ಕೊಪ್ಪಳ 19: ವೈಯಕ್ತಿಕ ಕಾಮಗಾರಿಗಳಲ್ಲಿ ಕೆಲಸ ಒದಗಿಸಿ ವಿಳಂಬ ಮಾಡದೆ ನಿಗದಿತ ಸಮಯಕ್ಕೆ ಕೂಲಿ ಪಾವತಿಸುವಂತೆ ಅಧಿಕಾರಿಗಳಿಗೆ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂತರ್ಿ ರವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಬುಧವಾರದಂದು (ಸೆ.18) ಆಯೋಜಿಸಲಾಗಿದ್ದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅನುಷ್ಟಾನ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹಾಗೂ ಜಿಲ್ಲೆಯ ಎಲ್ಲಾ ಕಾರ್ಯನಿವರ್ಾಹಕ ಅಧಿಕಾರಿಗಳು, ಸಹಾಯಕ ನಿದರ್ೇಶಕರು (ಗ್ರಾಉ)ಗಳು, ಜಿಲ್ಲೆಯ ಆಯ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಎಲ್ಲಾ ತಾಂತ್ರಿಕ ಸಿಬ್ಬಂದಿಗಳಿಗೆ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಪ್ರಗತಿ ಪರಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೈಸಗರ್ಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳನ್ನು ಕಡ್ಡಾಯವಾಗಿ ಶೇ. 65 ರಷ್ಟು ಅನುಷ್ಠಾನ ಗೊಳಿಸಬೇಕಾಗಿರುವುದರಿಂದ ಈ ಯೋಜನೆಯಡಿ ಅನುಷ್ಠಾನಗೊಳ್ಳುವ ಬಹುಕಮಾನು ಚೆಕ್ಡ್ಯಾಂ ಕಾಮಗಾರಿಗಳಿಗೆ ಪ್ರಾಮುಖ್ಯತೆ ನೀಡದೇ ಅನುಷ್ಠಾನ ಇಲಾಖೆ ಅಧಿಕಾರಿಗಳು ಮತ್ತು ಕಾರ್ಯನಿವರ್ಾಹಕ ಅಧಿಕಾರಿಗಳವರು ಕೂಲಿ ಆಧಾರಿತ ಕಾಮಗಾರಿಗಳಿಗೆ ಪ್ರಾಮುಖ್ಯತೆ ನೀಡಬೇಕು. ಬಹುಕಮಾನು ಚೆಕ್ಡ್ಯಾಂಗಳನ್ನು ಹಿಂದಿನ ಆಥರ್ಿಕ ವರ್ಷಗಳಲ್ಲಿ ಮಂಜೂರಾದ ಹಾಗೂ ಇನ್ನೂ ಪ್ರಾರಂಭವಾಗದ ಬಹುಕಮಾನು ಚೆಕ್ಡ್ಯಾಂಗಳನ್ನು ಈ ಆಥರ್ಿಕ ವರ್ಷ ಪ್ರಸಕ್ತ ಸಾಲಿನಲ್ಲಿ ನಿರ್ವಹಿಸುವಂತಿಲ್ಲ ಹಾಗೂ ಅಂತಹ ಕಾಮಗಾರಿಗಳನ್ನು ಕೂಡಲೇ ರದ್ದುಪಡಿಸುಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಕಟ್ಟುನಿಟ್ಟಾಗಿ ಸೂಚಿಸಿರುತ್ತಾರೆ. ಆದ್ದರಿಂದ ಜಿಲ್ಲೆಯ ಎಲ್ಲಾ ಅನುಷ್ಠಾನ ಅಧಿಕಾರಿಗಳು ಆಯುಕ್ತರ ನಿದರ್ೇಶನದಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸೂಚಿಸುತ್ತಾ ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಳಲ್ಲಿ ಚೆಕ್-ಡ್ಯಾಂ ಕಾಮಗಾರಿಗಳ ಗುಣಮಟ್ಟ ಸರಿಯಿರುವುದಿಲ್ಲವೆಂದು ವರದಿಯಾಗಿದ್ದು, ಅಂತಹ ಕಾಮಗಾರಿಗಳನ್ನು 3ನೇ ತನಿಖಾ ತಂಡದಿಂದ ತನಿಖೆ ಮಾಡಿಸಿ. ಲೋಪ ದೋಷ ಕಂಡು ಬಂದ ಕಾಮಗಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು. ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಅನುಷ್ಠಾನ ಇಲಾಖೆ ಅಧಿಕಾರಿಗಳಿಗೆ ಬರಗಾಲದ ಹಿನ್ನೆಲೆಯಲ್ಲಿ ಕೂಲಿಕಾರರು ಕೆಲಸ ಅರಸಿ ಬೇರೆಕಡೆ ಗುಳೆ ಹೋಗದಂತೆ ತಡೆದು ಸಮುದಾಯಾಧಾರಿತ ಕಾಮಗಾರಿ ಮತ್ತು ವೈಯಕ್ತಿಕ ಕಾಮಗಾರಿಗಳಲ್ಲಿ ಕೆಲಸ ಒದಗಿಸಿ ನಿಗದಿತ ಸಮಯಕ್ಕೆ ವಿಳಂಬ ಮಾಡದೇ ಕೂಲಿ ಪಾವತಿಸಲು ಕ್ರಮಕೈಗೊಳ್ಳಲು ಸೂಚಿಸಿದರು.
ಈ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಾಗ 60% ರಷ್ಟು ಕೂಲಿ ಕಾಮಗಾರಿಗಳನ್ನು 40% ಸಾಮಗ್ರಿ ಕಾಮಗಾರಿಗಳ ಅನುಪಾತವನ್ನು ಅನುಸರಿಸಲು ಕಟ್ಟುನಿಟ್ಟಾಗಿ ಸೂಚಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಲಿಕಾರರಿಗೆ ತಮ್ಮ ಇಲಾಖೆಯಿಂದ ಅರಣ್ಯ ಪ್ರದೇಶದಲ್ಲಿ ಟ್ರೆಂಚಿಂಗ್ಗಳಲ್ಲಿ ಮತ್ತು ಸಸಿ ನೆಡುವ ಕಾಮಗಾರಿಗಳಲ್ಲಿ ಕೆಲಸ ನೀಡಬೇಕು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಇಲಾಖೆಯಡಿ ತೋಟಗಾರಿಕಾ ಬೆಳೆ ಅಭಿವೃದ್ಧಿ ಕಾಮಗಾರಿಗಳನ್ನು ಗುತರ್ಿಸಿ ಅನುಷ್ಠಾನಗೊಳಿಸಬೇಕು. ಜಂಟಿ ಕೃಷಿ ನಿದರ್ೇಶಕರಿಗೆ ಜಿಲ್ಲೆಯ ಕೂಲಿಕಾರರಿಗೆ ಇಲಾಖೆಯಡಿ ಬದು ನಿಮರ್ಾಣ ಕಾಮಗಾರಿಗಳಲ್ಲಿ ಕೆಲಸ ನೀಡಿ ಉತ್ತಮ ಮಾನವ ದಿನಗಳನ್ನು ಸೃಜಿಸಲು ಕ್ರಮವಹಿಸುವಂತೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಮಲಬಾರ್ ಪ್ಲಾಂಟೇಷನ್, ಹಿಪ್ಪು ನೇರಳೆ ನಾಟಿ ಕಾಮಗಾರಿಗಳಲ್ಲಿ ಕೆಲಸ ಒದಿಸುವಂತೆ ಕ್ರಮವಹಿಸುವಂತೆ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂತರ್ಿ ರವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಉಪ ಕಾರ್ಯದಶರ್ಿ ಎನ್.ಕೆ. ತೊರವಿ, ಯೋಜನಾ ನಿದರ್ೇಶಕ ರವಿ ಬಸರಿಹಳ್ಳಿ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಅನುಷ್ಠಾನ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತಿಗಳ ಕಾರ್ಯನಿವರ್ಾಹಕ ಅಧಿಕಾರಿಗಳು, ಸಹಾಯಕ ನಿದರ್ೇಶಕರು (ಗ್ರಾಉ), ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸಂಯೋಜಕರು, ಸಾಮಾಜಿಕ ಪರಿಶೋಧಕರು ಮತ್ತು ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.