ಹರಿವಾಯು ಗುರುಗಳ ಸೇವಾ ಸಂಘದವರಿಂದ ಪಾದಯಾತ್ರೆ
ಬೆಳಗಾವಿ 07: ಹರಿವಾಯು ಗುರುಗಳ ಸೇವಾ ಸಂಘ ಮತ್ತು ಭಜನಾ ಮಂಡಳ ಇವರು ಬೆಳಗಾವಿಯ ಕಾಕತಿಯಿಂದ ಅಶ್ವತ್ಥ ಲಕ್ಷ್ಮೀ ನರಸಿಂಹ ದೇವಸ್ಥಾನ ಎಂ.ಕೆ. ಹುಬ್ಬಳ್ಳಿ (ನರಸಿಂಹಪುರ) ದ ವರೆಗೆ ಇದೇ ದಿನಾಂಕ 5 ರಂದು ಪಾದಾಯಾತ್ರೆಯನ್ನು ಹಮ್ಮಿಕೊಂಡಿದ್ದರು. ಬೆಳಿಗ್ಗೆ 5 ಗಂಟೆಗೆ ಕಾಕತಿಯಿಂದ ಹೊರಟ ಪಾದಯಾತ್ರಿಗಳು ಮಧ್ಯಾಹ್ನ 1 ಗಂಟೆಗೆ ಲಕ್ಷ್ಮೀ ನರಸಿಂಹ ದೇವಸ್ಥಾನವನ್ನು ತಲುಪಿದರು.
ಪ್ರತಿವರ್ಷ ಜನೆವರಿ ತಿಂಗಳಲ್ಲಿ ಈ ಪಾದಯಾತ್ರೆಯನ್ನು ಮಾಡುತ್ತ ಬಂದಿದ್ದು ಈ ವರ್ಷ ಹತ್ತು ವರ್ಷಗಳನ್ನು ಪುರೈಸಿದೆ. ಈ ಸಂದರ್ಭದಲ್ಲಿ ಸಮರಾ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾಕತಿ ಭಜನಾ ಮಂಡಳದವರಿಂದ ಭಜನೆ, ಪಂ. ಸಮೀರಾಚಾರ್ಯರ ಪ್ರವಚನ, ನರಸಿಂಹ ಸುಳಾದ, ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ರಾಮಚಂದ್ರ ಪಾಟೀಲ, ಸುಧೀರ ಕಲ್ಲೋಳ, ಜಿ.ಎನ್. ಕುಲಕರ್ಣಿ, ಕೃಷ್ಣಾ ನಾಡಗೌಡ, ಶೀರೀಷ ಕರಗುಪ್ಪಿಕರ, ಪದ್ಮಾಕರ ಸಾಮಾನಗಡಕರ, ಡಿ.ಕೆ. ಕುಲಕರ್ಣಿ, ಅನಿರುದ್ಧ ನಂಜಗೂಡ, ವಿನಾಯಕ ಕುರ್ತಕೋಟಿ, ಸಾಗರ ಕುಲಕರ್ಣಿ, ಬಂಡು ಕುಲಕರ್ಣಿ, ಪ್ರಕಾಶ ದೇಶಪಾಂಡೆ, ಏಕನಾಥ, ರಾಘವೇಂದ್ರ ಕೌಜಲಗಿ, ಅಶೋಕ ಆಯಾಚಿತ, ವಾಮನ ಸವಾಯ, ಬೋಂಗಾಳೆ, ಮಂದಾರ ಕುಲಕರ್ಣಿ, ಶಿವಾನಂದ ಜೋಶಿ, ವೆಂಕಟೇಶ ಮರಡಿಹಳ್ಳಿ, ರಾಘವೇಂದ್ರ ಕುಲಕರ್ಣಿ, ಆದಿತ್ಯ ದೇಶಪಾಂಡೆ, ಪವನ ನಾಯಿಕ, ಪ್ರಶಾಂತ ನಾಯಿಕ ಮುಂತಾದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.