ಮಂಗಳೂರು, ಏಪ್ರಿಲ್ 10,ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗ ಮುಚ್ಚಲಾಗುವುದು ಎಂಬ ವದಂತಿಗಳು ಆಧಾರ ರಹಿತವಾಗಿದ್ದು, ಅಧಿಕಾರಿಗಳು ಅಂತಹ ಯಾವುದೇ ಆದೇಶಗಳನ್ನು ನೀಡಿಲ್ಲ ಎಂದು ವಾರ್ತಾ ಇಲಾಖೆ ತಿಳಿಸಿದೆ.‘ಜಿಲ್ಲೆಯಲ್ಲಿ ಈಗಾಗಲೇ ಲಾಕ್‌ಡೌನ್ ಜಾರಿಯಲ್ಲಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಮಂಗಳೂರಿನಲ್ಲಿ ಸಂಪೂರ್ಣ ಮುಚ್ಚುವ(ಸೀಲ್‍ಡೌನ್) ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ.’ ಎಂದು ಇಲಾಖೆ ವದಂತಿಗಳನ್ನು ಅಲ್ಲಗೆಳೆದು ತಿಳಿಸಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಣ ಪಡೆದ ನಂತರವೇ ಈ ವಿಷಯದಲ್ಲಿ ಯಾವುದೇ ಸುದ್ದಿಗಳನ್ನು ಪ್ರಕಟಿಸಬಹುದು. ಆಧಾರರಹಿತ ಸುದ್ದಿಗಳನ್ನು ಪ್ರಕಟಿಸುವುದರಿಂದ ವದಂತಿಗಳು ಜನರ ಮನಸ್ಸಿನಲ್ಲಿ ಗೊಂದಲವನ್ನು ಸೃಷ್ಟಿಸುತ್ತವೆ ಎಂದು ಹೇಳೀರುವ ಇಲಾಖೆ, ಅಧಿಕೃತವಾಗಿ ದೃಢೀಕರಣಗೊಳ್ಳದ ಇಂತಹ ಸುದ್ದಿಗಳನ್ನು ಹರಡದಂತೆ ಜನರಲ್ಲಿ ಮನವಿ ಮಾಡಿದೆ.