ಲೋಕದರ್ಶನವರದಿ
ಮಹಾಲಿಂಗಪುರ : ಎಸ್ ಎಸ್ ಎಲ್ ಸಿ ವಿದ್ಯಾಥರ್ಿಗಳ ಫಲಿತಾಂಶ ಸುಧಾರಣೆಗಾಗಿ ಸರಕಾರ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಅಂತಹ ಕಾರ್ಯಕ್ರಮಗಳಲ್ಲಿ ಪಿಕ್ನಿಕ್ ಫಜಲ್ ಬಹಳ ಉಪಯುಕ್ತ ಕಾರ್ಯಕ್ರಮ. ವಿದ್ಯಾಥರ್ಿಗಳು ಇದರ ಸದುಪಯೋಗ ಮಾಡಿಕೊಂಡು ಯಶಸ್ಸುಗಳಿಸಬೇಕೆಂದು ಅಕ್ಕಿಮರಡಿಯ ಆರ್ ಎಂ ಎಸ್ ಎ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ನೋಡಲ್ ಎಂ. ಎಸ್. ಸುತಾರ ಹೇಳಿದರು.
ನಗರದ ಸಮೀಪದ ರನ್ನಬೆಳಗಲಿಯ ಮೊರಾಜರ್ಿ ದೇಸಾಯಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ ಎಸ್ ಎಲ್ ಸಿ ವಿದ್ಯಾಥರ್ಿಗಳ ಫಲಿತಾಂಶ ಸುಧಾರಣೆಗಾಗಿ ಪಿಕ್ನಿಕ್ ಫಜಲ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೊರಾಜರ್ಿ ದೇಸಾಯಿ ಪ್ರೌಢ ಶಾಲೆಯ ಪ್ರಾಂಶುಪಾಲೆ ಕು. ಬಿ. ಎ. ಹೂಗಾರ ಮಾತನಾಡಿ ವಿದ್ಯಾಥರ್ಿ ದೆಸೆಯಲ್ಲಿ ಸಮಯ ಪ್ರಜ್ಞೆ ಬಹಳ ಮುಖ್ಯ. ವಿದ್ಯಾಥರ್ಿಗಳು ಸಮಯ ಪ್ರಜ್ಞೆಯಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಉತ್ತಮ ಫಲಿತಾಂಶದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.
ನೋಡಲ್ ಬಿವಿವಿಎಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ. ಎಸ್. ಗಾಣಿಗೇರ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬೆಳಗಲಿ ವಲಯದ ಸರಕಾರಿ ಪ್ರೌಢ ಶಾಲೆ, ಬಿವಿವಿಎಸ್ ಪ್ರೌಢ ಶಾಲೆ, ಜ್ಞಾನ ಗುರುಕುಲ ಬಸವ ಪ್ರೌಢ ಶಾಲೆ , ಮೊರಾಜರ್ಿ ದೇಸಾಯಿ ಪ್ರೌಢ ಶಾಲೆ, ನಾಗರಾಳದ ಸರಕಾರಿ ಪ್ರೌಢ ಶಾಲೆಯ ಒಟ್ಟು 300 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗಿಯಾಗಿದ್ದರು.
ಬಿವಿವಿಎಸ್ ಪ್ರೌಢ ಶಾಲೆಯ ಶಿಕ್ಷಕ ಮಹಾದೇವ ಕುಲಗೋಡ ಗಣಿತ, ಜ್ಞಾನ ಗುರುಕುಲ ಬಸವ ಪ್ರೌಢ ಶಾಲೆಯ ಶಿಕ್ಷಕಿ ಪ್ರೀತಿ ಶಿಂಧೆ ಇಂಗ್ಲೀಷ್, ಮೊರಾಜರ್ಿ ದೇಸಾಯಿ ಪ್ರೌಢ ಶಾಲೆಯ ಶಿಕ್ಷಕ ಭರತ್ ಈ ಸಮಾಜ ವಿಜ್ಞಾನ, ಬಿ. ಎಸ್. ಪರಸನ್ನವರ ಹಿಂದಿ, ನಾಗರಾಳ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಪಿ. ಎನ್. ಜೋಶಿ ಕನ್ನಡ, ಶಿಕ್ಷಕಿ ಎಂ. ಆರ್. ಕುಲಕಣರ್ಿ ವಿಜ್ಞಾನ, ಸೋರಗಾಂವ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಆರ್. ಎಂ. ಡೊಂಬರ ಇಂಗ್ಲೀಷ್ ವಿಷಯಗಳ ಪ್ರಶ್ನೆ ಪತ್ರಿಕೆಗಳ ನೂತನ ಮಾದರಿಯ ಬಗ್ಗೆ ವಿಶ್ಲೇಷಿಸಿದರು. ಜ್ಞಾನ ಗುರುಕುಲ ಬಸವ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮಣ ಲೋಕುರಿ ಇದ್ದರು.
ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆರ್. ಎಚ್. ಕಂಬಾರ ನಾವು ಹೋಗಿ ಬತರ್ಿವಿ ನಮಸ್ಕಾರ, ನಿಮ್ಮ ಪಿಕ್ನಿಕ್ ಫಜಲ್ಗೆ ಜಯಕಾರ ಎಂಬ ಸ್ವರಚಿತ ಜಯಕಾರ ಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಶಿಕ್ಷಕಿ ಜೆ. ಎಸ್. ಮಾಳಗಿ ಪ್ರಾಥರ್ಿಸಿ, ಶಿಕ್ಷಕ ಕೆ. ಎ ಧಡೂತಿ ನಿರೂಪಿಸಿದರು.