ಬೆಳಗಾವಿ, ಜುಲೈ 9: ನಗರದಲ್ಲಿ ಕೊರೊನಾ ಸೋಂಕು ತಡೆ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ಅಂಗಡಿಗಳು ಹಾಗೂ ಮಾಸ್ಕ್ ಧರಸದೆ ಓಡಾಡುವ ಜನರಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಗುರುವಾರ ದಂಡ ವಿಧಿಸಿದ್ದಾರೆ.
ಗುರುವಾರ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಶಿವಾನಂದ ಭೋಸಲೆ ಹಾಗೂ ತಂಡದವರು ಫೋಟರ್್ ರಸ್ತೆ. ಪಾಟೀಲ್ ಗಲ್ಲಿ, ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಬರುವ ವಿವಿಧ ಅಂಗಡಿ ಮಾಲೀಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ವ್ಯವಹಾರ ನಡೆಸುತ್ತಿರುವ ಮಾಲೀಕರಿಗೆ 200 ರೂಪಾಯಿ ಯಿಂದ 500 ರೂ. ವರೆಗೆ ದಂಡ ವಿಧಿಸಲಾಗಿದೆ. ಹಳೆಯ ಪಿ.ಬಿ ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಓಡಾಡುವರಿಗೆ ಪಾಲಿಕೆಯ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಮಹಾನಗರ ಪಾಲಿಕೆಯ ಸಿಬ್ಬಂದಿಗಳಾದ ವಿಜಯ್ ಜಾಧವ, ಮಹದೇವ್ ಕಾಂಬಳೆ, ಎಸ್ ರಂಗಯ್ಯ ಈ ಸಂದರ್ಭದಲ್ಲಿ ಹಾಜರಿದ್ದರು.