ಯರಗಟ್ಟಿ, 01 : ಸಮೀಪದ ಕೋಟೂರ-ಶಿವಾಪೂರ ಎಷ್ಟೋ ಮಂದಿ ಮಕ್ಖಳು ತಂದೆ-ತಾಯಿ ಗಳಿಸಿದ ಸಂಪತ್ತ ಆಸ್ತಿಯನ್ನು, ಬೆಳ್ಳಿ ಬಂಗಾರವನ್ನು, ಹಂಚಿಕೋಳ್ಳುತ್ತಾರೆ. ಆದರೆ ತಮ್ಮ ಮಕ್ಕಳೆಲ್ಲಾ ಬೆರೆ ಆಗುವ ಸಂದರ್ಭದಲ್ಲಿ ಆಸ್ತಿ ಜೊತೆಗೆ ತಂದೆ-ತಾಯಿಗಳನ್ನು ಹಂಚಕೋಳ್ಳುತ್ತಾರೆ.ಅದು ಹಾಗೆ ಆಗಬಾರದು ಆದರೆ ಈಗಿನ ಮಕ್ಕಳಿಗೆ ಇದರ ಬಗ್ಗೆ ತೀಳಿವಳಿಕೆ ಬೇಕು, ಯಾರಿಗಾಗಿ ಬದುಕು ,ಈ ದುಡ್ಡು ಬೆಳ್ಳಿ ಬಂಗಾರ,ಈ ಸಂಪತ್ತು , ಮೌಲ್ಯ ಎಲ್ಲವು ದೋರೆಯಬೇಕಾದರೆ ತಂದೆ ತಾಯಿಯ ಪುಣ್ಯದಿಂದ ಸಿಕ್ಕಿರುತ್ತದೆ, ಮಕ್ಕಳ ಎಂದರೆ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೋಳ್ಳಬೇಕು.ಅವರು ಯಾರೆಯಾದರು ಸ್ವಾಮಿಗಳಾಗಲಿ, ಯೋಗಿ,ತ್ಯಾಗಿ ಸಂಸ್ಕಾರಕಗಳಾಗಲಿ.ಯಾರೆಯಾದರು ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೋಳ್ಳುವುದು ಮಕ್ಕಳ ಕರ್ತವ್ಯ ಎಂದು ಪ್ರವಚನಕಾರರಾದ ಅಂತೂರ-ಬೆಂತೂರ ಗ್ರಾಮದ : ಆಶುಕವಿ: ಕುಮಾರದೇವರು ಹೇಳಿದರು.
ಗ್ರಾಮದ ಹಿರೇಮಠ ಆವರಣದಲ್ಲಿ ಶ್ರೀ ಚರಂತಯ್ಯ ಗುರು ಪಟ್ಟಾಧಿಕಾರಿ ಪ್ರಯುಕ್ತ ಮಂಗಳವಾರ ಜರುಗಿದ ಪುರಾಣ ಪ್ರವಚನ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಕಾರ‌್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸವದತ್ತಿಯ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಚರಂತಯ್ಯ ದೇವರು ಮಠದ ಪಟ್ಟಾಧಿಕಾರವನ್ನು ವಹಿಸಿಕೋಳ್ಳುತ್ತಿದ್ದಾರೆ ಅದಕ್ಕೆ ಬೇಕಾದ ಎಲ್ಲ ಸಂಸ್ಕಾರವನ್ನು ನೀಡುವ ಒಂದು ಕರ್ತವ್ಯ ,ಒಂದು ಭಕ್ತರ ಸದಾ ಎಲ್ಲಾಭಕ್ತರು ಸೇರಿ ಮಠದ ಕಾರ‌್ಯವನ್ನು ಮಾಡಿಕೋಂಡು ಹೊಗುವ ಗ್ರಾಮಗಳ ಭಕ್ತರ ಕರ್ತವ್ಯ, ಯಾವಾಗ ಧಾನ, ಧರ್ಮ, ಗ್ರಹಸ್ತರು, ಮಾಡಿಕೋಂಡು ಬರುತ್ತಾರೆ ಆವಾಗ ಗುಚಳು ತಮ್ಮ ಕರ್ತವ್ಯವನ್ನು ಮಾಡುತ್ತಾರೆ.
ಗುರುಗಳ ಕರ್ತವ್ಯ ಎಂದರೆ ಧಾರ್ಮಿಕ ಸಂಸ್ಕಾರರವನ್ನು ನಿಡುವುದು, ಪ್ರತಿನಿತ್ಯ ಪೂಜೆ, ದ್ಯಾನ ಮಾಡುವಂತಹದ್ದು. ಭಕ್ತರು ಗುರುಗಳ ಸೇವೆ ಮಾಡುವುದರ ಮೂಲಕ ಅವರಲ್ಲಿರುವ ವಸ್ತುಗಳನ್ನು ಕೋಂಡಿಕೋಂಡು ಶಾಂತಿಯಿಂದ ಪಡೆಯಬೇಕಾಗುತ್ತದೆ. ಪಟ್ಟಾಧಿಕಾರಿ ಪಡೆದ ಮೇಲೆ ಅವರಲ್ಲಿ ಒಂದು ಸಂಪತ್ತು ಇರುತ್ತದೆ. ಹೋಲ ಮನೆ ಆಸ್ತಿ ಇವೆಲ್ಲಾ ಜನಗಳ ಬಯಸುವ ಸಂಪತ್ತು. ಆದರೆ ವಿಭೂತಿ, ರುದ್ರಾಕ್ಷಿ, ಲಿಂಗ ಆದ್ಯಾತ್ಮಿಕ ಜ್ಙಾನ ಇವೆಲ್ಲಾ ಗುರುಗಳ ಸಂಪತ್ತುಗಳಾಗಿವೆ ಎಂದು ಹೇಳಿದರು.
ರಾಜಶೇಖರ ಅಂಗಡಿ, ಲಕ್ಕಪ್ಪ ಜಗಮೈನವರ, ಅರ್ಜುನ ಮುಕ್ಕನ್ನವರ ಶಂಕರ ಇಟಗೌಡ್ರ, ಬಾಳಪ್ಪ ಬಾಗೇವಾಡಿ, ಮಾಹಾದೇವ ಬಾಗಿಲದ ಮಲ್ಲಪ್ಪ ಜಕ್ಕನ್ನವರ, ಚರಂತಯ್ಯ ದೇವರು ಹಾಗು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿ ಸಂಖ್ಯೇಯಲ್ಲಿ ಪಾಲ್ಗೋಂಡಿದ್ದರು ಇದಾದ ನಂತರ ಚರಂತಯ್ಯ ದೇವರ ತಂದೆ- ತಾಯಿರನ್ನು ಹಲವಾರು ಭಕ್ತರು ಸನ್ಮಾನಿಸಿದರು. ಆನಂತರ ಮಹಾಪ್ರಸಾದ ಜರುಗಿತು.