ನವದೆಹಲಿ, ನ 24 : ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಅವರಿಗೆ ಸಕರ್ಾರ ರಚಿಸಲು ಅವಕಾಶ ಮಾಡಿಕೊಟ್ಟ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಕಾಂಗ್ರೆಸ್, ಎನ್ ಸಿ ಪಿ, ಶಿವಸೇನೆ ಸಲ್ಲಿಸಿರುವ ಅಜರ್ಿಯ ಬಗ್ಗೆ ಭಾನುವಾರ ಸುಪ್ರೀಂಕೋಟರ್್ ನೀಡಲಿರುವ ತೀಪು ಹಲವು ರೋಚಕ ವಿದ್ಯಮಾನಗಳಿಗೆ ಸಾಕ್ಷಿಯಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಇಂದು ಸುಪ್ರೀಂಕೋಟರ್್ ನತ್ತ ನೆಟ್ಟಿದೆ.
ಭಾನುವಾರದಂದೇ ವಿಶ್ವಾಸಮತ ಸಾಬೀತುಪಡಿಸಲು ನಿದರ್ೆಶನ ನೀಡಬೇಕೆಂದು ಮೂರೂ ಪಕ್ಷಗಳು ಒತ್ತಾಯ ಮಾಡಿವೆ. ಆದರೆ ಮಹಾರಾಷ್ಟ್ರದಲ್ಲಿ ಇನ್ನೂ ಹೊಸ ವಿಧಾನಸಭೆ ರಚನೆಯಾಗಿಲ್ಲ. ಸದಸ್ಯರು ಪ್ರಮಾಣವಚನ ತೆಗೆದುಕೊಂಡಿಲ್ಲ. ಸ್ಪೀಕರ್ ಆಯ್ಕೆ ನಡೆದಿಲ್ಲ. ಹೀಗಾಗಿ ನ್ಯಾಯಾಲಯ ಬಹುಮತ ಸಾಬೀತುಪಡಿಸುವಂತೆ ಯಾರಿಗೆ ನಿದರ್ೆಶನ ಕೊಡಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಒಂದು ತಿಂಗಳ ರಾಜಕೀಯ ಅನಿಶ್ಚಿತತೆ, ಬಿಕ್ಕಟ್ಟಿನ ನಂತರ ಶುಕ್ರವಾರ ರಾತ್ರಿ ನಡೆದ ನಾಟಕೀಯ, ರೋಚಕ ವಿದ್ಯಮಾನದ ನಂತರ ರಾಜ್ಯಪಾಲ ಭಗತ್ ಸಿಂಗ್ ಕೋಶಾರಿ ಅವರು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರಿಗೆ ಸಕರ್ಾರ ರಚನೆಗೆ ಆಹ್ವಾನ ನೀಡಿದ್ದು ಅದರಂತೆ ಫಡ್ನವಿಸ್ ಮುಖ್ಯಮಂತ್ರಿಯಾಗಿ, ಎನ್ ಸಿ ಪಿ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ನಂತರದ ಬೆಳವಣಿಗೆಯಲ್ಲಿ ಇದಕ್ಕೆ ಎನ್ ಸಿ ಪಿ ಯ ಸಮ್ಮತಿ ಇಲ್ಲ ಎಂದು ಹೇಳಿದ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ತಮ್ಮ ಸೋದರ ಸಂಬಂಧಿ ಅಜಿತ್ ಪವಾರ್ ಅವರನ್ನು ತೆಗೆದುಹಾಕಿದ್ದರು. ಈ ಹಿನ್ನೆಲೆಯಲ್ಲಿ ಕೋಟರ್್ ಇಂದು ನೀಡಲಿರುವ ತೀಪರ್ಿನ ಬಗ್ಗೆ ದೇಶದ ಜನತೆಯಲ್ಲಿ ಕಾತರ ಮತ್ತು ಕುತೂಹಲ ಹೆಚ್ಚಾಗಿದೆ.