ಪೌರ ಕಾರ್ಮಿಕರನ್ನು ರಾಜ್ಯ ಸರ್ಕಾರಿ ನೌಕರೆರೆಂದು ಪರಿಗಣಿಸಲು: 2ನೇ ದಿನ ಮುಷ್ಕರ

Strike enters 2nd day to consider civic workers as state government employees

ಕಂಪ್ಲಿ 28: ಕರ್ನಾಟಕ ರಾಜ್ಯ ನೌಕರರ ಸಂಘದ ಕಂಪ್ಲಿ ಶಾಖೆಯಿಂದ ಪಟ್ಟಣದ ಪುರಸಭೆ ಆವರಣದಲ್ಲಿ ಪೌರ ನೌಕರರು ಕರ್ತವ್ಯಕ್ಕೆ ಗೈರು ಕಸ ಸಂಗ್ರಹ ವಿಲೇವಾರಿ ಸ್ವಚ್ಛತೆ ಒಳಚರಂಡಿ ನಿರ್ವಾಹಣೆ ಸ್ಥಗಿತ ಗೂಳಿಸಿ  ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ 2ನೇದಿನದ ಅನಿರ್ದಿಷ್ಟಾವಧಿ ಮುಷ್ಕರ ಬುಧುವಾರ ನಡೆಸಿದರು.

ನಂತರ ಕರ್ನಾಟಕ ರಾಜ್ಯ ನೌಕರರ ಸಂಘದ ಕಂಪ್ಲಿ ಶಾಖೆ ಅಧ್ಯಕ್ಷ ಪ್ರಕಾಶಬಾಬು ಮಾತನಾಡಿ, ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿರೆಂದು ಪರಿಗಣಿಸಿ ಜ್ಯೋತಿ ಸಂಜೀವಿನಿ ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರ ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಸಹಾಯಕರು, ಚಾಲಕರು, ಲೋಡರ್ಸ್‌, ಕ್ಲೀನರ್ಸ್‌, ಗಾರ್ಡನರ್, ಸ್ಯಾನಿಟರಿ ಸೂಪ್ರವೈಸರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸುವುದು. ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಖಾಯಂ ಮಾಡುವುದು. ಎಲ್ಲಾ ನೌಕರರಿಗೆ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ವೇತನ ನೀಡುವುದು. ಈ ಎಲ್ಲಾ ಬೇಡಿಕೆಗಳನ್ನು ಈಡೇರುವವರೆಗೂ ಮುಷ್ಕರ ಮುಂದುವರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ನಾಗಭೂಷಣ(ಆರ್‌ಒ), ಉಪಾಧ್ಯಕ್ಷ ಎನ್‌.ಓಬಳೇಶ, ಕಾರ್ಯದರ್ಶಿ ರಮೇಶ ಬೆಳಂಕರ್, ಉಪ ಕಾರ್ಯದರ್ಶಿ ವೆಂಕಟೇಶ, ಇಂಜಿನಿಯರ್ ಮೇಘನಾ, ಸಿಬ್ಬಂದಿ ವರ್ಗದವರಾದ ವಿಜಯಲಕ್ಷ್ಮೀ, ಶಾಹಿದಾ, ಆಂಜಿನೇಯ, ಭರಮಪ್ಪ ಸೇರಿದಂತೆ ಪೌರ ಕಾರ್ಮಿಕರು ಇದ್ದರು.