ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಬೆಳಗಾವಿ, 21: ಕಂಗ್ರಾಳಿಯಿಂದ ಹಂದಿಗನೂರ ಕ್ರಾಸ್ ವರೆಗಿನ  ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ದೊಡ್ಡ  ಗುಂಡಿಗಳಿಂದ ಸಂಚಾರಕ್ಕೆ ತೊಂದರೆ ಯಾಗುತ್ತಿದೆ. ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭಿಸಬೇಕೆಂದು ಆಗ್ರಹಿಸಿ ಗುರುವಾರ  ಕಂಗ್ರಾಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕಂಗ್ರಾಳಿಯಿಂದ ಹಂದಿಗನೂರ ಕ್ರಾಸ್ ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ಉದ್ದಕ್ಕೂ ದೊಡ್ಡ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಸಂಚರಿಸಲು ಭಯಪಡುವ ಪರಿಸ್ಥಿತಿ ನಿಮರ್ಾಣವಾಗಿದೆ. ಅಲ್ಲದೇ ಈ ಮಾರ್ಗದಲ್ಲಿ ತರಕಾರಿ ಮಾರುಕಟ್ಟೆ ಇರುವುದರಿಂದ ನಿತ್ಯ ನೂರಾರು ತರಕಾರಿ ತುಂಬಿದ ವಾಹನಗಳು, ಕಬ್ಬು ತುಂಬಿದ ಟ್ರ್ಯಾಕ್ಟರ್, ಟಿಪ್ಪರ ಸೇರಿದಂತೆ ಅಧಿಕ ತೂಕದ ವಾಹನಗಳು ಸಂಚರಿಸುತ್ತವೆ. ಕಳೆದ 3 ವರ್ಷಗಳಿಂದ ಈ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದರೂ ಇನ್ನೂವರೆಗೂ ಈ ರಸ್ತೆ ಕಾಮಗಾರಿ ಪ್ರಾರಂಭಿಸಿಲ್ಲ. ಭೀಕರ ಅಪಘಾತಗಳು ಸಂಭವಿಸಿ ಪ್ರಾಣಹಾನಿಗಳಾಗುವ ಮೊದಲೇ ಈ ರಸ್ತೆ ಕಾಮಗಾರಿಯನ್ನು ಪ್ರಾರಂಭ ಮಾಡಬೇಕು. ಇಲ್ಲದಿದ್ದರೆ ನ. 23 ರಂದು ರಸ್ತೆ ತಡೆ ಮಾಡಲಾಗುವುದೆಂದು ಎಚ್ಚರಿಸಿದರು.

ಈ ವೇಳೆ ಯಲ್ಲಾಪ್ಪ ಪಾಟೀಲ್, ಪುಂಡಲೀಕ ಪಾಟೀಲ್, ಮಹೇಶ ಕೆ, ಜಯಶ್ರೀ ಛಲವಾದಿ, ಆಶಾ ಕೊಲಕರ, ಪುಷ್ಪಾ ಪಾಟೀಲ್, ಸುನಿತಾ ಜಾಧವ, ಸುವಣರ್ಾ ಕಾಂಬಳೆ, ಕವಿತಾ ಶಿಂದೆ ಮೊದಲಾದವರು ಉಪಸ್ಥಿತರಿದ್ದರು.