ಬಾಲ ಪ್ರತಿಭೆ ಪ್ರೋತ್ಸಾಹಿಸುವ ಚಿಗುರು ಕಾರ್ಯಕ್ರಮ ಯಶಸ್ವಿ

ಕೊಪ್ಪಳ 21: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾಗ್ಯನಗರದ ಜ್ಞಾನಬಂಧು ಹಿರಿಯ ಪ್ರಾಥಮಿಕ ಶಾಲೆಯ ಕನ್ವೆನ್ಷನ್ ಹಾಲ್ನಲ್ಲಿ (ಸೆ.21) ಆಯೋಜಿಸಲಾಗಿದ್ದ ಬಾಲ ಪ್ರತಿಭೆ ಪ್ರೋತ್ಸಾಹಿಸುವ ಚಿಗುರು ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಸಾಹಿತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಠ್ಠಪ್ಪ ಗೋರಂಟ್ಲಿ ಅವರು ಉದ್ಘಾಟಿಸಿದರು.  ಕಾರ್ಯಕ್ರಮದ ಅಂಗವಾಗಿ ಹಿಂದುಸ್ಥಾನಿ ವಾದ್ಯ ಸಂಗೀತ ಕಾರ್ಯಕ್ರಮದಡಿ ಮಧು ಮೊರಗೇರಿ ಹಾಗೂ ತಂಡದಿಂದ ತಬಲಾ ವಾದನ, ಹೃಷಿಕೇಶ ಮರೇಗೌಡರ ಹಾಗೂ ತಂಡದಿಂದ ಬಾನ್ಸೂರಿ ವಾದನ, ಸ್ಪೂತರ್ಿ ಸಾಲಿಮಠ ಹಾಗೂ ತಂಡ ಮತ್ತು ಮಧು ಕವಲೂರು ಹಾಗೂ ತಂಡದಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ, ಅಪೂರ್ವ ಕಟ್ಟಿ ಹಾಗೂ ತಂಡದಿಂದ ಸುಗಮ ಸಂಗೀತ, ಸ್ನೇಹ ಮ್ಯಾಗಡೆ ಹಾಗೂ ತಂಡದಿಂದ ಜನಪದ ಗೀತೆಗಳು, ರಕ್ಷಿತಾ ಆರ್. ನಾಡಗೌಡ ಹಾಗೂ ತಂಡದಿಂದ ಸಮೂಹ ನೃತ್ಯ ಮತ್ತು ಅಪೇಕ್ಷಾ ರವೀಂದ್ರ ರವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಗ್ಯನಗರದ ಜ್ಞಾನಬಂಧು ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ದಾನಪ್ಪ ಕವಲೂರು ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಾಬಣ್ಣ, ಹಿರಿಯ ಕಲಾವಿದ ಕೆ. ಹುಸೇನ್ ಸಾಬ್ ಹಿರೇಮನ್ನಾಪುರ ಹಾಗೂ ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.