ತಂಬಾಕು ಉತ್ಪನ್ನಗಳ ಸೇವನೆ ಅಪಾಯಕಾರಿ: ಈಶಪ್ಪ ಭೂತೆ

ಧಾರವಾಡ೩೧: ತಂಬಾಕು ಮತ್ತು ಅದರ ಉತ್ಪನ್ನಗಳಾದ ಬೀಡಿ,ಸಿಗರೇಟು ಸೇವನೆ ಆರೋಗ್ಯಕ್ಕೆ ಮಾರಕವಾಗಿವೆ. ಯುವಸಮುದಾಯ, ಮಹಿಳೆಯರು ಈ ವ್ಯಸನಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಈಶಪ್ಪ ಕೆ.ಭೂತೆ ಅಭಿಪ್ರಾಯಪಟ್ಟರು.

        ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿಂದು (ಶುಕ್ರವಾರ)ಬೆಳಿಗ್ಗೆ ಡಾ.ಮಲ್ಲಿಕಾಜರ್ುನ ಮನಸೂರ ಕಲಾಭವನದ ಆವರಣದಲ್ಲಿ  ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ  ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

   ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ  ಬಹುತೇಕ ಜಂಕ್ ಫುಡ್ ಸೇವನೆ ರೂಢಿಯಲ್ಲಿದೆ. ನಾವು ಸೇವಿಸುವ ಆಹಾರದಲ್ಲಿಯೇ ಸಾಕಷ್ಟು ಕಲಬೆರೆಕೆ ಅಂಶಗಳು ಇರುತ್ತವೆ. ಇಂತಹ ಸ್ಥಿತಿಯಲ್ಲಿ ತಂಬಾಕು ಮತ್ತು ಅದರ ಉತ್ಪನ್ನಗಳನ್ನು ಸೇವಿಸುವುದು ಆರೋಗ್ಯದ ಮೇಲೆ ತೀವ್ರತರನಾದ ಪರಿಣಾಮ ಉಂಟು ಮಾಡುತ್ತದೆ. ಉತ್ತರ ಕನರ್ಾಟಕ ಪ್ರದೇಶದ ಜಿಲ್ಲೆಗಳಲ್ಲಿ ಎಲೆ, ಅಡಿಕೆಯೊಂದಿಗೆ ತಂಬಾಕು, ಗುಟಖಾ ಉತ್ಪನ್ನಗಳನ್ನು ಬಳಸುವ ರೂಢಿ ಅಧಿಕವಾಗಿಸಿರುವುದು ಕಂಡು ಬರುತ್ತದೆ. ಸಕರ್ಾರದ ವಿವಿಧ ಕಚೇರಿಗಳಲ್ಲಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡೇ ಕೋಟ್ಪಾ ಕಾಯ್ದೆಯಡಿ ಕಾಯರ್ಾಚರಣೆ ನಡೆಸಲು ಸೂಚಿಸಲಾಗಿದೆ ಎಂದರು.

   ಸಾರ್ವಜನಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಜಾಗೃತಿ ಹಾಗೂ ಜ್ಯುಬಿಲಿ ವೃತ್ತದಲ್ಲಿ ಮಾನವ ಸರಪಳಿ ನಿಮರ್ಿಸಿ ತಂಬಾಕು ವಿರೋಧಿ ಘೋಷಣೆಗಳನ್ನು ಕೂಗಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ, ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಚಿಣ್ಣನ್ನವರ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಗಜಾನನ ಮನ್ನಿಕೇರಿ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿ.ಡಿ.ಕಪರ್ೂರಮಠ, ಜಿಲ್ಲಾ ವಾತರ್ಾಧಿಕಾರಿ ಮಂಜುನಾಥ ಡೊಳ್ಳಿನ, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಸುಜಾತಾ ಹಸವೀಮಠ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಶಿವಕುಮಾರ್ ಮಾನಕರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಲ್.ಎಸ್.ಅಂಬಲಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಮಹಾಂತೇಶ ಉಳ್ಳಾಗಡ್ಡಿ, ಎಂ.ಐ. ಕಲ್ಲಪ್ಪನವರ, ವೀಣಾ ಎನ್., ವಿಜಯಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು , ಮದೀನಾ ಕಾಲೇಜು,ಎಎನ್ಎಂ ತರಬೇತಿ ಕೇಂದ್ರ ಹಾಗೂ ಜರ್ಮನ್ ಆಸ್ಪತ್ರೆಯ ವಿದ್ಯಾಥರ್ಿಗಳು ಹಾಗೂ ಸಲಾಂ ಮುಂಬೈ ಫೌಂಡೇಶನ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.