ಹೈದ್ರಾಬಾದ್ ಕರ್ನಾಟಕಕ್ಕೆ ಹೊಸ ಪರ್ವ: ಪ್ರೋ. ಬೆಣ್ಣಿ

ಕೊಪ್ಪಳ 18: ಹೈದ್ರಾಬಾದ್ ಕನರ್ಾಟಕಕ್ಕೆ ಹೊಸ ಪರ್ವ ಅರಂಭವಾಗಿ, ಈಗ ಕಲ್ಯಾಣ ಕನರ್ಾಟಕವಾಗಿ ಹೊರ ಹೊಮ್ಮಿದೆ ಎಂದು ಸ್ನಾತಕೋತ್ತರ ಕೇಂದ್ರದ ನೂತನ ನಿರ್ದೇಶಕರಾದ ಪ್ರೊ. ಬಸವರಾಜ ಎಸ್. ಬೆಣ್ಣಿ ಹೇಳಿದರು.

ನಗರದ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣ ಕನರ್ಾಟಕ (ಹೈದ್ರಾಬಾದ್ ಕರ್ನಾಟಕ ವಿಮೋಚನಾ) ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹಿಂದುಳಿದ ಭಾಗ, ಪ್ರಾದೇಶಿಕ ಅಸಮತೋಲನ ಮುಂತಾದ ಹೆಸರಿನೊಂದಿಗೆ ಗುರುತಿಸಲ್ಪಡುತ್ತಿದ್ದ ಭಾಗಕ್ಕೆ ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣ ಮಾಡಿದ್ದು ಅತ್ಯಂತ ಸ್ವಾಗತಾರ್ಹ. ಇನ್ನಾದರೂ ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯವಾಗಬೇಕಿದೆ. ಆಥರ್ಿಕ, ಶೈಕ್ಷಣಿಕ, ಆರೋಗ್ಯ, ಉದ್ಯೋಗ, ಕೈಗಾರಿಕೆ, ಸಾಮಾಜಿಕ ಸ್ಥಾನಮಾನಗಳಂತಹ  ಜನ ಕಲ್ಯಾಣ ಕಾರ್ಯಕ್ರಮಗಳು ಅವಶ್ಯವಾಗಿದ್ದು, ಸಕರ್ಾರ ಮತ್ತು ಆಡಳಿತ ವರ್ಗ ಇತ್ತ ಗಮನ ಹರಿಸಬೇಕಾಗಿದೆ ಎಂದರು.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಹೈದ್ರಾಬಾದ್ ಕನರ್ಾಟಕ ಮತ್ತು ಮುಂಬೈ ಕನರ್ಾಟಕ ಎಂದು ವಿಂಗಡಿಸಲಾಗಿದೆ ಇದು ವಿಷಾದನೀಯ. ಸಮಗ್ರ ಕನರ್ಾಟಕದ ಪರಿಕಲ್ಪನೆ ಕೇವಲ ಪುಸ್ತಕ ಮತ್ತು ಕಡತಗಳಿಗೆ ಸೀಮಿತವಾಗಿದೆ ಎಂದು ಹೇಳಿದರು. ನಮ್ಮ ಭಾಗದ ಜನರು ಪ್ರತಿಭಾವಂತರಿದ್ದಾಗ್ಯು ಅವರಲ್ಲಿ ಇಚ್ಚಾಶಕ್ತಿ ಕೊರತೆ ಇದೆ. ನಾವ್ಯಾರೂ ಸಕರ್ಾರ ಮತ್ತು ಆಡಳಿತ ವರ್ಗಗಳನ್ನು ಪ್ರಶ್ನಿಸುವ ಕೆಲಸ ಮಾಡುತ್ತಿಲ್ಲ. ಪಕ್ಕದ ಕೇರಳ ರಾಜ್ಯದಲ್ಲಿ ಜನರು ಮೂಲಭೂತ ಸೌಕರ್ಯ, ಸೌಲಭ್ಯಗಳಿಗೆ ತಮ್ಮ ಹಕ್ಕೊತ್ತಾಯ ಮಾಡುತ್ತಾರೆ. ಮಾಧ್ಯಮಗಳು ಅವರಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಕೇರಳದಲ್ಲಿರುವ ಸಾಕ್ಷರತೆಯ ಪ್ರಮಾಣ ಇದನ್ನು ದೃಢೀಕರಿಸುತ್ತದೆ ಎಂದರು. 

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಮನೋಜ ಡೊಳ್ಳಿ ಮಾತನಾಡಿ ಕಲ್ಯಾಣ ಕನರ್ಾಟಕ ಕೇವಲ ಸಕರ್ಾರ ಮತ್ತು ಆಡಳಿತದ ಜವಾಬ್ದಾರಿಯಾಗಿರದೆ ಇದಕ್ಕೆ ಪೂರಕವಾಗಿ ನಾವೆಲ್ಲರೂ ಕಾರ್ಯ ನಿರ್ವಹಿಸಬೇಕಿದೆ ಅಂದಾಗ ಮಾತ್ರ ನಿಜವಾದ ಕಲ್ಯಾಣ ಕನರ್ಾಟಕವಾಗಲಿದೆ ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ವರ್ಗದವರು ಸೇರಿದಂತೆ ವಿದ್ಯಾಥರ್ಿಗಳು ಭಾಗವಹಿಸಿದ್ದರು.