ಸಾರಸ್ವತ ಲೋಕದ ದಿಗ್ಗಜರಲ್ಲಿ ಪಂಚಾಕ್ಷರಿ ಹಿರೇಮಠರು ಒಬ್ಬರು

ಧಾರವಾಡ :  ಪಂಚಾಕ್ಷರಿ ಹಿರೇಮಠರು ಸಾರಸ್ವತ ಲೋಕದ ದಿಗ್ಗಜರಲ್ಲಿ ಒಬ್ಬರು. ಇವರು ಕನ್ನಡ, ಹಿಂದಿ, ಉರ್ದು , ಇಂಗ್ಲೀಷ ಎಲ್ಲ ಭಾಷೆಗಳಲ್ಲಿ ಸಾಹಿತ್ಯವನ್ನು ಬರೆದವರು. ಮತ್ತು ಬೇರೆ ಭಾಷೆಯ ಅತ್ಯುತ್ತಮ ಕೃತಿಗಳನ್ನು ಕನ್ನಡ ಭಾಷೆಗೆ ತರ್ಜು ಮೆ   ಮಾಡಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿ, ಕನ್ನಡಿಗರು ಓದುವಂತೆ ಮಾಡಿದವರು. ಇವರ ಶಿಷ್ಯವರ್ಗವು ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲಿಯೂ ಇದ್ದಾರೆ. ಇವರ ಸಾಹಿತ್ಯ, ಇವರ ಪುಸ್ತಕಗಳನ್ನು ಓದುವವರು ಎಲ್ಲೆಡೆ ಇದ್ದಾರೆ. ಇವರು ನಮ್ಮ ನಾಡಿನ ಹೆಮ್ಮೆಯ  ಪುತ್ರರು. ನಮ್ಮ ಉತ್ತರ ಕರ್ನಾ ಟಕವನ್ನು, ಧಾರವಾಡವನ್ನು ಜಗತ್ತಿಗೆ ಪರಿಚಯಿಸಿದವರಲ್ಲಿ ಇವರೂ ಒಬ್ಬರು ಎಂದು ಖ್ಯಾತ ಮಕ್ಕಳ ಸಾಹಿತಿಗಳು ಹಾಗೂ ಆಕಾಶವಾಣಿ ನಿವೃತ್ತ ನಿರ್ದೇ ಶಕ ಡಾ. ಆನಂದ ಪಾಟೀಲ ಹೇಳಿದರು.

ಕರ್ನಾ ಟಕ ವಿದ್ಯಾವರ್ಧಕ ಸಂಘವು ಡಾ. ಪಂಚಾಕ್ಷರಿ ಹಿರೇಮಠ ದತ್ತಿ ಅಂಗವಾಗಿ, ಅವರ 88 ನೇ ಜನ್ಮದಿನಾಚರಣೆ ನಿಮಿತ್ತ  ಆಯೋಜಿಸಿದ್ದ `ಡಾ. ಪಂಚಾಕ್ಷರಿ ಹಿರೇಮಠರ ಮಕ್ಕಳ ಸಾಹಿತ್ಯ ವಿಷಯದ ಮೇಲೆ  ಉಪನ್ಯಾಸ ನೀಡುತ್ತಾ ಅವರು ಮಾತನಾಡುತ್ತಿದ್ದರು.

`ಡಾ. ಪಂಚಾಕ್ಷರಿ ಹಿರೇಮಠರಿಗೆ, ಮಕ್ಕಳೆಂದರೆ ಪಂಚಪ್ರಾಣ. ನಾನು ಇವರ ಹಲವಾರು ಮಕ್ಕಳ ಸಾಹಿತ್ಯವನ್ನು ಓದಿ ಒಂದು ತೀಮರ್ಾನಕ್ಕೆ ಬಂದಿದ್ದೇನೆ. ಇವರ ಮಕ್ಕಳ ಸಾಹಿತ್ಯದಿಂದ ಮಕ್ಕಳ ನೈತಿಕಮಟ್ಟ ಉನ್ನತೀಕರಣವಾಗುತ್ತದೆ. ಏಕೆಂದರೆ ಇವರು ಮಕ್ಕಳಿಗಾಗಿ ರಚಿಸಿದ ಕಥೆಗಳನ್ನು ಓದಿದರೆ ಒಂದೊಂದು ಕಥೆಯೂ ಮಕ್ಕಳ ಭವಿಷ್ಯದ ಭದ್ರಬುನಾದಿಯಂತಿವೆ. ಆದ್ದರಿಂದ ಇವರು ರಚಿಸಿದ ಗ್ರಂಥಗಳನ್ನು ಶಿಕ್ಷಕರು ಮೊದಲು ಓದಲೇಬೇಕು. ಪಾಠದ ಜೊತೆ ಬಿಡುವಿದ್ದಾಗ ಮಕ್ಕಳಿಗೆ ಇವರ ಕಥೆಗಳನ್ನು ಓದಿಹೇಳಬೇಕು. ಇವರು ಹಿಂದಿ, ಇಂಗ್ಲಿಷ ಮತ್ತು ಉದರ್ು ಮುಂತಾದ ಭಾಷೆಗಳ ಮಕ್ಕಳ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅದರಂತೆ ಕನ್ನಡ ಭಾಷೆಯ ಮಕ್ಕಳ ಕಥೆಗಳನ್ನು ಇತರ ಭಾಷೆಗೆ ಭಾಷಾಂತರಿಸಿ ಮಕ್ಕಳ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ಹಾಗೂ ಕ.ವಿ.ವ.ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಮಾತನಾಡಿ, ಪ್ರತಿಯೊಬ್ಬರು ಮೊದಲು ಮಕ್ಕಳಾಗಿರುತ್ತಾರೆ ನಂತರ ದೊಡ್ಡವರಾಗುತ್ತಾರೆ, ದೊಡ್ಡವರಾದ ಮೇಲೆ ಸಾಹಿತ್ಯವನ್ನು ರಚಿಸುತ್ತಾರೆ. ಆ ಸಾಹಿತ್ಯದಲ್ಲಿ ಕೆಲವೊಬ್ಬರು ಮಕ್ಕಳ ಸಾಹಿತ್ಯವನ್ನು, ಕೆಲವೊಬ್ಬರು ಕಥೆ, ಕಾದಂಬರಿ, ಕವನ ಹೀಗೆ ಭಿನ್ನಭಿನ್ನವಾದ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಆದರೆ ಪಂಚಾಕ್ಷರಿ ಹಿರೇಮಠರು ಎಲ್ಲ ರೀತಿಯ ಸಾಹಿತ್ಯವನ್ನು ರಚಿಸಿ ಈ ನಾಡಿಗೆ ಅಪಾರ ಕೊಡುಗೆ ನೀಡಿದ ಧೀಮಂತ ವ್ಯಕ್ತಿ. ಆಡು ಮುಟ್ಟದ ಸೊಪ್ಪಿಲ್ಲ, ಪಂಚಾಕ್ಷರಿ ಹಿರೇಮಠರಿಗೆ ಗೊತ್ತಿಲ್ಲದ ಸಾಹಿತ್ಯವಿಲ್ಲ ಎನ್ನುವಂತೆ ಇವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರ ಮಕ್ಕಳ ಸಾಹಿತ್ಯವು ಮಕ್ಕಳಿಗೆ ದಾರ್ಶನಿಕ ದಾರಿಯನ್ನು ತೋರುತ್ತದೆ. ಇವರ ಒಂದು ಕಥೆಯಲ್ಲಿ ಮಕ್ಕಳು ಹೊಸದನ್ನು ಹುಡುಕುವ ತುಡಿತದಲ್ಲಿರಬೇಕು ಎಂದು ಹೇಳುತ್ತಾರೆ. ಡಾ. ಪಂಚಾಕ್ಷರಿ ಹಿರೇಮಠರ ಮಕ್ಕಳ ಸಾಹಿತ್ಯ ಎಲ್ಲ ಮಕ್ಕಳಿಗೆ ದೊರೆಯುವಂತಾಗಬೇಕು ಎಂದರು.  

ಕಾರ್ಯಕ್ರಮದಲ್ಲಿ ದತ್ತಿದಾನಿಗಳ ಪರವಾಗಿ ಡಾ. ಆನಂದ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಡಾ. ಪಂಚಾಕ್ಷರಿ ಹಿರೇಮಠ, ಸಂಘದ ಕಾರ್ಯಾ ಧ್ಯಕ್ಷ ಶಿವಣ್ಣ ಬೆಲ್ಲದ, ಮಲ್ಲಿಕಾರ್ಜು ನ ಹಿರೇಮಠ ಉಪಸ್ಥಿತರಿದ್ದರು. ವಿಜಯಶ್ರೀ ಹಿರೇಮಠ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗಳಾದ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ನಿರೂಪಿಸಿ, ವಂದಿಸಿದರು. ಶ್ರೇಯಸ್ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು.

ಸಂಘದ ಸಹಕಾರ್ಯದರ್ಶಿ  ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ಶಾಂತೇಶ ಬ. ಗಾಮನಗಟ್ಟಿ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಡಿ. ಎಂ. ಹಿರೇಮಠ, ರಾಘವೇಂದ್ರ ಪಾಟೀಲ, ಜಿ.ಬಿ. ಹೊಂಬಳ, ಬಿ.ಎಸ್. ಶಿರೋಳ, ರಾಮಚಂದ್ರ ಧೋಂಗಡಿ, ಎಂ. ಬಿ. ಹೆಗ್ಗೇರಿ, ಚನಬಸಪ್ಪ ಅವರಾದಿ, ಎಸ್. ಎಂ. ರಾಚಯ್ಯನವರ ಹಾಗೂ ಹಿರೇಮಠ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.