ವಿಜಯಪುರ 24: ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ಜೀವನ ಸಾಗಿಸಿದರೇ ಯಾವುದೇ ರೋಗಗಳನ್ನು ಬರಲಾರದ ಹಾಗೇ ಹಾಗೂ ನಿಯಂತ್ರಿಸಲು ಸಾಧ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಹೇಳಿದರು.
ಅವರು ವಿಜಯಪುರದ ಸಂತ ಅನ್ನಮ್ಮನವರ ಚರ್ಚನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಷನ್ಸ್ ಸೊಸಾಯಿಟಿ ಬೆಂಗಳೂರು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವಿಜಯಪುರ, ಜಿಲ್ಲೆಯ ಎಆರ್‌ಟಿ ಮತ್ತು ಐಸಿ ಟಿಸಿ ಹಾಗೂ ಸಮರಾ್ಣ ಅಭಿವೃದ್ಧಿ ಸಂಸ್ಥೆ ಸಿಂಧನೂರ ಸಂಪರ್ಕ ಕಾರ್ಯಕರ್ತರ ಯೋಜನೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಪಿಎಲ್ ಎಚ್‌ಐವಿ ಗಳ ವಧುವರರ ರಾಜ್ಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿಗೆ ಹಲವಾರು ಖಾಯಿಲೆಗಳು ನೋಡುತ್ತಿದ್ದೇವೆ. ಅವುಗಳನ್ನು ನಿಯಂತ್ರಿಸಲು ಜಾಗೃತಿಯ ಜೊತೆಗೆ ನಮ್ಮಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ವಿಜಯಪುರ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ರಾಜ್ಯ ಮಟ್ಟದ ಸಮ್ಮೇಳನ ಹಮ್ಮಿಕೊಂಡಿದ್ದು ಅತ್ಯಂತ ಹೆಮ್ಮೆಯ ವಿಷಯ. ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂಧಿಗಳ ಕೆಲಸ ಶ್ಲಾಘನೀಯವಾದ್ದು. ಇಂತಹ ಸಮಾವೇಶಗಳಿಂದ ಸುಂದರವಾದ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಚಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೋಳಿ ಅವರು, ಎಚ್.ಐ.ವಿ ಸೋಂಕಿತರು ಅಸ್ಪೃಶ್ಯರಲ್ಲ. ಮಾನಸಿಕವಾಗಿ , ಸಾಮಾಜಿಕವಾಗಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರೆ ಎಲ್ಲರ ಹಾಗೆ ಸದೃಢವಾದ ಜೀವನ ಸಾಗಿಸಲು ಸಾಧ್ಯವಿದೆ. ಕಳೆದ 25 ವರ್ಷಗಳಿಂದ ಎಷ್ಟೋ ಎಚ್.ಐ.ವಿ ಸೋಂಕಿತರನ್ನು ನೋಡಿದ್ದೀನಿ. ಅಲ್ಲದೇ ನಾನು ಕಾರ್ಯನಿರ್ವಹಿಸಿದ ಆಸ್ಪತ್ರೆಗಳಲ್ಲಿ ಎಆರ್‌ಟಿ ಮತ್ತು ಐಸಿಟಿಸಿ ಕೇಂದ್ರಗಳಲ್ಲಿ ಬರುವಂತಹ ರೋಗಿಗಳು ಅತ್ಯಂತ ಸದೃಢವಾಗಿ ಸಕಾರಾತ್ಮಕವಾಗಿ ಮನೋಭಾವನೆ ಹೊಂದಿ ಇತರರಿಗೆ ಮಾದರಿಯಾಗಿದ್ದಾರೆ. ಈ ಸಮಾವೇಶಕ್ಕೆ ಬಂದ ವಧು ವರರು ತಮ್ಮ ಆರೋಗ್ಯದ ಬಗ್ಗೆ ಕುಟುಂಬದ ಬಗ್ಗೆ ಕಾಳಜಿ ಹೊಂದಿರಬೇಕು. ಆರೋಗ್ಯ ನಿರ್ವಹಣೆಯಲ್ಲಿ ಸರಿಯಾಗಿ ಕಾಳಜಿ ಹೊಂದಿ ಜೀವನ ನಡೆಸುವಂತಹ ಜೀವನ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಮಲ್ಲನಗೌಡ ಬಿರಾದಾರ ಮಾತನಾಡಿ, ಪ್ರತಿ ವರ್ಷ ನಮ್ಮ ಇಲಾಖೆಯ ಜಿಲ್ಲೆಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಧು ವರರ ಸಮಾವೇಶವನ್ನು ಮಾಡುತ್ತಿದ್ದೇವೆ. ಇದರಿಂದ ಎಷ್ಟೋ ಜನ ಎಚ್‌ಐವಿ ಸೋಂಕಿತರಿಗೆ ತುಂಬಾ ಅನುಕೂಲವಾಗುತ್ತಿದೆ. ನಮ್ಮ ಜಿಲ್ಲೆಯ ಕಾರ್ಯಚಟುವಟಿಕೆಯನ್ನು ಇತರೆ ಜಿಲ್ಲೆಯ ಜನ ಪ್ರಶಂಸನೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುವುದು. ರಾಜ್ಯದ ಸೋಂಕಿತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವೇದಿಕೆಯ ಮೇಲೆ ಪೀಠರ ಅಲೇಕ್ಸಾಂಡರ್, ಪೂಜಾ ಟೆಲಿವಿಜನ್ ಮಾಲೀಕಾರಾದ ವಿಜಯಕುಮಾರ ಚವ್ಹಾಣ, ಅನೌಪಚಾರಿಕ ಸಂಸ್ಥೆಯ ಕೆವಿಎನ್ ಪಾಧರ, ಸಮರಾ್ಣ ಸಂಸ್ಥೆಯ ಯೋಜನಾ ನಿರ್ದೇಶಕರಾದ ರಾಮದಾಸ, ಎಆರ್‌ಟಿ ಕೇಂದ್ರ ವೈದ್ಯಾಧಿಕಾರಿಗಳಾದ ಶ್ವೇತಾ ಸನದಿ, ಡ್ಯಾಕೋ ಜಿಲ್ಲಾ ಮೇಲ್ವಿಚಾರಕರಾದ ಬಾಬುರಾವ ತಳವಾರ, ಜಿಲ್ಲಾ ಆಸ್ಪತ್ರೆಯ ಎಆರ್‌ಟಿ ಕೇಂದ್ರದ ಹಿರಿಯ ಆಪ್ತ ಸಮಾಲೋಚಕರಾದ ರವಿ ಕಿತ್ತೂರ, ಸಂಪರ್ಕ ಕಾರ್ಯಕರ್ತರ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ವಿಜಯಕುಮಾರ ಕಾಂಬಳೆ, ಉಪಸ್ಥಿತರಿದ್ದರು.
ಈ ಸಮಾವೇಶದಲ್ಲಿ 250 ಕ್ಕಿಂತಲೂ ಹೆಚ್ಚು ವಧುವರರು ಮತ್ತು ಪಾಲಕರು ಸದುಪಯೋಗ ಪಡೆದುಕೊಂಡರು. ಪ್ರಾರ್ಥನೆ ಶಿರಿನ ಮುಲ್ಲಾ ಮತ್ತು ಅನಿತಾ ಕುಂಬಾರ ಮಾಡಿದರು.
ಶ್ರೀಶೈಲ ಕೋಳಿ ಹಾಗೂ ಸಂತೋಷ ಕಾಂಬಳೆಯವರು ನಿರ್ವಹಿಸಿದರು.