ಬೆಂಗಳೂರು : ರಶ್ಮಿ ಎಸ್ (ಸಾಯಿ ರಶ್ಮಿ) ನಿರ್ದೇಶನದ ‘ಸುಮಾ ದಿ ಫ್ಲವರ್’ ಚಿತ್ರಕ್ಕೆ ಮುಂಬೈನಲ್ಲಿ ನಡೆದ ಪ್ರತಿಷ್ಠಿತ "ದಾದಾ ಸಾಹೇಬ್ ಫಾಲ್ಕೆ ಫಿಲಂ ಪುರಸ್ಕಾರ್ ಆಫ್ ಇಂಡಿಯಾ" ದಲ್ಲಿ ಪ್ರಶಸ್ತಿ ಲಭಿಸಿದೆ.
ಮಹಿಳಾ ಕಥಾಹಂದರ ಹೊಂದಿದ್ದು ನಮ್ಮ ನಡುವೆ ಇರುವ ಹುಡುಗಿಯೊಬ್ಬಳ ಅಂತರಂಗದ ಕಥೆಯಾಗಿದ್ದು, ಅತೀ ಸೂಕ್ಷ್ಮ ವಿಷಯವನ್ನು ಈ ಚಿತ್ರವು ಒಳಗೊಂಡಿದೆ. ಪ್ರತಿಯೊಬ್ಬ ಭಾರತೀಯ ಮಹಿಳೆಯರು ತಪ್ಪದೇ ನೋಡಲೇ ಬೇಕಾದ ಚಿತ್ರ ಇದಾಗಿದೆ. ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಯುವ ಮಹಿಳಾ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಶ್ಮಿ ಎಸ್ (ಸಾಯಿ ರಶ್ಮಿ) ಅವರು ಈ ಹಿಂದೆ ಶ್ರೀ ಕಬ್ಬಾಳಮ್ಮನ ಮಹಿಮೆ, ಮನೆ, ಬ್ಯಾಂಕ್ಲೋನ್, ಸುಳಿ ಎಂಬ ವಿಭಿನ್ನ ಕಥೆಯನ್ನು ಸಿನಿಮಾಗಳ ನಂತರ ‘ಸುಮಾ ದಿ ಫ್ಲವರ್’ ಚಿತ್ರಕ್ಕೆ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ.
ಮುಖ್ಯ ಪಾತ್ರದಲ್ಲಿ ಮಾನ್ಯತಾ ನಾಯ್ಡು, ಪ್ರದೀಪ್ ಗೌಡ, ಅಭಿನಯಿಸಿದ್ದು ಉಳಿದಂತೆ ಜೋ ಸೈಮನ್, ಬಲರಾಜವಾಡಿ, ವಿಜಯಲಕ್ಷ್ಮಿ ಉಪಾಧ್ಯಾಯ, ಕಾವ್ಯ ಪ್ರಕಾಶ್, ಪವಿತ್ರ, ಮುರಳೀಧರ್ ಡಿ ಆರ್, ಅವಿನಾಶ್ ಗಂಜಿಹಾಳ, ಸಿದ್ದು ಮಂಡ್ಯ, ಭೈರವಿ, ಹರಿಹರನ್ ಬಿ ಪಿ, ಶಿವಕುಮಾರ್ ಆರಾಧ್ಯ, ವಿಶೇಷ ಪಾತ್ರದಲ್ಲಿ ಡಾ.ವಿ ನಾಗೇಂದ್ರ್ರಸಾದ್ ಅಭಿನಯಿಸಿದ್ದಾರೆ. ದೇವೂ ಮತ್ತು ಗಗನ್ ಆರ್ ಛಾಯಾಗ್ರಾಹಣವಿದೆ. ವೇದಾಂತ್ ಅತಿಶಯ್ ಜೈನ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಯೋಗಶ್ರೀ ಹಿನ್ನೆಲೆಗಾಯನ, ಮುತ್ತುರಾಜು.ಟಿ ಸಂಕಲನ, ಕಾರ್ತಿಕ್ ಸುಧನ್, ಡಾ ಪ್ರಭು ಗಂಜಿಹಾಳ , ಡಾ ವೀರೇಶ್ ಹಂಡಿಗಿ ಪತ್ರಿಕಾ ಸಂಪರ್ಕ ಚಿತ್ರಕ್ಕಿದ್ದು, ಓಂ ಸಾಯಿ ಸಿನಿಮಾಸ್ ಸಂಸ್ಥೆಯ ಜೊತೆಗೆ ರಂಗಸ್ವಾಮಿ ಟಿ (ರವಿ) ಅವರು ಸಹ ನಿರ್ಮಾಪಕರಾಗಿದ್ದಾರೆ. ಪ್ರಶಸ್ತಿಯ ಖುಷಿಯಲ್ಲಿರುವ ರಶ್ಮಿ ಎಸ್ ಮತ್ತೊಂದು ಹೊಸ ಚಿತ್ರವನ್ನು ಸಧ್ಯದಲ್ಲೇ ನಿರ್ದೇಸಿಸಲು ಅಣಿಯಾಗಿದ್ದಾರೆ.
ಡಾ.ಪ್ರಭು ಗಂಜಿಹಾಳ
ಮೊ: 9448775346