಂದು ರುದ್ರೇಶ ತಿಳಿಸಿದರು.
ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳು, ಗ್ರಾ.ಪಂ. ಖಾಸಗೀ, ಸಕರ್ಾರಿ ಆಸ್ಪತ್ರೆಗಳಲ್ಲಿ ವಿವಿಧ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳಲ್ಲಿ, ಹಾಸ್ಟೇಲ್ಗಳಲ್ಲಿ ಕಾರ್ಯನಿರ್ವಹಿಸುವ ಸ್ವಚ್ಛತಾ ಕೆಲಸಗಾರರಿಗೆ ಕಡ್ಡಾಯವಾಗಿ ಆಯುಷ್ಮಾನ್ ಆರೋಗ್ಯ ಕಾರ್ಡ ಮಾಡಿಸಲು ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರು ಮಾತನಾಡಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾಮರ್ಿಕರಿಗೆ ಕಾಳಜಿ ವಹಿಸಿ ಎಲ್ಲ ರೀತಿಯ ಅಗತ್ಯದ ಸುರಕ್ಷತಾ ಪರಿಕರ ಅವರಿಗೆ ಉಪಹಾರ, ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಟ ಸಂಬಳ, ವೈದ್ಯಕೀಯ ತಪಾಸಣೆ, ವಸತಿ ಯೋಜನೆಯಡಿ ಮನೆ ನೀಡುವಂತೆ ಅವರ ಪುನರ್ವಸತಿಗೆ ಕ್ರಮ ಜರುಗಿಸಲಾಗುತ್ತಿದೆ. ಇತ್ತೀಚಿನ ನೆರೆ ಹಾವಳಿ ಸಂದರ್ಭದಲ್ಲಿ ಹಾಗೂ ಗದಗ ಬೆಟಗೇರಿ ನಗರಸಭೆ ಮಾಲ್ಕೀ ಜಮೀನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಎಲ್ಲ 9 ಸಂಸ್ಥೆಗಳಲ್ಲಿ ಪೌರ ಕಾರ್ಮಿಕರು, ಒಗ್ಗಟ್ಟಿನಿಂದ ಪ್ರಶಂಸನೀಯ ಕಾರ್ಯ ಮಾಡಿದ್ದಾರೆ. ಅಧಿಕಾರಿಗಳಿಗೆ ಹಾಗೂ ಕಾಮರ್ಿಕ ಸಂಘಟನೆಗಳಿಗೆ ಪ್ರಶಂಸಾ ಪತ್ರಗಳು ಬಂದಿವೆ ಎಂದರು.
ರೈಲ್ವೆ ನಿಲ್ದಾಣ, ಆರೋಗ್ಯ ಇಲಾಖೆ, ಆಸ್ಪತ್ರೆಗಳಲ್ಲಿ, ಜಿಲ್ಲಾಸ್ಪತ್ರೆಯಲ್ಲಿ ವಿವಿದ ಶಾಲಾ ಕಾಲೇಜುಗಳಲ್ಲಿ , ಖಾಸಗಿ ವಿದ್ಯಾಸಂಸ್ಥೆ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಶುಚಿತ್ವ ಕೆಲಸಗಾರರಿಗೆ ಸರಿಯಾದ ಸುರಕ್ಷತಾ ಉಪಕರಣ, ಕನಿಷ್ಟ ವೇತನ ನೀಡುವಿಕೆ ಕುರಿತಂತೆ ಜಗದೀಶ ಹಿರೇಮನಿ ಅವರು ಪರಿಶೀಲನೆ ನಡೆಸಿ ಸಲಹೆ ಸೂಚನೆ ನೀಡಿದರಲ್ಲದೇ ಕಾಮರ್ಿಕ ಇಲಾಖೆ ಈ ಕುರಿತಂತೆ ಹೆಚ್ಚಿನ ಗಮನ ಹರಿಸಲು ಸೂಚಿಸಿದರು.
ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಶ್ರೀನಾಥ ಜೋಶಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾ ಹುಸೇನ ಮುಧೋಳ, ವಿವಿಧ ಇಲಾಖೆಯ ಅಧಿಕಾರಿಗಳು , ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಾಭಿವೃದ್ಧಿ ಕೋಶ , ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ವಿವಿಧ ಪೌರ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು , ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.