ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಚಿನ್ನದ ಪದಕ ಗಳಿಸಿದ ಶಿವರಾಜ

Shivaraja wins gold medal in science and technology

ಕೊಪ್ಪಳ  28: ರಾಯಚೂರು ಜಿಲ್ಲೆಯ ಭೀಮರಾಯನಗುಡಿಯ ಕೃಷಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಶಿವರಾಜ ವೀ. ಸಜ್ಜನರ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಸಿದ್ದರಿಂದ   ಮರಗಬಾಯಿ ಬಾಬುಲಾಲ್ ಜೈನ್ ಶಹಪೂರ ಚಿನ್ನದ ಪದಕ ಗಳಿಸಿದ್ದಾರೆ. ಸೋಮವಾರ ನಡೆದ ರಾಯಚೂರು ಕೃಷಿ ವಿವಿ ಘಟಿಕೋತ್ಸವದಲ್ಲಿ ಚಿನ್ನದ ಪದಕ ಹಾಗೂ ಪದವಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಶಿವರಾಜ ಹೆತ್ತವರಾದ ಡಾ.ವೀರಣ್ಣ ಎಸ್‌. ಸಜ್ಜನರ ಹಾಗೂ ಆರತಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.