ಧಾರವಾಡ 09: ವಿಶ್ವ ಣಮೋಕಾರ ಮಂತ್ರಪಠಣ ದಿನದ ಅಂಗವಾಗಿ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಉತ್ಸವ ಸಭಾಭವನದಲ್ಲಿ ಣಮೋಕಾರ ಮಂತ್ರ ಪಠಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಯಕ್ರ್ರಮವನ್ನು ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಉದ್ಘಾಟಿಸಿದರು. ಈ ಕಾಯಕ್ರಮದಲ್ಲಿ 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಡಾ. ಬಿ.ಎನ್.ಭಾವಿಯವರು ಣಮೋಕಾರ ಮಂತ್ರದ ಮಹತ್ವವನ್ನು ತಿಳಿಸಿದರು. ಮಹಾವೀರ ಉಪಾದ್ಯೆ ಕಾರ್ಯಕ್ರಮ ನಿರೂಪಿಸಿದರು.