ಶೀಘ್ರದಲ್ಲಿ ರೈತರ ಸಾಲ ವಿತರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಸಂಬರಗಿ 18: ಅರಳಿಹಟ್ಟಿ ಗ್ರಾಮದ ಪಿ.ಕೆ.ಪಿ.ಎಸ್ ಸಹಕಾರಿ ಸಂಘದ ಸದಸ್ಯರಿಗೆ ಶೀಘ್ರದಲ್ಲಿ ಸಾಲ ವಿತರಿಸಬೇಕೆಂದು ಬೊಮ್ಮನಾಳ ಹಾಗೂ ಅರಳಿಹಟ್ಟಿ ಗ್ರಾಮದ ಎಲ್ಲ ರೈತರು ಸಂಘದ ಕಾರ್ಯಾಲಯದ ಎದುರಿಗೆ ಶುಕ್ರವಾರ ಪ್ರತಿಭಟನೆ ಮಾಡಿ ಸಂಘದ ಮುಖ್ಯ ಕಾರ್ಯನಿರ್ವಾಹಕರು ಶಂಕರ ಪಾಟೀಲ ಇವರಿಗೆ ಮನವಿ ಸಲ್ಲಿಸಿದರು. 

ಪ್ರತಿಭಟನೆಯಲ್ಲಿ ಸಂಘದ ನಿರ್ದೇಶಕರಾದ ಪ್ರತಾಪ ಅವಳೇಕರ (ಇನಾಮದಾರ) ಮಾತನಾಡಿ ದೀಪಾವಳಿ ಹಬ್ಬ ಸಮೀಪ ಬಂದಿದೆ. ಸಂಘದ ಸದಸ್ಯರಿಗೆ ಇನ್ನೂವರೆಗೆ ಹೊಸಸಾಲ ವಿತರಣೆ ಮಾಡಿಲ್ಲ. ರೈತರು ಹಲವಾರು ಬಾರಿ ಸಂಘದ ಕಾರ್ಯಾಲಯಕ್ಕೆ ಹಲವಾರು ಬಾರಿ ವಿಚಾರಣೆ ಮಾಡದರೂ ಯಾವುದೇ ಪ್ರಯೋಜನ ಆಗಿಲ್ಲ. ಒಂದು ವಾರದಲ್ಲಿ ಸಾಲ ವಿತರಿಸದಿದ್ದರೆ ಸಂಘದ ಕಾರ್ಯಾಲಯಕ್ಕೆ ಬೀಗಜಡಿದು ಹೋರಾಟ ಮಾಡಲಗುವುದೆಂದು ಅವರು ಎಚ್ಚರಿಸಿದರು.

ಈ ವೇಳೆ ಕರವೇ ಅಥಣಿ ತಾಲೂಕಾ ಅಧ್ಯಕ್ಷ ಬಸನಗೌಡಾ ಪಾಟೀಲ, ಬೊಮ್ಮನಾಳ ಇವರು ಮಾತನಾಡಿ ಈ ಸಂಘವು ಬೊಮ್ಮನಾಳ ಹಾಗೂ ಅರಳಿಹಟ್ಟಿ ಗ್ರಾಮದ ಮದ್ಯ ಇದ್ದು ಹೊಸ ಸಾಲವನ್ನು ಇನ್ನೈವರೆಗೆ ರೈತರಿಗೆ ದೊರಕಿಲ್ಲ. ಕೆಲ ರೈತರ ಖಾತೆಯಲ್ಲಿ ಸಾಲವು ಜಮಾ ಆದರೂ ಸಹ ಇನ್ನೂವರೆಗೆ ರೈತರ ಕೈಗೆ ಸಿಕ್ಕಿಲ್ಲ. ಶೀಘ್ರದಲ್ಲಿ ಪರಿಹಾರಗೊಳಿಸಬೇಕು.ಇಲ್ಲವಾದರೆ ತೀವ್ರವಾದ ಹೋರಾಟ ಮಾಡಲಾಗುವುದೆಂದು ಅವರು ಎಚ್ಚರಿಸಿದರು.

ಈ ವೇಳೆ ದೋಂಡಿರಾಮ ಅವಳೇಕರ, ರಾವಸಾಬ ಬಿಸುರಕರ, ಬಬನ ಜಾಧವ, ಪ್ರಹ್ಲಾದ ಕಾಂಬಳೆ, ಬಾಳು ಅವಳೆಕರ, ಮಲ್ಲೇಶ ಅವಳೆಕರ, ಪರಶುರಾಮ ಕದಮ, ಉಮೇಶ ಪಾಟೀಲ, ವಿಜಯ ಕಾಂಬಳೆ, ಬಿ.ಪಿ.ಅವಳೇಕರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.