ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಪೂರ್ಣ: ಇನ್ನುಳಿದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿ ನೀಡಿ: ಜಿಲ್ಲಾಧಿಕಾರಿ

Scheduled Caste comprehensive survey complete: Provide information on remaining Scheduled Caste fami

ಬಳ್ಳಾರಿ 27: ಜಿಲ್ಲೆಯಲ್ಲಿ ಈಗಾಗಲೇ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯಲ್ಲಿ ಆಯಾ ನಗರ, ತಾಲ್ಲೂಕು ಮತ್ತು ಗ್ರಾಮಗಳಿಂದ ಕೆಲಸದ ನಿಮಿತ್ತ ಬೇರೆಡೆ ವಲಸೆ ಹೋಗಿರುವ ಪರಿಶಿಷ್ಟ ಕುಟುಂಬಗಳ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. 

ಮಂಗಳವಾರ, ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ-2025 ಕುರಿತಂತೆ ಸಮುದಾಯದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಏರಿ​‍್ಡಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.2025 ರಂತೆ ಪರಿಶಿಷ್ಟ ಜಾತಿ ಅಂದಾಜು ವಿವರದಂತೆ ಜಿಲ್ಲೆಯಲ್ಲಿ 61,037 ಪರಿಶಿಷ್ಟ ಜಾತಿಗಳ ಕುಟುಂಬಗಳಲ್ಲಿ ಒಟ್ಟು 3,04,468 ಪರಿಶಿಷ್ಟ ಜಾತಿ ಜನಸಂಖ್ಯೆ ಇದೆ. ಸಮೀಕ್ಷೆಯಲ್ಲಿ ಈಗಾಗಲೇ 57385 ಕುಟುಂಬಗಳು ಪೂರ್ಣಗೊಂಡಿವೆ. ಅದರಲ್ಲಿ ಪರಿಶಿಷ್ಟ ಜಾತಿಯ ಒಟ್ಟು 2,56,753 ಜನಸಂಖ್ಯೆ ಸರ್ವೇ ಮಾಡಲಾಗಿದೆ. ಶೇ.84 ರಷ್ಟು ಪ್ರಗತಿಯಾಗಿದ್ದು, ಇನ್ನುಳಿದ ವಲಸೆ ಹೋಗಿರುವ ಕುಟುಂಬಗಳ ಮಾಹಿತಿಅಥವಾಇನ್ನು ಸಮೀಕ್ಷೆಯಲ್ಲಿ ಭಾಗಿಯಾಗದವರ ಆಯಾ ಸಮುದಾಯದ ಮುಖಂಡರುಗಳು ಮಾಹಿತಿ ನೀಡಬೇಕುಎಂದು ತಿಳಿಸಿದರು. 

ಈಗಾಗಲೇ ಜಿಲ್ಲೆಯಲ್ಲಿಇತರೆ ಕೆಲಸಕ್ಕಾಗಿ ವಲಸೆ ಹೋದರವರನ್ನು ಸಮುದಾಯದ ಮುಖಂಡರು ಸಂಪರ್ಕಿಸಿ ಅವರಿಗೆ ಮಾಹಿತಿಒದಗಿಸಬೇಕು.ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯಲ್ಲಿತಪ್ಪದೇ ಭಾಗವಹಿಸುವಂತೆ ತಿಳಿಸಬೇಕು.ಇದುರಾಜ್ಯ ಸರ್ಕಾರವು ನೀಡಿರುವ ಉತ್ತಮ ಅವಕಾಶವಾಗಿದ್ದು, ತಪ್ಪದೇ ಸಮೀಕ್ಷೆಯಲ್ಲಿ ಒಳಪಡುವಂತೆ ನಿರ್ದೇಶನ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಅವರು ಮಾತನಾಡಿ, ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯಲ್ಲಿ ಮನೆ-ಮನೆ ಭೇಟಿಯು ಮೇ 29 ರವರೆಗೆ ನಡೆಯಲಿದ್ದು, ಎರಡು ದಿನಗಳ ಕಾಲಾವಕಾಶವಿದ್ದು, ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ನೆರೆಹೊರೆಯವರ ಕುಟುಂಬಗಳು ವಲಸೆ ಹೋಗಿದ್ದಲ್ಲಿ ಅಂತಹ ಕುಟುಂಬಗಳ ಮಾಹಿತಿಯನ್ನು ಸಮೀಕ್ಷಾದಾರರಿಗೆ ಗುರುತಿಸಿ ನೀಡಬೇಕು. ಇದಕ್ಕೆ ಸಮುದಾಯದ ಮುಖಂಡರುಗಳು ಸಹಕರಿಸಬೇಕು ಎಂದು ಹೇಳಿದರು. 

ಅದೇ ರೀತಿಯಾಗಿ ಮೇ 30 ರಿಂದಜೂನ್ 01 ರವರೆಗೆ ಮೂರು ದಿನಗಳ ಕಾಲ ವಿಶೇಷ ಶಿಬಿರಗಳು ನಡೆಯಲಿದ್ದು, ಅಲ್ಲಿ ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ ಹೊರಗುಳಿದ ಪರಿಶಿಷ್ಟ ಜಾತಿ ಕುಟುಂಬಗಳು ಸಮೀಕ್ಷೆಯಲ್ಲಿ ಒಳಪಡಿಸಲಾಗುವುದು.ಹಾಗಾಗಿ ಹೊರಗುಳಿದ ಪರಿಶಿಷ್ಟ ಜಾತಿಯ ಕುಟುಂಬಗಳು ತಮ್ಮ-ತಮ್ಮ ವ್ಯಾಪ್ತಿಯ ಬೂತ್ ಗಳಲ್ಲಿ ಅಂದು ನಡೆಯುವ ಶಿಬಿರಗಳಲ್ಲಿ ತಪ್ಪದೇ ಹೋಗಿ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕು .ಒಂದು ವೇಳೆ ಅಲ್ಲಿಯೂ ಭಾಗವಹಿಸದೇ ಇದ್ದಲ್ಲಿ ಅನ್‌ಲೈನ್ ಮೂಲಕ ಸ್ವಯಂಘೋಷಣೆ ಪ್ರಕ್ರಿಯೆಯು ಈಗಾಗಲೇ ನಡೆಯುತ್ತಲಿದೆ. ಲಿಂಕ್ ಮೂಲಕ ಸಮೀಕ್ಷೆಯಲ್ಲಿ ಮಾಹಿತಿ ನೀಡಬಹುದುಎಂದರು. ಮನೆ-ಮನೆ ಭೇಟಿ ಸಮೀಕ್ಷಾ ಕಾರ್ಯದಲ್ಲಿ ಇನ್ನುಳಿದ ಎರಡು ದಿನಗಳಲ್ಲಿ ಶಿಕ್ಷಕರು ಇನ್ನಷ್ಟು ಹೆಚ್ಚಿನ ಶ್ರಮವಹಿಸಿ ಸಮೀಕ್ಷಾ ಕಾರ್ಯ ಇನ್ನಷ್ಟು ಪೂರ್ಣಗೊಳಿಸಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾಅವರು, ಈ ಕುರಿತು ಬಿಇಒ ಗಳು ಶಿಕ್ಷಕರಿಗೆ ನಿರ್ದೇಶನ ನೀಡಲು ಸೂಚಿಸಿದರು. 

ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗಳ ವಿವಿಧ ಸಮುದಾಯದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಮೀಕ್ಷಾಕಾರ್ಯ ಪೂರ್ಣಗೊಳಿಸಲು ತಾಂತ್ರಿಕ ಸಮಸ್ಯೆ ಹಾಗೂ ಇತರೆ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಇದೇ ಸಂದರ್ಭದಲ್ಲಿ ಸಲಹೆ ನೀಡಿದರು. ಸಭೆಯಲ್ಲಿಡಾ.ಬಾಬು ಜಗನ್ ಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಸಹಾಯಕ ಆಯುಕ್ತ ಪಿ.ಪ್ರಮೋದ್ ಸೇರಿದಂತೆ ಪರಿಶಿಷ್ಟ ಜಾತಿಗಳ ವಿವಿಧ ಸಮುದಾಯದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.