ಅಂಬೇಡ್ಕರ ಓಣಿಯಲ್ಲಿ ಕಳ್ಳತನವಾಗಿದ್ದ ಬೈಕ್ ಪತ್ತೆ

Stolen bike found in Ambedkar Oni

ಮುಂಡಗೋಡ 17: ಪಟ್ಟಣದ ಅಂಬೇಡ್ಕರ್ ಓಣಿಯಲ್ಲಿ  ಮನೆಯ ಮುಂಭಾಗದಲ್ಲಿದ ಬೈಕ  ಕಳ್ಳತನ  ಮಾಡಿದ ಆರೋಪಿಯನ್ನು ಇಲ್ಲಿಯ ಪೋಲಿಸರು ಶುಕ್ರವಾರ ಪತ್ತೆ ಹಚ್ಚಿದ್ದಾರೆ. ಇಲ್ಲಿಯ ಅಂಬೇಡ್ಕರ್ ಓಣಿಯ ತುಕಾರಾಮ ಭಿಮಣ್ಣ ಕೊರವರ  ವಾಸಿಯಾದ ಎಂಬುವವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿತ್ತು. ನೀಡಿದ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬೈಕ್ ಕಳುವು ಮಾಡಿಕೊಂಡು ಹೋಗಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ  ಪಡೆದು ವಿಚಾರಣೆ ನಡೆಸಿದ ಕಳ್ಳತನ ಮಾಡಿದ ಬೈಕನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡಿದ್ದಾರೆ.  

ಎಸ್ಪಿ ಎಂ. ನಾರಾಯಣ, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ. ಮತ್ತು ಜಗದೀಶ ನಾಯ್ಕ, ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ ನೀಲಮ್ಮನವರ್, ಕ್ರೈಂ ಪಿಎಸ್‌ಐ ವಿನೋದ ಎಸ್‌.ಕೆ., ಪಿಎಸ್‌ಐ ಪರಶುರಾಮ ಮಿರ್ಜಿಗಿ, ಎ.ಎಸ್‌.ಐ ಶಂಕ್ರ​‍್ಪ ರಾಠೋಡ ಹಾಗೂ ಸಿಬ್ಬಂದಿ ಕೋಟೇಶ ನಾಗರವಳ್ಳಿ, ಮಹಾಂತೇಶ ಮುಧೋಳ ಹಾಗೂ ಸಂಜು ರಾಠೋಡ, ತಿರುಪತಿ ಚೌಡಣ್ಣವರ ಹಾಗೂ ಬಸವರಾಜ ಒಡೆಯರ ಕಾರ್ಯಾಚರಯಲ್ಲಿ ಭಾಗವಹಿಸಿದ್ದರು.