ಧರ್ಮ ಪಾಲನೆಯಿಂದ ಶಾಂತಿ ಲಭ್ಯ: ಶ್ರೀಶೈಲಶ್ರೀ

Peace can be achieved through religious observance: Srishailashri

ಮಾಂಜರಿ 28: ನಾವೆಲ್ಲರೂ ಧರ್ಮವನ್ನು ಪಾಲಿಸುವ ಕೆಲಸ ಮಾಡಿದರೆ ಇಡೀ ದೇಶದಲ್ಲಿ ಶಾಂತಿ ಲಭಿಸಲಿದೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳು ಹಾಗೂ ಯಡೂರಿನ ಕಾಡಸಿದ್ದೇಶ್ವರ ಸಂಸ್ಥಾನ ಮಠ ಮತ್ತು ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿ ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ತಿಳಿಸಿದರು. 

ಅವರು ಮಂಗಳವಾರ ದಿ. 27ರಂದು ಸಾಯಂಕಾಲ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಕಾಡಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಅಮಾವಾಸ್ಯೆಯ ಪ್ರಯುಕ್ತ ಆಯೋಜಿಸಲಾದ ಧರ್ಮ ಸಭೆ ಮತ್ತು ಅಧ್ಯಾತ್ಮ ಚಿಂತನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. 

 ಮುಖ್ಯ ಅತಿಥಿಯಾಗಿ ಆಗಮಿಸಿದ ಮಹಾಂತೇಶ ಕವಟಗಿಮಠ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಶರತ್ ಕವಟಿಗಿಮಠ ಯಡೂರ ದೇವಸ್ಥಾನದ ಉತ್ತರ ಅಧಿಕಾರಿ ರೇಣುಕಾದೇವರು ಉಪ್ಪರಗಿ ಹಿರೇಮಠದ ಉತ್ತರಾಧಿಕಾರಿ ಅಭಿಷೇಕ ದೇವರು ಹಾಜರಿದ್ದರು  

ಇಂದು ಧರ್ಮದ ಹೆಸರಿನಲ್ಲಿ ಆತಂಕದ ವಾತಾವರಣ ಸೃಷ್ಟಿ ಆಗುತ್ತಿದೆ. ಭಾವನಾತ್ಮಕವಾಗಿ ಕೆರಳಿಸಲಾಗುತ್ತಿದೆ. ನೈತಿಕತೆ ಅಧಃಪತನವಾಗಿದೆ. ಜಗತ್ತಿನ ಎಲ್ಲ ಕಡೆ ಆತಂಕ ಇದೆ. ಆದರೆ, ಅಂದು ದಯವೇ ಧರ್ಮದ ಮೂಲವಯ್ಯ ಎಂದು ಶರಣರ ನುಡಿಯ ಅನುಸರಣೆಯಿಂದ ಮಾತ್ರ ಆತಂಕ ಪರಿಸ್ಥಿತಿಗೆ ಉತ್ತರ ಕಂಡುಕೊಳ್ಳಬಹುದು. ಶರಣರು ಎಲ್ಲಾ ವರ್ಗದವರಿಗೂ ಒಳ್ಳೆಯದನ್ನೇ ಬಯಸಿದ್ದಾರೆ. ಅಂಧಕಾರ, ಮೌಢ್ಯವೇ ತುಂಬಿದ್ದ 12ನೇ ಶತಮಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಹಬಾಳ್ವೆ, ಜಾತಿ ರಹಿತ ಸಮಾಜ ನಿರ್ಮಿಸಲು ಶರಣರು ಕ್ರಾಂತಿ ಮಾಡಿದರು. ಇಂದಿನ ದಿನದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಬರುವ ಮುನ್ನವೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಬಸವಣ್ಣವನವರು ಕೊಟ್ಟಿದ್ದರು. ಆ ಕಾಲದಲ್ಲಿಯೇ ಮಹಿಳೆಯರಿಗೂ ಸ್ವಾತಂತ್ರ್ಯ ದೊರೆತದ್ದಾಗಿ ಶ್ರೀಶೈಲ ಪೀಠದ ಜಗದ್ಗುರುಗಳು ಹೇಳಿದರು. 

ಮಹಾಂತೇಶ್ ಕವಟಿಗಿಮಠ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಶರತ್ ಕವಟಿಗಿಮಠ ಮಾತನಾಡಿ ಈಗ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಆದರೂ ಜಗತ್ತಿನಲ್ಲಿ ಶಾಂತಿ  ಸ್ಥಾಪನೆ ಸಾಧ್ಯವಾಗಿಲ್ಲ, ಅಸಮಾಧಾನ, ಹಿಂಸೆ, ಅಸಹಿಷ್ಣುತೆ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಬಸವ ತತ್ವದಲ್ಲಿದೆ. 12ನೇ ಶತಮಾನದ ಬಸವಣ್ಣನವರ ಕಾಯಕ ತತ್ವವನ್ನು ಇಂದಿನ ಮಠಾಧೀಶರುಗಳು ಅನುಷ್ಠಾನಮಾಡುತ್ತ ಸಮಾಜವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಮಠಗಳು, ಧಾರ್ಮಿಕಸಂಸ್ಥೆಗಳು ಶಿಕ್ಷಣ ಸಂಸ್ಥೆ ತೆರೆಯದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಅವಲೋಕಿಸಬೇಕು ಎಂದರು. 

ಕಾಯಕವಲ್ಲ ಕಾಯುವುದು ಕೆಲಸ. ಸರ್ಕಾರಕ್ಕೆ ಸರಿ ಸಮನಾಗಿ ಅದಕ್ಕಿಂತಲೂ ಮಿಗಿಲಾಗಿ ಮಠಗಳು ಅಕ್ಷರ ಅನ್ನ ಕೊಡುವ ಕೆಲಸ ಮಾಡುತ್ತಿವೆ. 12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಕಾಯಕದ ಮಹತ್ವವನ್ನು ಸಾರಿದರು. ಆದರೆ ಇವತ್ತು ಕಾಯುವುದೇ ಕೈಲಾಸವಾಗಿದೆ.  

 ಡಾ ಚನ್ನ ಸಿದ್ದರಾಮಯ್ಯ ಪಂಡಿತಾರಾಜ್ಯ ಶಿವಾಚಾರ್ಯ  

 ಶ್ರೀಶೈಲ್ ಜಗದ್ಗುರುಗಳು  

ಚಂದೂರ ಗ್ರಾಮದ ಬಾಳಗೌಡ ಪಾಟೀಲ್ ಮಾತನಾಡುತ್ತ ವೀರಶೈವ ಲಿಂಗಾಯತ ಸಮಾಜ ಒಟ್ಟಾಗಿದ್ದರೆ ರಾಜ್ಯಕ್ಕೆ ನೆರಳಾಗುವ ಶಕ್ತಿ ಇದೆ. ಆದರೆ, ಸಮಾಜದ ಒಳ್ಳೆಯತನ ಶಾಪವಾಗಿ ಪರಿಣಮಿಸಿದೆ. ಉತ್ತಮ ಶಿಕ್ಷಣ ದೊರೆತರೂ ಸಂಸ್ಕಾರ ಕೊಡುವಲ್ಲಿ ಎಡವಿದ್ದೇವೆ. ಆಧುನಿಕ ಯುಗದಲ್ಲಿ ಕುಟುಂಬದ ವ್ಯವಸ್ಥೆ ಹೋಗಿದೆ. ವ್ಯಾಟ್ಸಾಪ್ ವಿವಿ. ಸ್ಮಾರ್ಟ್‌ ಫೋನ್ ನಿಂದ ನಮ್ಮನ್ನೇ ನಾವು ಮರೆತಿದ್ದೇವೆ. ಆಧುನಿಕ ತಂತ್ರಜ್ಞಾನದ ಭರಾಟೆಯಿಂದ ನಮ್ಮಪರಂಪರೆ ಸಂಸ್ಕೃತಿ ಮರೆಯುತ್ತಿದ್ದೇವೆ. ಮನುಷ್ಯತ್ವ ಕಳೆದುಕೊಳ್ಳುತ್ತಿದೇವೆ ಎಂದು ಅವರು ಹೇಳಿದರು. 

ಲಿಂಗಾಯತ ಸಮಾಜದ ಮುಖಂಡರು ವಿವಿಧ ಸಂಸ್ಥೆಯ ಪದಾಧಿಕಾರಿಗಳು ಮತ್ತು ಯುವಕರು ಭಕ್ತರು ಹಾಜರಿದ್ದರು.