ಹಾವೇರಿ 29: ಜಿಲ್ಲೆಯಾದ್ಯಂತ ಶಾಲಾ ಪ್ರಾರಂಭೋತ್ಸವದ ಸಿದ್ಧತೆ ಅದ್ದೂರಿಯಾಗಿ ನಡೆದಿದೆ. ಇದರ ಬೆನ್ನಲ್ಲೇ ವಸತಿ ಶಾಲಾ ಶಿಕ್ಷಕರು ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿಗುರುವಾರತಮ್ಮ ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು ಶಾಲಾ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರದ ವಿರುದ್ಧಅಸಮಾಧಾನ ವ್ಯಕ್ತಪಡಿಸುತ್ತಲೇಕರ್ತವ್ಯ ನಿರ್ವಹಿಸಿದ್ದಾರೆ.
ರಾಜ್ಯಾದ್ಯಂತ ಸುಮಾರು 827 ಶಾಲೆಗಳಲ್ಲಿ 6100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಹಾವೇರಿಜಿಲ್ಲೆಯಲ್ಲಿ 27 ವಸತಿ ಶಾಲೆಗಳಿದ್ದು, ಕಿತ್ತೂರರಾಣಿಚೆನ್ನಮ್ಮ, ಮೋರಾರ್ಜಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಏಕಲವ್ಯ ಹೀಗೆ ಎಲ್ಲಾ ವಸತಿ ಶಾಲೆಗಳಲ್ಲಿ ಅಂದಾಜು 300ಕ್ಕೂ ಹೆಚ್ಚು ಬೋಧಕ ಮತ್ತು ಶಿಕ್ಷಕ ಸಿಬ್ಬಂದಿ ಇದ್ದು ಈ ಎಲ್ಲಾ ಸಿಬ್ಬಂದಿಗಳು ಕೈಗೆ ಕಪ್ಪುಪಟ್ಟಿ ಧರಿಸಿಕೊಂಡೇ ಶಾಲಾಮಕ್ಕಳನ್ನು ಬರಮಾಡಿಕೊಂಡರು.
ಈಗಾಗಲೇ ವಸತಿ ಶಾಲೆಗಳು ಕ್ರೈಸ್‌ಅಡಿಯಲ್ಲಿಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸರ್ಕಾರಿ ನೌಕರರಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳು ವಸತಿ ಶಾಲೆಗಳ ನೌಕರರಿಗೆ ಸಿಗುತ್ತಿಲ್ಲ. ವಸತಿ ಶಿಕ್ಷಣ ನಿರ್ದೇಶನಾಲಯಎಂದು ಪ್ರತ್ಯೇಕವಾಗಿ ರಚಿಸಿ ರಾಜ್ಯದ ಪ್ರೌಢಶಾಲಾ ಶಿಕ್ಷಣ ಇಲಾಖೆಯಂತೆ ನ್ಯಾಯೋಚಿತವಾದಗೌರವ ಮತ್ತು ಸೌಲಭ್ಯಕಲ್ಪಿಸಬೇಕು.ನಗದುರಹಿತಚಿಕಿತ್ಸೆಗಾಗಿಜ್ಯೋತಿ ಸಂಜೀವಿನಿ ಅನುಷ್ಠಾನಗೊಳಿಸಬೇಕು.ಕ್ರೈಸ್‌ಅಡಿಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಯ ವಸತಿ ಶಾಲೆಗಳು ನಡೆಯುತ್ತಿದ್ದು, ವಸತಿ ಶಿಕ್ಷಣ ನಿರ್ದೇಶನಾಲಯಎಂದು ಪ್ರತ್ಯೇಕವಾಗಿರಚಿಸದೇ ಹೋದಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಯ ವಸತಿ ಶಾಲೆ ಮತ್ತು ಸಿಬ್ಬಂದಿಗಳನ್ನು ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡಬೇಕು.ಮರಣಅಥವಾ ನಿವೃತ್ತಿಯಉಪಧನ ಸೇರಿದಂತೆ ಹಲವು ಬೇಡಿಕೆಇಟ್ಟುಕೊಂಡುಮೇ 26ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿಪ್ರತಿಭಟನೆ ನಡೆಸಿದ್ದರು.ಇದಕ್ಕೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಸಾಂವಿಧಾನಿಕ ಹಕ್ಕುಗಳಿಗಾಗಿ, ಇದೀಗ ಜಿಲ್ಲಾ ಹಂತದಲ್ಲಿ ಹೋರಾಟ ಮುಂದುವರೆಸಿದ್ದು, ಗುರುವಾರ ಕೈಗೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.ಇದೀಗ ಮೇ 30ರಿಂದ ಶಾಲಾ ಹಂತದಲ್ಲಿ ಹೋರಾಟ ಮುಂದುವರಸುವುದಾಗಿ ಸಂಘಟನೆ ತಿಳಿಸಿದೆ.
ಹಾವೇರಿತಾಲೂಕಿನ ನೆಗಳೂರ ಮೋರಾರ್ಜಿದೇಸಾಯಿ ವಸತಿ ಶಾಲಾ ಸಿಬ್ಬಂದಿ ಕೈಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಸಾಂಕೇತಿಕಧರಣಿ ನಡೆಸಿದರು.
ಹಾವೇರಿಜಿಲ್ಲೆ ಬ್ಯಾಡಗಿತಾಲೂಕುಶಿಡೇನೂರ ಗ್ರಾಮದಮೊರಾರ್ಜಿದೇಸಾಯಿಶಾಲೆ ಶಿಕ್ಷಕ ಸಿಬ್ಬಂದಿ ಕಪ್ಪುಗಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದರು.