ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿ

ಲೋಕದರ್ಶನ ವರದಿ

ಕೊಪ್ಪಳ 19: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಾಮಾನ್ಯ ಪ್ರಯೋಜನೆಯಡಿಯಲ್ಲಿ ಈಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಡನಾಪುರ ಹಾಗೂ ಗುರುಕೊಟ್ರೇಶ್ವರ ನಾಟ್ಯಕಲಾರಂಗ ಜಿ. ನಾಗಲಾಪುರ ಇವರಿಂದ ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಹುಲಿಗೆಮ್ಮ ದೇವಸ್ಥಾನ ಆವರಣದಲ್ಲಿ ದಿನಾಂಕ: 19 ರಂದು ಸುಗಮ ಸಂಗೀತ ಕಾರ್ಯಕ್ರಮವನ್ನು ಎಸ್. ಶ್ಯಾವಳಿಗೆಪ್ಪ ರಂಗಭೂಮಿ ಕಲಾವಿಧರು ಮತ್ತು ಕಾತರಕಿ ಗ್ರಾಮದ ಕಲಾವಿಧರು ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಚಂದ್ರಮಪ್ಪ ಕಣಕಾಲ್ ವಹಸಿದ್ದರು. ಅಳವಂಡಿ ಶ್ರೀಗಳು ಮತ್ತು ಗವಿಮಠ ಶ್ರೀಗಳು ಸಮಾರಂಬದ ದಿವ್ಯಾಸಾನಿಧ್ಯ ವಹಿಸಿದ್ದರು. ಕೊಟ್ರಯ್ಯ ಅಬ್ಬಿಗೆರಿ ಮತ್ತು ವೆಂಕನಗೌಡ ಹಿರೇಗೌಡ್ರ ಎ.ಪಿ.ಎಂ.ಸಿ. ಅಧ್ಯಕ್ಷರು, ಶಿವನುಭವದ ಎಲ್ಲಾದ ಶರಣರು ಸೇರಿದಂತೆ ಕಾತರಕಿ ಗ್ರಾಮದ ಮುಖಂಡರು ಸಭಾಗವಹಿಸಿದ್ದರು.