ಬೆಳಗಾವಿ, 22: ರಾಜ್ಯದ ಹದಿನೇಳು ಜಿಲ್ಲೆಗಳಲ್ಲಿ ಪ್ರವಾಹದಿಂದ ಆಗಿರುವ ಹಾನಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎಲ್ಲ ಸಚಿವರು ವರದಿ ನೀಡಲಿದ್ದು, ಇದನ್ನು ಆಧರಿಸಿ ಸಕರ್ಾರ ಇನ್ನೊಂದೆರಡು ದಿನಗಳಲ್ಲಿ ಸೂಕ್ತ ನಿಧರ್ಾರ ಕೈಗೊಳ್ಳಲಿದೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಗೋಕಾಕ ಪಟ್ಟಣದಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ(ಆ.22) ಭೇಟಿ ನೀಡಿದ ಬಳಿಕ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದರು.
ನಾಳೆ ಅಥವಾ ನಾಡಿದ್ದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಾವು ಎಲ್ಲ ಸಚಿವರು ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ವರದಿ ನೀಡಲಿದ್ದೇವೆ. ಸಮಗ್ರ ವರದಿ ಆಧರಿಸಿ ಸಕರ್ಾರ ಇನ್ನೆರಡು ದಿನಗಳಲ್ಲಿ ಸಂತ್ರಸ್ತರ ಪುನರ್ವಸತಿಗಾಗಿ ಮಹತ್ವದ ನಿರ್ಣಯ ಕೈಗೊಳ್ಳಲಿದೆ ಎಂದರು.
ಸಂತ್ರಸ್ತರ ಬದುಕು ಕಟ್ಟಿಕೊಡಲು ಸಕರ್ಾರ ಬದ್ಧವಾಗಿದೆ. ಮಣ್ಣಿನಿಂದ ಕಟ್ಟಿದ ಬಹುತೇಕ ಮನೆಗಳು ನಾಶವಾಗಿವೆ. ಸದ್ಯಕ್ಕೆ ಸಕರ್ಾರ ತುತರ್ಾಗಿ ಹತ್ತು ಸಾವಿರ ಪರಿಹಾರ ಹಾಗೂ ಮನೆ ಕಳೆದುಕೊಂಡ ಜನರಿಗೆ ಪರಿಹಾರ ನಿಗದಿಗೊಳಿಸಲಾಗಿತ್ತು.
ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಆಗಿರುವ ಹಾನಿಯನ್ನು ಗಮನಿಸಲಾಗಿದ್ದು, ಈ ಬಗ್ಗೆ ಸಕರ್ಾರಕ್ಕೆ ವರದಿ ಸಲ್ಲಿಸಲಾಗುವುದು.
ಬೆಳೆಹಾನಿ ಸಮೀಕ್ಷೆ ನಡೆಸುವುದು ಸ್ವಲ್ಪಮಟ್ಟಿಗೆ ತಡವಾಗಲಿದೆ. ಬೆಳೆಹಾನಿ ಸೇರಿದಂತೆ ಎಲ್ಲ ಬಗೆಯ ಪರಿಹಾರದ ಕುರಿತು ಹಾಗೂ ಶಾಶ್ವತ ಸ್ಥಳಾಂತರ ಕುರಿತು ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚಚರ್ಿಸಿದ ಬಳಿಕ ಸೂಕ್ತ ನಿಧರ್ಾರ ತೆಗೆದುಕೊಳ್ಳಲಾಗುವುದು.
ಶಾಶ್ವತ ಸ್ಥಳಾಂತರಕ್ಕೆ ಒತ್ತಾಯ:
ಆಗಾಗ ಪ್ರವಾಹದಿಂದ ಬಾಧಿತಗೊಳ್ಳುವ ಗ್ರಾಮಗಳು ಮತ್ತು ಗೋಕಾಕ ಪಟ್ಟಣದ ಕೆಲವು ಪ್ರದೇಶಗಳನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು ಎಂದು ಸ್ಥಳೀಯ ಮುಖಂಡರು ಸಚಿವರನ್ನು ಒತ್ತಾಯಿಸಿದರು.
ಲೋಳಸೂರ ಸೇತುವೆಯಿಂದ ರಸ್ತೆ ಎತ್ತರ ಹೆಚ್ಚಿಸಿದ್ದರಿಂದ ನೀರು ಪಟ್ಟಣಕ್ಕೆ ನುಗ್ಗುತ್ತಿದೆ. ಆದ್ದರಿಂದ ಸೇತುವೆಯ ರಸ್ತೆಯನ್ನು ವೈಜ್ಞಾನಿಕವಾಗಿ ನಿಮರ್ಿಸಬೇಕೆಂದು ಸಲಹೆ ನೀಡಿದರು.
ಸಂಪೂರ್ಣ ಮನೆ ಕಳೆದುಕೊಂಡಿರುವವರಿಗೆ 10 ಸಾವಿರ ಬದಲು 25 ಸಾವಿರ ಪರಿಹಾರ ನೀಡಬೇಕು. ಸಣ್ಣಪುಟ್ಟ ವ್ಯಾಪಾರಸ್ಥರಿಗೂ ನಷ್ಟ ಭರಿಸಲು ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡರು. ನದಿಪಾತ್ರದಲ್ಲಿ ಅತಿಕ್ರಮಣ ತೆರವುಗೊಳಿಸಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಪ್ರವಾಹದಲ್ಲಿ ಜಾನುವಾರುಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವುಗಳ ಮಾಲೀಕರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದರು.
ಮನೆಹಾನಿ ಸಮೀಕ್ಷೆ ಶೀಘ್ರವಾಗಿ ಪೂರ್ಣಗೊಳಿಸಿ ಪಟ್ಟಿ ಸಿದ್ಧಪಡಿಸಬೇಕು. ಪಟ್ಟಿ ಬಂದ ತಕ್ಷಣ ಪರಿಹಾರ, ಮನೆ ಬಾಡಿಗೆ ಮತ್ತು ದುರಸ್ತಿಗೆ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಕೂಡಲೇ ಮನೆಗಳ ಹಾನಿಯ ಸಮೀಕ್ಷೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಅದೇ ರೀತಿ ಇನ್ನೆರಡು ದಿನಗಳಲ್ಲಿ ಪ್ರವಾಹಬಾಧಿತ ಪ್ರತಿಯೊಂದು ಗ್ರಾಮವನ್ನು ಸ್ವಚ್ಛತೆ ಕೈಗೊಳ್ಳಬೇಕು.
ಗೋಕಾಕ ತಾಲ್ಲೂಕಿನಲ್ಲಿ ಸಂಪೂರ್ಣ ಮುಳುಗಡೆಯಾಗಿರುವ 10 ಹಾಗೂ ಭಾಗಶಃ ಮುಳುಗಡೆಯಾಗಿರುವ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ನಿರಂತರ ಭೇಟಿ ನೀಡಿ ಪರಿಶೀಲಿಸಬೇಕು.ರೇಷನ್ ಕಿಟ್ ಸಿದ್ಧವಾಗಿದ್ದು, ಪರಿಹಾರ ಕೇಂದ್ರದಿಂದ ಮನೆಗೆ ತೆರಳುವ ಪ್ರತಿ ಕುಟುಂಬಕ್ಕೂ ಕಡ್ಡಾಯವಾಗಿ ರೇಷನ್ ಕಿಟ್ ನೀಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು, ಗ್ರಾಮಗಳ ಸ್ವಚ್ಛತೆಗೆ ಪ್ರತಿ ಗ್ರಾಮ ಪಂಚಾಯತಿ ಗೆ ತಲಾ ಒಂದು ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಅದೇ ರೀತಿ ತಾಲ್ಲೂಕು ಪಂಚಾಯತಿಗೂ ಹೆಚ್ಚುವರಿ ಹಣ ನೀಡಲಾಗಿದೆ ಎಂದು ವಿವರಿಸಿದರು.
ವಿಧಾನಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಮನೆಗಳಿಗೆ ತೆರಳಲಿರುವ ಸಂತ್ರಸ್ತರಿಗೆ ರೇಷನ್ ಕಿಟ್ ವಿತರಿಸಿದರು. ಇದಕ್ಕೂ ಮುಂಚೆ ಸಚಿವ ಲಕ್ಷ್ಮಣ ಸವದಿ ಅವರು ಪ್ರವಾಹದಿಂದ ಹಾನಿಗೊಳಗಾದ ಗೋಕಾಕ ಪಟ್ಟಣದ ಕುಂಬಾರ ನಾಕಾ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.