ಪುರಸಭೆ ನೌಕರರ ಅನಿರ್ದಿಷ್ಟಾವಧಿ ಕಾಲ ಮುಷ್ಕರ ತಹಶೀಲ್ದಾರಗೆ ಮನವಿ

Municipal employees appeal to Tahsildar for indefinite strike

ಶಿಗ್ಗಾವಿ  28 : ಪಟ್ಟಣದ ಪುರಸಭೆಯಲ್ಲಿ ನಡೆದ ರಾಜ್ಯದಲ್ಲಿರುವ ಎಲ್ಲ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಯುತ ನೌಕರರ 19 ಬೇಡಿಕೆಗಳನ್ನು ಈಡೆರಿಸದೇ ಇರುವು ಕಾರಣ ದಿ : 27-05-2025 ರಿಂದ ಅನೀರ್ದೀಷ್ಠಾವದಿ ಕಾಲ ಮುಷ್ಕರ ಹಾಗೂ ಹಂತ ಹಂತವಾಗಿ ಹೋರಾಟ ನಡೆಸುವ ಬಗ್ಗೆ ತಹಶೀಲ್ದಾರ ರವಿಕುಮಾರ ಕೊರವರ ಅವರಿಗೆ ಕ.ರಾ.ಪೌ.ನೌ.ಸಂಘದ ಅಧ್ಯಕ್ಷೆ ಶೈಲಜಾ ಹೆಚ್ ಪಾಟೀಲ ನೇತೃತ್ವದಲ್ಲಿ ಮನವಿ ನೀಡಿದರು.   

ನಂತರ ಮಾತನಾಡಿದ ಅವರು ಕ.ರಾ.ಪೌ.ನೌ.ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಜಂಟಿ ಕಾರ್ಯದರ್ಶಿಯವರ ವಿಷಯ ಹಾಗು ಉಲ್ಲೇಖದ್ವಯ ಕರ್ನಾಟಕ ರಾಜ್ಯ ಪೌರ ನೌಕರರ 19 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ಮಾಡುವುದು ಅನಿವಾರ್ಯ ಆಗಿರುವುದರಿಂದ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಅಲ್ಲದೇ ತಾವುಗಳು ಕರ್ನಾಟಕ ರಾಜ್ಯ ಪೌರನೌಕರರ ಬೇಡಿಕೆಗಳ ಹಂತ ಹಂತದ ಹೋರಾಟಕ್ಕೆ ಅನುಮತಿ ನೀಡಲು ಹಾಗೂ ದಿ 27-05-2025 ರಿಂದ ಶಾಂತಿಯುತವಾಗಿ ಅನಿರ್ಧಿಷ್ಠಾವಧಿ ಮುಷ್ಕರವನ್ನು ಮಾಡಲು ನಿರ್ಧರಿಸಿದ್ದು ಶಿಗ್ಗಾವಿ ಪುರಸಭೆ ಎಲ್ಲಾ ಅಧಿಕಾರಿಗಳು, ಸಿಬ್ಬಂಧಿಗಳು ಬೆಂಬಲಿಸಲು ಕೋರಿದ್ದಾರೆ. 

ಈ ಸಂದರ್ಭದಲ್ಲಿ ತಹಶಿಲ್ದಾರ ರವಿ ಕೊರವರ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ, ವ್ಯವಸ್ಥಾಪಕಿ ಮಂಗಳಗೌರ ಪಾಟೀಲ, ಪುರಸಭೆ ಸದಸ್ಯರಾದ ಶ್ರೀಕಾಂತ ಬುಳ್ಳಕ್ಕನವರ, ಸುಲೇಮಾನ ತರ್ಲಗಟ್ಟ, ನಾಮನಿರ್ದೇಶಿತ ಸದಸ್ಯ ಮಂಜುನಾಥ ಮಣ್ಣಣ್ಣವರ, ರಾಜೇಶ ಕಹಾರ, ಗಿರಿಜಮ್ಮ ಕಮಡೊಳ್ಳಿ, ಯಲ್ಲಪ್ಪ ಹಾದಿಮನಿ, ಮಂಜುನಾಥ ಕಟ್ಟಿಮನಿ, ಪ್ರಶಾಂತ ರಾಠೋಡ, ಎ.ಎ.ಸೌಧಾಗರ, ಲಕ್ಷ್ಮವ್ವ ಬಳ್ಳಾರಿ, ವಿಜಯಲಕ್ಷ್ಮಿ ಬಳ್ಳಾರಿ ಸೇರಿದಂತೆ ಪೌರಕಾರ್ಮಿಕ ಸಂಘದ ಸದಸ್ಯರು ಉಪಸ್ಥಿತರಿದ್ದರು.