ಅಪರಿಚಿತ ಗಂಡಸಿನ ಮೃತ ದೇಹ ಪತ್ತೆ

The dead body of an unknown man was found

ಬೆಳಗಾವಿ ಡಿ.30: ಬೆಳಗಾವಿ ಜಿಲ್ಲೆಯ ಬಿಮ್ಸ ಆಸ್ಪತ್ರೆಯ ಆವರಣದಲ್ಲಿರುವ ಗಣಪತಿ ಮಂದಿರದ ಹತ್ತಿರ ಅಪರಿಚಿತ ವ್ಯಕ್ತಿ ಅಶ್ವಸ್ಥನಾಗಿ ಮಲಗಿದ್ದು, ಡಿಸೆಂಬರ್‌. 30 ರಂದು ಚಿಕಿತ್ಸೆಗಾಗಿ ಬಿಮ್ಸ ಆಸ್ಪತ್ರೆಗೆ ದಾಖಲಿಸಿದಾಗ ಮರಣ ಹೊಂದಿರುತ್ತಾನೆ ಎಂದು ದೂರು ದಾಖಲಾಗಿದೆ. 

ಅಪರಿಚಿತ ವ್ಯಕ್ತಿಯ ವಿವರ: ಅಂದಾಜು 50 ರಿಂದ 60 ವಯಸ್ಸು, 5’8 ಎತ್ತರ, ಗೋಧಿಗೆಂಪು ಮೈಬಣ್ಣ, ದುಂಡು ಮುಖ, ನೀಲಿ ಬಿಳಿ ಬಣ್ಣದ ಲೈನಿಂಗ ಹಾಫ್ ತೋಳಿನ ಶರ್ಟ ಹಾಗೂ ನೀಲಿ ಬಣ್ಣದ ಜಿನ್ನ್‌ ಪ್ಯಾಂಟ್ ಧರಿಸಿತ್ತಾರೆ. 

ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬೆಳಗಾವಿ ಎ.ಪಿ.ಎಮ್‌.ಸಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ದೂರವಾಣಿ. 9480804106, 9480804047 ಅಥವಾ  ಎ.ಪಿ.ಎಮ್‌.ಸಿ ಪೊಲೀಸ್ ಠಾಣೆಯ ದೂರವಾಣಿ. 0831 2405250 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಎ.ಪಿ.ಎಮ್‌.ಸಿ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.