ಕಾಗವಾಡ 28: ರಾಜ್ಯಾದ್ಯಂತ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ಮಂಗಳವಾರ ದಿ. 27 ರಿಂದ ಪ್ರಾರಂಭಗೊಂಡ ಪ್ರತಿಭಟನೆಯಲ್ಲಿ ತಾಲೂಕಿನ ಉಗಾರ ಖುರ್ದ ಪುರಸಭೆ ಮತ್ತು ಕಾಗವಾಡ, ಐನಾಪೂರ, ಶೇಡಬಾಳ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರು ದಿನನಿತ್ಯ ಕೆಲಸ ಕಾರ್ಯಗಳನ್ನು ಬಹಿಷ್ಕರಿಸಿ, ಪಟ್ಟಣ ಪಟ್ಟಣ ಪಂಚಾಯಿತಿ ಕಾರ್ಯಾಲಯ ಎದುರು ರಾಜ್ಯ ಪೌರಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದು, ಪ್ರತಿಭಟನೆ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ.
ಪೌರ ಕಾರ್ಮಿಕರ ಬೇಡಿಕೆಗಳಾದ ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಜ್ಯೋತಿ ಸಂಜೀವಿನಿ ಕೆಜಿಐಡಿ ಸೇರಿದಂತೆ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ನೀಡಬೇಕು, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಚಾಲಕರು, ಲೋಡರ್ಸ್, ಕ್ಲೀನರ್ಸ್, ಗಾರ್ಡನರ್, ಸ್ಯಾನಿಟರಿ ಸೂಪರ್ವೈರ್‌ಗಳನ್ನು ಯುಜಿಡಿ ಸಹಾಯಕರೆಂದು ಪರಿಗಣಿಸಬೇಕು. ದಿನಗೂಲಿ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. ಎಲ್ಲಾ ನೌಕರರಿಗೆ ಎಸ್‌ಎಸ್‌ಸಿ ಮುಕ್ತ ನಿಧಿಯಿಂದ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವರಿಗೆ ಪ್ರತಿಭಟನೆ ಮುಂದುವೆರೆಸುವುದಾಗಿ ಕಾಗವಾಡದಲ್ಲಿ ಪ್ರತಿಭಟನೆ ನಿರತ ಪೌರ ನೌಕರರು ತಿಳಿಸಿದ್ದಾರೆ.
ಈ ಸಮಯದಲ್ಲಿ ಪೌರ ನೌಕರ ಸಂಘದ ಅಧ್ಯಕ್ಷ ಈರಗೌಡ ಪಾಟೀಲ, ಉಪಾಧ್ಯಕ್ಷ ದೀಲೀಪ ಕಾಂಬಳೆ, ಸಾಯಿಲ್ ಪಾಟೀಲ, ಸುಭಾಶ ತುಪಳೆ, ರಮೇಶ ಪಾಟೀಲ, ಮಧುಕರ ಕಾಂಬಳೆ, ಶ್ರೀಮಂತ ಕಾಂಬಳೆ, ಆಕಾಶ ಧೋಡಾರೆ, ಗಣೇಶ ಕಾಂಬಳೆ, ಭರತೇಶ ಗಣಿ, ನಿಲೇಶ ಪಾಟೀಲ, ಮಹಮ್ಮದ ಜಮಾದಾರ, ದಯಾನಂದ ಕಾಂಬಳೆ, ರಾಕೇಶ ಬೆಕ್ಕೇರಿ, ಶೋಭಾ ಧೋಡಾರೆ, ನೀಲಬಾಯಿ ಘೋರಡೆ, ಮನಿಷಾ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.