ಜಯಂತಿಯಲ್ಲಿ ಸಾರ್ವಜನಿಕರ ಭಾಗಿ ಅಗತ್ಯ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

ಗದಗ 06:  ರಾಜ್ಯ  ಸರ್ಕಾರವು ವಿವಿಧ ಮಹಾನ್ ವ್ಯಕ್ತಿಗಳ ಜಯಂತಿಯನ್ನು  ಯಾವ ರೀತಿ ಆಚರಿಸಬೇಕು ಎಂಬುದರ ಬಗ್ಗೆ   ಮರುಚಿಂತನೆ ನಡೆಸುತ್ತಿದೆ.   ಆಡಳಿತ ಯಂತ್ರದ ಜೊತೆಗೆ ಸಮಾಜದವರು ಸಹ ಜಯಂತಿ ಆಚರಣೆಗೆ ಸಹಕರಿಸಬೇಕು  ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು  ನುಡಿದರು.   

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು  ಸರ್ಕಾರದಿಂದ  ಆಚರಿಸಲಾಗುವ    ಮಹನೀಯರ ಜಯಂತಿಗಳನ್ನು  ಆಚರಿಸುವ  ಅವಶ್ಯಕತೆ ಇದೆಯೋ ಅಥವಾ ಇಲ್ಲವೋ    ಹಾಗೂ ಅದರ ಸ್ವರೂಪ ಕುರಿತು  ಚಚರ್ಿಸುವ ಸಭೆಯಲ್ಲಿ ಅವರು ಮಾತನಾಡಿದರು. 

ಸಮಾಜದಲ್ಲಿನ ಧೀಮಂತ ವ್ಯಕ್ತಿಗಳ ಸಂದೇಶ  ಹಾಗೂ ತತ್ವಗಳನ್ನು ಪ್ರತಿಯೊಬ್ಬರೂ  ಜೀವನದಲ್ಲಿ  ಅಳವಡಿಸಿಕೊಳ್ಳಬೇಕು.   ಆಯಾ ಸಮುದಾಯದಲ್ಲಿನ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಆಚರಿಸುವುದರಿಂದ  ಜನಸಾಮಾನ್ಯರ  ತಿಳುವಳಿಕೆ ದಿಗಂತ ಹೆಚ್ಚಿಸಲು ಸಹಾಯವಾಗುತ್ತದೆ.   ಸಾಂಸ್ಕೃತಿಕ ಹಿರಿಮೆ ಹೆಚ್ಚಾಗುತ್ತದೆ ಮತ್ತು ಭಾವೈಕ್ಯತೆ ಉಂಟಾಗುತ್ತದೆ.  ಆದಕಾರಣ    ಸಕರ್ಾರದಿಂದ ಜಯಂತಿಗಳನ್ನು ಆಚರಿಸುವ ಅಗತ್ಯತೆ, ಇನ್ನೂ 5ರಿಂದ 10ವರ್ಷಗಳವರೆಗೆ  ಜನರಲ್ಲಿ ಜಾಗೃತಿ ಮೂಡಿಸುವದಕ್ಕೋಸ್ಕರ   ಜಯಂತಿ ಆಚರಣೆ ಅವಶ್ಯಕವಾಗಿದೆ  ಎಂದು ಕೆಲವರು ಅಭಿಪ್ರಾಯಪಟ್ಟರು.      

ಸಮಾಜದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದವರನ್ನು ಸ್ಮರಿಸಿ ಅವರಿಗೆ ಗೌರವ ಸೂಚಿಸುವುದು ಆದ್ಯ ಕರ್ತವ್ಯವಾಗಿದೆ.  ಜಯಂತಿ ಆಚರಣೆ ಮಾಡಿದಾಗ ಮಾತ್ರ ಅವರವರ ಸಾಧನೆ ಹಿರಿಮೆಗಳನ್ನು  ಅಥರ್ೈಸಿಕೊಳ್ಳಲು ಸಾಧ್ಯ.  ಆದಕಾರಣ   ಜಯಂತಿ ಆಚರಣೆಗಳನ್ನು ಸಕರ್ಾರದಿಂದ ಮಾಡುವುದು  ಅವಶ್ಯವಾಗಿದೆ ಜಯಂತಿ ಆಚರಣೆ ಕುರಿತು ಪರ ಅಭಿಪ್ರಾಯಗಳು ಮೂಡಿಬಂದವು.    

ಸಕರ್ಾರದಿಂದ ವಿವಿಧ ಜಯಂತಿಗಳನ್ನು ಆಚರಿಸುವುದಾದರೆ ಆಯಾ ಸಮುದಾಯದವರು ಮಾತ್ರ ಆ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ.  ಮಹಾನ್ ವ್ಯಕ್ತಿಗಳ ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.    ಆದಕಾರಣ ಸಕರ್ಾರವೇ ಸಮುದಾಯದವರ ನಡುವೆ ತಾರತಮ್ಯ ಮಾಡಬಾರದು. ಸರಕಾರವೇ ಆಚರಿಸುವ ಅಗತ್ಯವಿಲ್ಲ. ಆದ್ದರಿಂದ ಸಕರ್ಾರ ಆಥರ್ಿಕ ನೆರವು ನೀಡುವುದರ ಬಗ್ಗೆ ಯೋಚಿಸಬೇಕು ಎಂದು ತಿಳಿಸಿದರು. 

ಸಕರ್ಾರದ ಮೇಲೆ ಒತ್ತಡ ಹಾಕಿ ಸಮುದಾಯದವರು ಜಯಂತಿ ಮಾಡಲು ಪ್ರೇರೇಪಿಸುತ್ತಿವೆ.  ಸಕರ್ಾರದ ವತಿಯಿಂದ ಜಯಂತಿಗಳ ಆಚರಣೆ ಅವಶ್ಯವಿಲ್ಲ. ಈ ದೇಶದೊಳಗಿನ ಮಹಾನ್ ವ್ಯಕ್ತಿಗಳೆಲ್ಲ ದೇಶದ  ಸಂಪತ್ತು.  ಸಕರ್ಾರದಿಂದ  ಜಯಂತಿ ಆಚರಣೆ ಮಾಡುವುದರಿಂದ  ಮಹಾನ್ ವ್ಯಕ್ತಿಗಳ ಆದರ್ಶವನ್ನೇ ನೆಪ ಮಾಡಿ ಮುಂದೆ ಇಟ್ಟುಕೊಂಡು ಆಯಾ ಸಮುದಾಯದವರು  ಒತ್ತಡದ ಮೂಲಕ ಜಯಂತಿ ಆಚರಿಸಲು ಮುಂದಾಗುತ್ತದೆ.   ಆದಕಾರಣ  ಜಯಂತಿ ಆಚರಣೆ ಮಾಡುವುದು ಅವಶ್ಯವಿರುವುದಿಲ್ಲ  ಎಂಬ ಜಯಂತಿ ಆಚರಣೆ ಕುರಿತು ವಿರೋಧ ಅಭಿಪ್ರಾಯಗಳನ್ನು  ವ್ಯಕ್ತಪಡಿಸಿದರು.     

ಸಭೆಯಲ್ಲಿ ಪ್ರೊ. ಕೆ.ಬಿ. ತಳಗೇರಿ, ಶೇಖಣ್ಣ ಗದ್ದಿಕೇರಿ,  ಜೆ.ಕೆ. ಜಮಾದಾರ,  ಐ.ಕೆ. ಕಮ್ಮಾರ, ಪಿ.ಎ. ಕುಲಕರ್ಣಿ   ಜಯಂತಿ ಆಚರಣೆ ಅವಶ್ಯಕತೆ ಇದೆಯೋ ಇಲ್ಲವೋ ಅದರ ಸ್ವರೂಪ ಕುರಿತು    ಮಾತನಾಡಿದರು.  ಸಭೆಯಲ್ಲಿ  ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ಧಲಿಂಗೇಶ ರಂಗಣ್ಣವರ,   ವಿವಿಧ ಸಮುದಾಯದ ಮುಖಂಡರು,  ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.