ಸೋಫಿಯಾ ಡಿವೈನ್ ನ್ಯೂಜಿಲೆಂಡ್ ನಾಯಕಿ

ನವದೆಹಲಿ, ಜುಲೈ 9: ನ್ಯೂಜಿಲೆಂಡ್ ಮಹಿಳಾ ತಂಡದ ಜವಾಬ್ದಾರಿಯನ್ನು ಅನುಭವಿ ಆಟಗಾರ್ತಿ ಸೋಫಿಯಾ ಡಿವೈನ್ ಹೆಗಲಿಗೆ ಹೊರಸಲಾಗಿದೆ. 

  ಆಮಿ ಸ್ಯಾಟರ್ತ್ ವೈಟ್ ಅವರು ಹೆರಿಗೆ ರಜೆಯನ್ನು ತೆಗೆದುಕೊಂಡಿದ್ದರು. ಡಿವೈನ್ ಅವರನ್ನು ಜನೆವರಿಯಲ್ಲಿ ನಾಯಕರನ್ನಾಗಿ ನೇಮಕ ಮಾಡಿತು. ಅಲ್ಲದೆ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಗುಂಪು ಹಂತದಲ್ಲಿ ನಿರ್ಗಮಿಸಿತ್ತು. 

  “ನನಗೆ ಈ ಜವಾಬ್ದಾರಿ ನೀಡಿದ್ದು, ನಿಜಕ್ಕೂ ಸಂತೋಷ ತಂದಿದೆ. ಕಳೆದ ಋತುವಿನಲ್ಲಿ ನಾಯಕತ್ವವನ್ನು ಆನಂದಿಸಿದ್ದೆ. ಸವಾಲುಗಳು ಗುಡ್ಡದಷ್ಟಿದ್ದವು. ಆದರೆ, ಒಂದು ತಂಡವಾಗಿ ನಾವು ಸರಿಯಾದ ಮಾರ್ಗದಲ್ಲಿ ನಡೆಯುತ್ತಿರುವ ಆಶಾ ಭಾವನೆ ನಮ್ಮಲ್ಲಿತ್ತು” ಎಂದಿದ್ದಾರೆ.

  “ನಾನು ಆಮಿ ಅವರೊಂದಿಗೆ ಮಾತನಾಡಿಕೊಂಡೇ ತೀರ್ಮಾನ ತೆಗೆದುಕೊಳ್ಳುತ್ತೇನೆ. ಅವರಲ್ಲಿ ನಾಯಕತ್ವದ ಗುಣಗಳು ಚೆನ್ನಾಗಿವೆ” ಎಂದು ಸೋಫಿಯಾ ತಿಳಿಸಿದ್ದಾರೆ. 

  ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ವಿಶ್ವದಲ್ಲಿ ಹರಡುತ್ತಿದ್ದ ಕಾರಣ ಸುಮಾರು ಮೂರು ತಿಂಗಳಿಗೂ ಹೆಚ್ಚು ಕಾಲ ಕ್ರೀಡೆಗಳಿಗೆ ಬ್ರೇಕ್ ಬಿದ್ದಿತ್ತು. ನ್ಯೂಜಿಲೆಂಡ್ ಸೆಂಪ್ಟಬರ್ ಅಂತ್ಯದಲ್ಲಿ ನೆರೆಯ ಆಸ್ಟ್ರೇಲಿಯಾ ದೇಶಕ್ಕೆ ಪ್ರವಾಸ ಬೆಳೆಸಲಿದೆ. ಈ ವೇಳೆ ಏಕದಿನ ಹಾಗೂ ಟಿ-20 ಸರಣಿ ಆಡಲಿದೆ.