ಶಿಕ್ಷಕರನ್ನು ಕೂಡಲೇ ಶಾಲೆಗಳಿಗೆ ನಿಯೋಜಿಸಬೇಕು

Teachers should be assigned to schools immediately.

ಶಿಕ್ಷಕರನ್ನು ಕೂಡಲೇ ಶಾಲೆಗಳಿಗೆ ನಿಯೋಜಿಸಬೇಕು

ಕೊಪ್ಪಳ 18: ಜಿಲ್ಲಾ ಸಮಿತಿ 29ರಿಂದ ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷವು ಆರಂಭವಾಗಲಿದೆ. ಶಾಲೆಗಳ ಆರಂಭಕ್ಕೂ ಮುನ್ನ ಪ್ರವೇಶಾತಿ ನಡೆಯಬೇಕು. ಆದರೆ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಜಾತಿಗಣತಿಗೆ ನೀಯೋಗಿಸಲಾಗಿದೆ. ಈಗಾಗಲೇ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಕುಸಿದಿರುವ ಸರ್ಕಾರಿ ಶಾಲೆಗಳ ದಾಖಲಾತಿಯ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ. ಖಾಸಗಿ ಶಾಲೆಗಳ ಶಿಕ್ಷಕರು ಕಳೆದ ತಿಂಗಳಿನಿಂದ ದಾಖಲಾತಿಯಲ್ಲಿ ನಿರತರಾಗಿರುವಾಗ ಸರ್ಕಾರಿ ಶಾಲೆಗಳಿಂದ ಮಕ್ಕಳನ್ನು ದೂರ ವಿರಿಸಿದಂತಾಗುತ್ತದೆ. ಸರ್ಕಾರವು ಈ ಕೂಡಲೇ ಗಮನಹರಿಸಿ ಸರ್ಕಾರಿ ಶಾಲೆಯ ಶಿಕ್ಷಕರನ್ನು ಗಣತಿಯ ಕೆಲಸದಿಂದ ಬಿಡುಗಡೆಗೊಳಿಸಿ ಸರ್ಕಾರಿ ಶಾಲೆಗಳ ದಾಖಲಾತಿಗಾಗಿ ನಿಯೋಗಿಸಬೇಕೆಂದು ಎಐಡಿಎಸ್‌ಓ ಜಿಲ್ಲಾ ಸಮಿತಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತದೆ.