ಇಂದಿನಿಂದ ಐತಿಹಾಸಿಕ ಮಹಾಲಿಂಗೇಶ್ವರ ಜಾತ್ರೆ

ಮೀರಾ. ಎಲ್. ತಟಗಾರ 

ಮಹಾಲಿಂಗಪೂರ೧೨ :    ಭಾರತೀಯರ ಬದುಕಿನಲ್ಲಿ ಜಾತ್ರೆಗಳು ಪ್ರಮುಖವಾದುವು. ಮಹಾತ್ಮರ ಹೆಸರಲ್ಲಿ ಪ್ರತಿ ನಗರ, ಪಟ್ಟಣ,ಗ್ರಾಮಗಳಲ್ಲಿ  ಸಾವಿರಾರು ವರ್ಷಗಳಿಂದ ಜರುಗಿ ಬರುತ್ತಿರುವ  ಸಂಪ್ರದಾಯವಾಗಿದೆ.

 ಅಂತೆಯೇ ಕನರ್ಾಟಕದಾದ್ಯಂತ ಹೆಸರು ಮಾಡಿರುವ ಹಲವು ಜಾತ್ರೆಗಳಲ್ಲಿ   ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪೂರ ಗುರು ಮಹಾಲಿಂಗೇಶ್ವರ ಜಾತ್ರೆ ಪ್ರಸಿದ್ಧಿ ಪಡೆದಿದೆ.ಈ ಊರಿಗೆ ತನ್ನದೆ ಇತಿಹಾಸವಿದೆ. 

  ನರಗಟ್ಟಿ ಗ್ರಾಮ ಮಹಾಲಿಂಗಪುರ ಆಗಿದ್ದು:  ಸುಮಾರು ಎಂಟನೂರು ವರ್ಷಗಳ ಹಿಂದೆ ಢಪಳಾಪುದಿಂದ ಆಗಿನ ನರಗಟ್ಟಿ ಗ್ರಾಮಕ್ಕೆ  ಗುರು ಶ್ರೀ ಮಹಾಲಿಂಗೇಶ್ವರ ಮುನಿವರ್ಯರ ಆಗಮನವಾಯಿತು.ಭಗವಂತನ ಇಚ್ಛೆಯಂತೆ  ಗ್ರಾಮದ ಎಲ್ಲ ಜನಾಂಗಗಳಲಿದ್ದ ಕಂದಾಚಾರ, ಮೂಢಾಚರಣೆಗಳನ್ನು ತೊಡೆದು ಹಾಕುವಲ್ಲಿ ಶ್ರೀಗಳ  ಶ್ರಮ ಅಪಾರ,  ಜನರಲ್ಲಿ ಅಧ್ಯಾತ್ಮದ ದೀವಿಗೆ ಹಚ್ಚಿ ಭಕ್ತಿ ಭಾವ ಬೆಳೆಸಿ ಸೌಹಾರ್ದತೆಯಿಂದ ಬದುಕಲು ಅನುವು ಮಾಡಿದ ಯೋಗಿ. ಅನೇಕ ವಿಸ್ಮಯಗಳನ್ನು ಮಾಡಿ ಜನತೆಯ ಹೃದಯ ಗೆದ್ದ ಮಹಾನ್ ಚೇತನ.ಇದರಿಂದಲೆ ನಮ್ಮ ಪೂರ್ವಜರು ಗ್ರಾಮ ನಾಮ ಬದಲಾಯಿಸಿ ಶ್ರೀಗಳ ನಾಮಕ್ಕೆ ಪೂರ ಸೇರಿಸಿ (ಮಹಾಲಿಂಗಪೂರ) ಮಾಡಿ  ಗೌರವಿಸಿದರು.   

 ಶಿವಭಕ್ತೆ ಸಿದ್ದಾಯಿ(ಅಪ್ಪವಾಯಿ):

  ಅಪ್ಪಟ ಶಿವಭಕ್ತೆಯಾಗಿದ್ದಳು.ತನ್ನಿಂದ ಶ್ರೀಗಳ ಅಗಲಿಕೆ (ಸೇವೆಯಿಂದ ವಂಚಿತ) ಸಹಿಸಲು ಆಗುವುದಿಲ್ಲವೆಂದರಿತ ಮನವಿ ಸಲ್ಲಿಸಿದಾಗ ಶ್ರೀಗಳು  ತಮ್ಮ ಇರುವಿಕೆಯ ಕುರುಹಿಗಾಗಿ  ಶಿರದಲ್ಲಿಯ  ಜಟಗಳನ್ನು  ಸಿದ್ದಾಯಿಗೆ  ನೀಡಿದರು.ಎಂದು ಪ್ರತಿಥಿ ಇದೆ. ಈಗಲೂ ಶಾವಣ ಮಾಸದಲ್ಲಿ ಒಂದು ತಿಂಗಳವರೆಗೆ ಹಾಗೂ ಅಡದಿನಗಳಲ್ಲಿ ಬೆಳೆಯುವ ಜಟವನ್ನು ತೊಳೆಯುವ ಸಂಪ್ರದಾಯವಿದೆ.ಈ ಜಟಾಭಿಷೇಕವನ್ನು ಕಣ್ತುಂಬಿಕ್ಕೊಳಲು ಹೊರ ರಾಜ್ಯಗಳಿಂದ, ದೂರದೂರಿನಿಂದ ಭಕ್ತರು ಬರುತ್ತಾರೆ. ಅಲ್ಲದೆ  ಸೂರ್ಯ ಚಂದ್ರ ಇರುವವರೆಗೂ ಈ ಕಾರ್ಯ ಮುಂದುವರೆಯುವುದು ಎಂಬ ಬಲವಾದ ನಂಬಿಕೆ ಭಕ್ತ ಜನರದ್ದು. 

  ರಾಜ ಮಾಲೋಜಿರಾಯಗೆ ಸಹಕಾರ:  ಘೋರ ಯುದ್ಧ ನಡೆದ ಸಮಯ ರಾಜನ ಕರದಿಂದ ಖಡ್ಗ ಜಾರಿ ನೆಲಕ್ಕೆ ಬಿದ್ದು ಪ್ರಾಣ ಕಳೆದುಕ್ಕೊಳ್ಳುವ ಸಂಭವ ಆ ವೇಳೆಯಲ್ಲಿ ಶ್ರೀಗಳ ಸಹಾಯ ಕೋರಿದ ರಾಜ ಕ್ಷಣಾರ್ಧದಲ್ಲಿ ಮತ್ತೆ ಖಡ್ಗ ಕೈಯಲ್ಲಿ ಬರಲು ಅಪಾಯದಿಂದ ಮುಕ್ತಿ ಹೊಂದಿದ. 

 ಮೃತ ಬಾಲಕಿ ಬದುಕಿದ ಘಟನೆ: 

 ಶ್ರೀಗಳ ಭೇಟಿಗಾಗಿ ರಾಜ ಮಾಲೋಜಿರಾಯ  ಆನೆ ಅಂಬಾರಿ ಮೇಲೆ ಆಸೀನರಾಗಿ ಆಗಮಿಸುವ ವೇಳೆ ಅಪಾರ ಜನಸ್ತೋಮದ ಮಧ್ಯ ಆನೆ ಕಾಲಿಗೆ ಸಿಲುಕಿ ಭಕ್ತೆ ಬಾಲಕಿ ಮೃತಪಟ್ಟ ಘಳಿಗೆಯಲ್ಲಿ  ರಾಜನ ವಿನಂತಿಯಂತೆ ಶ್ರೀಗಳು ಪರಮಾತ್ಮನ ಆಜ್ಞೆಯಂತೆ ಬಾಲಕಿಯನ್ನು ಬದುಕಿಸಿದರು. ಎನ್ನುವ ಮಾತು ತಲತಲಾಂತರದಿಂದ ಕೇಳಿ ಬರುತ್ತಿರುವ ಮಾತಾಗಿದೆ.ರಾಜ ಪ್ರಸನ್ನನಾಗಿ  ನಮ್ಮ ಸಂಸ್ಥಾನದಿಂದ ತಮಗೆ ಏನಾದರೂ ಸಹಾಯ ಸಹಕಾರ ಯಾಚಿಸಿರಿ ಎಂದು ಬೇಡಿಕೊಂಡನು.  

   ಮಹಾಲಿಂಗೇಶ್ವರರಿಂದ ಭಕ್ತ ಜನರ ಕಾಳಜಿ: ಮಹಾರಾಜರೇ ತಮ್ಮ ರಾಜ ದಬರ್ಾರಿನಲ್ಲಿ ನನಗೆ ಸಹಾಯ ನೀಡುವುದಕ್ಕಿಂತಲೂ ತಮ್ಮ ಕಾಲಾವಧಿಯಲ್ಲಿ ಎಲ್ಲ ಧಮರ್ಿಯ ಜನರನ್ನು ಸೌಹಾರ್ದತೆಯಿಂದ ನಡೆಸಿಕೊಂಡು ಹೋದರೆ ಅದಕ್ಕಿಂತ ಹೆಚ್ಚಿನ ಸಹಾಯ ನನಗೆ ಬೇರೊಂದು ಬೇಕಾಗಿಲ್ಲ ಎಂದು ನುಡಿದರು ದೇವಸ್ತಾನಕ್ಕೆ ನೂರಾರು ಎಕರೆ ಭೂಮಿಯನ್ನೂ ಸಹ ಉಂಬಳಿಯಾಗಿ ನೀಡಿದ ಎನ್ನುವ ಸನದು ಈ ಹೊತ್ತಿಗೂ ಪೆಟ್ಟಿಗೆಯಲ್ಲಿ ಇತಿಹಾಸ ಹೇಳುತ್ತ ಭದ್ರವಾಗಿದೆ. 

          ಭಾವೈಕ್ಯತೆಯ ಬೀಡು: ಮಹಾಲಿಂಗೇಶ್ವರರು ಪುರದ  ಜನ ಐಕ್ಯತೆಯಿಂದ ಬಾಳಲು ಅವರಲ್ಲಿಯ ಮಾನವೀಯತೆಯನ್ನು ಬಡಿದೆಬ್ಬಿಸಿದರು.ನಿಜ ಧರ್ಮಕ್ಕನುಸಾರವಾಗಿ ಜೀವನ ಸಾಗಿಸಲು ಜನತೆಯಲ್ಲಿ ಅರುವು ಮೂಡಿಸಿ ,  ಮುಸ್ಲಿಂ ಬಾಂಧವರಾದಿಯಾಗಿ ಎಲ್ಲ ಸಮಾಜಗಳ ಜನರು ಕಷ್ಟ ಕಾರ್ಪಣ್ಯಗಳನ್ನು ಶ್ರೀಗಳಲ್ಲಿ ಅರಿಕೆ ಮಾಡಿಕೊಂಡಾಗ  ಸವರ್ೆ ಜನಃ ಸುಖಿನೋಭವಂತು ಎನ್ನುವಂತೆ ಪರಿಹಾರ ಸೂಚಿಸಿ ಸರ್ವರ ಮನ ಗೆಲ್ಲುತಿದ್ದರು. ಎಲ್ಲ ಸಮಾಜಗಳ  ಮೇಲಿರುವ  ಪ್ರೀತಿ,ವಿಶ್ವಾಸ ಎದ್ದು  ಕಾಣುತ್ತದೆ. ಅಂದಿನಿಂದ  ಮುಸ್ಲಿಂರು,ಹಿಂದುಗಳು   ಮಹಾತ್ಮರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಅನೋನ್ಯತೆಯಿಂದ ಬದುಕು ಸಾಗಿಸಿ  ಪರರಿಗೆ ಮಾದರಿಯಾಗಿದ್ದಾರೆ. 

   ಪುರ ಒಡೆಯನ ಬಗ್ಗೆ ಮುಸ್ಲಿಮರ ಕಾಳಜಿ: ಮಹಾಲಿಂಗಪುರ ನಗರದಲ್ಲಿ ಇಂದಿಗೂ ಕೂಡ   ಸೋಮವಾರ ದಿವಸ ಮಹಾಲಿಂಗೇಶ್ವರ ದೇವಾಲಯಕ್ಕೆ ಮುಸ್ಲಿಂ ಬಾಂಧವರು ತಪ್ಪದೇ ಭೇಟಿ ನೀಡಿ  ದರ್ಶನ ಪಡೆಯುವರು. ಈ ದಿನ  ಮುಸ್ಲಿಮರು, ಮುಸ್ಲಿಮೇತರ ಅನೇಕ ಜಾತಿ ಸಮುದಾಯಗಳ ಜನರು ಮಾಂಸಾಹಾರ ಭಕ್ಷ್ಯ ನೆ ಮಾಡುವುದಿಲ್ಲ.ಮೇಲಾಗಿ ಖಸಾಯಿಖಾನೆ, ಖಾನಾವಳಿಗಳಿಗೂ ಅಂದು ರಜೆ ಇರುತ್ತವೆ 

  ಅಪ್ಪನವರ ಭಾವಿ: 

 ಭಾವಿ ತೋಡುವಾಗ ಜನ ನೀರು ಕಾಣದೆ ಕಂಗಾಲಾದ ಕ್ಷಣದಲ್ಲಿ ಶ್ರೀಗಳ ಪರಮ ಕೃಪೆಯಿಂದ ಅಗಾದ ನೀರು ಹರಿಯತೊಡಗಿತು.ನಗರದ ಹಿಂದು ಭಾಂಧವರು ಇಂದೂ ಸಹ  ಇದೆ ಭಾವಿಯ ನೀರನ್ನು (ಬಸವತೀರ್ಥ) ಪೂಜೆಗೆ  ಉಪಯೋಗಿಸುತ್ತಾರೆ. 

ವರುಣನ ಕೃಪೆ ನಿಂತಿಲ್ಲ: 

 ತೇರಿನಲ್ಲಿ ಸಿಂಗರಿಸಿದ ಮೂತರ್ಿಯನ್ನು ಕುಳ್ಳಿರಿಸಿ ಸಂಪ್ರದಾಯದಂತೆ  ಪೂಜೆಯೊಂದಿಗೆ ತೇರು ಹೊರಡಲು ಸಿದ್ಧವಾಗುತ್ತಿದ್ದಂತೆ ಮಳೆರಾಯ ಆಗಮಿಸುತ್ತಾನೆ. ನಾಲ್ಕು ಹನಿಯಾದರೂ ಮಳೆ ಆಗಲೇಬೇಕು.  

  ಉತ್ಸವದ ಮೊದಲಿನ ದಿನ ಸೆ. 13 ರಂದು ಶುಕ್ರವಾರ   ಮಹಾಲಿಂಗೇಶ್ವರ ಹಾಗೂ ಚನ್ನಗಿರಿಶ್ವರ ದೇಗುಲದಲ್ಲಿ ಜಟೋತ್ಸವ ಹಾಗೂ ಅನ್ನ ಪ್ರಸಾದ, ಸೆ. 14 ರಂದು  ತೇರಿನ ಉತ್ಸವ, ಮಹಾಲಿಂಗೇಶ್ವರ ದೇವಾಲಯದಿಂದ ಚನ್ನಗಿರಿಶ್ವರ ದೇವಾಲಯದವರೆಗೆ  ಸೆ. 15 ರಂದು ಮರು ಸ್ಥಾನಕ್ಕೆ ತೇರು ಆಗಮಿಸುವುದು. ಸತತ ಮೂರು ದಿನಗಳ ನಡೆಯುವ ಜಾತ್ರೆ ಜಂಗಿ ನಿಕಾಲಿ  ಕುಸ್ತಿಗಳೊಂದಿಗೆ  ಜಾತ್ರೆಯು ಅಂತಿಮ ಹಂತಕ್ಕೆ ತಲುಪುತ್ತದೆ.