ಮುಂಗಾರು ಹಂಗಾಮಿನ ಪೂರ್ವ ಸಿದ್ಧತಾ ಸಭೆ

Pre-monsoon season preparedness meeting- Belgavi

ಬೆಳಗಾವಿ 08:ಪ್ರಸ್ತುತ ವರ್ಷದ ಮುಂಗಾರ ಹಂಗಾಮ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ರೈತರಿಗೆ ಅವಶ್ಯಕವಿರುವ ಬೀಜ ರಸಗೊಬ್ಬರ ಹಾಗೂ ಪೀಡೆನಾಶಕಗಳ ಸಮರ​‍್ಕ ಪೂರೈಕೆಗಾಗಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ದಿ.              2ರಂದು ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಬೆಳಗಾವಿ ತಾಲೂಕಿನ ಎಲ್ಲಾ ಪರಿಕರ ಪೂರೈಕೆದಾರರ ಸಭೆಯನ್ನು ಕರೆಯಲಾಗಿತ್ತು.  

ಸುಮಾರು 70ಕ್ಕಿಂತ ಅಧಿಕ ಮಾರಾಟಗಾರರು ಪಾಲ್ಗೊಂಡ ಈ ಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಬೆಳಗಾವಿಯ ಉಪ ಕೃಷಿ ನಿರ್ದೇಶಕ ಸಲೀಂ ಸಂಗತ್ರಾಸ ಇವರು  ಎಲ್ಲಾ ಮಾರಾಟಗಾರರಿಗೆ ರೈತರಿಗೆ ಅಗತ್ಯವಿರುವ  ಪರಿಕರಗಳನ್ನು ಮುಂಚಿತವಾಗಿಯೇ ಸಂಗ್ರಹಿಸಿ ಸರ್ಕಾರ ನಿಗಧಿಪಡಿಸಿದ ದರದಲ್ಲಿ ಮಾತ್ರ ರೈತರಿಗೆ ಪೂರೈಕೆ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.  

ಸಹಾಯಕ ಕೃಷಿ ನಿರ್ದೇಶಕ (ವಿಷಯ ತಜ್ಞರು) ಎಮ್‌.ಎಸ್‌.ಪಟಗುಂದಿ ಇವರು ಜೈವಿಕ  ಮತ್ತು ಸಾವಯವ ಪರಿಕರಗಳನ್ನು ಮಾರಾಟ ಮಾಡುವ  ಮೊದಲು ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ನಿರ್ವಹಿಸುವಂತೆ ಸೂಚಿಸಿದರು.  ರಸಗೊಬ್ಬರ ಮಾರಾಟಕ್ಕೆ ಸಂಬಂಧಿಸಿದಿಂತೆ  ದರಪಟ್ಟಿ ಫಲಕ ಪ್ರದರ್ಶನ, ಪರವಾನಿಗೆ ಪತ್ರಗಳ ಪ್ರದರ್ಶನ ಹಾಗೂ ನಿಗದಿತ ದಾಖಲಾತಿಗಳ ನಿರ್ವಹಣೆ ಕುರಿತು ಸಭೆಯಲ್ಲಿ ಸೂಕ್ತ ನಿರ್ದೇಶನ ನೀಡಲಾಯಿತು. 

ಬಿ.ಟಿ. ಹತ್ತಿ ಬೀಜ ಮಾರಾಟದಲ್ಲಿ ಯಾವುದೇ ಅವ್ಯವಹಾರ ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಲ್ಲಾ ಮಾರಾಟಗಾರಿಗೆ ಎಚ್ಚರಿಕೆ ನೀಡಿದರು. 

ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸೂಕ್ತ ಪ್ರಮಾಣದಲ್ಲಿ ಸಂಗ್ರಹಿಸಿ ಲಭ್ಯವಾಗುವಂತೆ  ಮಾಡಲು ಇಲಾಖೆಯಿಂದ ಕ್ರಮಕೈಗೊಳ್ಳಲಾಗಿದ್ದು, ರೈತರು ವದಂತಿಗಳಿಗೆ ಕಿವಿಗೊಡದಂತೆ ಇರಲು ತಿಳಿಸಿದರು.