ಗದಗ 07: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗನಲ್ಲಿ ಕ್ರೀಡಾಕೂಟವನ್ನು ದಿ. 07ರಂದು ಆಯೋಜಿಸಲಾಗಿತ್ತು.
ಈ ಕ್ರೀಡಾಕೂಟವನ್ನು ಡಾ. ಸುರೇಶ್ ನಾಡಗೌಡರ, ಕುಲಪತಿಗಳು ಹಾಗೂ ಕುಲಸಚಿವರು, ಕ.ರಾ.ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯ, ಗದಗ ಇವರು ಉದ್ಘಾಟಿಸಿದರು. ಈ ಕ್ರೀಡಾಕೂಟದ ಪ್ರಾರಂಭದಲ್ಲಿ ವಿಶ್ವವಿದ್ಯಾಲಯದ ವಿದ್ಯಾಥರ್ಿಗಳು ಪಥಸಂಚಲನವನ್ನು ನಡೆಸಿದರು. ನಂತರ ಕ್ರೀಡಾ ಜ್ಯೋತಿಯನ್ನು ಬೆಳಗಿಸಲಾಯಿತು. ಕ್ರೀಡಾ ಧ್ವಜದ ಆರೋಹಣ ಮಾಡುವ ಮುಖಾಂತರ ಕುಲಪತಿಗಳು ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕ್ರೀಡೆಯು ದೈಹಿಕ ಚಟುವಟಿಕೆಯಷ್ಟೇ ಅಲ್ಲ ವ್ಯಕ್ತಿತ್ವ ನಿಮರ್ಾಣದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರು ನಿಯಮಿತವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಆರೋಗ್ಯವಂತರಾಗಿರುತ್ತಾರೆ, ಕನಿಷ್ಠ ದಿನಕ್ಕೆ ಒಂದು ಗಂಟೆಯನ್ನಾದರೂ ಇದಕ್ಕೆ ಮೀಸಲಿಡಬೇಕೆಂದು ಸಲಹೆ ನೀಡಿದರು.
ನಂತರ ಡಾ.ವೀರೇಶ.ವಿಜಾಪುರ, ದೈಹಿಕ ಸಹ ನಿರ್ದೇಶಕರು ಕ್ರೀಡಾ ಪ್ರತಿಜ್ಞೆಯನ್ನು ಭೋದಿಸಿದರು. ವಿಶ್ವವಿದ್ಯಾಲಯದ ಕಾರ್ಯನಿವರ್ಾಹಕ ಪರಿಷತ ಸದಸ್ಯರಾದ ಪ್ರೊ ಶಿವಣ್ಣಾ, ಅಬ್ದುಲ್ ಹಕೀಮ್,ಅಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕ್ರೀಡಾಕೂಟವನ್ನು ಉದ್ಘಾಟಿಸುತ್ತಿರುವ ಡಾ.ಸುರೇಶ್.ವಿ.ನಾಡಗೌಡರ, ಕುಲಪತಿಗಳು ಹಾಗೂ ಕುಲಸಚಿವರು, ಕ.ರಾ.ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯ, ಗದಗ ಹಾಗೂ ಇತರರು
ಈ ಕ್ರೀಡಾಕೂಟದಲ್ಲಿ 100,400,800,5000 ಹಾಗೂ 10000 ಮೀಟರ್ಗಳ ಓಟದ ಸ್ಪರ್ಧೆ, ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್ ಜಂಪ್, ರಿಲೇ, ಜಾವೆಲಿಯನ್ ಥ್ರೋ, ಗುಂಡು ಎಸೆತ, ಚಕ್ರ ಎಸೆತ, ನಡಿಗೆಯ ಸ್ಪರ್ಧೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಶ್ವವಿದ್ಯಾಲಯದ ಹತ್ತು ಕೋಸರ್್ಗಳ ವಿದ್ಯಾಥರ್ಿಗಳು ಈ ಸ್ಪರ್ಧೆಗಳಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು.ಬೇರೆ ಬೇರೆ ವಿಶ್ವವಿದ್ಯಾಲಯಗಳು ಏರ್ಪಡಿಸುವ ಕ್ರೀಡಾ ಸ್ಪಧರ್ೆಗಳಲ್ಲಿ ಭಾಗವಹಿಸಲು ವಿಶ್ವವಿದ್ಯಾಲಯದ ಕ್ರೀಡಾ ಸ್ಪಧರ್ಿಗಳನ್ನು ಆಯ್ಕೆ ಮಾಡಲಾಯಿತು.