ತಕ್ಷಣ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ಎಂ.ಬಿ.ಬೋರಣ್ಣವರ

ಲೋಕದರ್ಶನ ವರದಿ

ಮುಗಳಖೋಡ 22: ಪಟ್ಟಣದ ನಾಟಿವೈದ್ಯರಾದ ಅಲ್ಲಯ್ಯಾ ಹಿರೇಮಠ ಅವರ ಒಟ್ಟು ನಾಲ್ಕು ಎಕರೆ ಜಮಿನಿನ ಪೈಕಿ ಮೂರು ಎಕರೆ ಬಾಳೆಯನ್ನು ಬೆಳೆದಿದ್ದಾರೆ ಆ ಬಾಳೆಯ ತೋಟದ ತುಂಬಾ ಎಂಟು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ನೀರು ನಿಂತ್ತಿದ್ದು ಇನ್ನು ಕೆಲವು ದಿನಗಳು ಬಿಟ್ಟರೆ ಬಾಳೆಯು ಹಾಳಾಗುವ ಎಲ್ಲ ಲಕ್ಷಣಗಳು ಗೋಚರವಾಗಿತ್ತು. ಈ ವಿಷಯವನ್ನು ಮುಗಳಖೋಡ ಪುರಸಭೆ ಮುಖ್ಯಾಧಿಕಾರಿ ಎಂ.ಬಿ. ಬೋರಣ್ಣವರ ಅವರಿಗೆ ತಿಳಿಸಿದಾಗ ಅವರು ಮರುದಿನವೇ ಸ್ಪಂದಿಸಿ ಜೆಸಿಬಿ ಮುಖಾಂತರ ಕಾಲುವೆ ಕೊರೆದು ಬೆಳೆಯಲ್ಲಿ ನಿಂತ್ತಿದ ನೀರು ಹೊರಹೊಗುವಂತೆ ಮಾಡಿದರು.

    ಅದರೊಂದಿಗೆ ಪಟ್ಟಣದ ವಾರ್ಡ ನಂ 3ರ ರಲ್ಲಿ ಬಹಳ ವರ್ಷಗಳ ಬೇಡಿಕೆಯಾಗಿದ್ದ ಅಂಗನವಾಡಿ ಕೇಂದ್ರದ ಮುಂದುಗಡೆ ಚರಂಡಿ ನೀರು ಪಾಸಾಗಲು ಇದ್ದ ಪೈಪ್ ದುಸ್ಥಿತಿಯಲ್ಲಿ ನೀರು ಹೊಗುವುದು ಸ್ಥಗಿತಗೊಂಡು ಗಟಾರದ ನೀರು ಅಂಗನವಾಡಿ ಕೇಂದ್ರದ ಅಂಗಳದಲ್ಲಿ ಬಂದು ನಿಲ್ಲುತ್ತಿತ್ತು. 

ಈ ಚರಂಡಿ ಪೈಪ ಬೇರೆ ಹಾಕುವಂತ್ತೆ ಎಲ್ಲ ಜನರು ವಾರ್ಡಿನ ಪ್ರತಿನಿಧಿಗಳಿಗೆ ಮನವಿ ಮಾಡಿದರು ಅದು ಆಗಿರಲಿಲ್ಲ. ಅದು ಈಗ ಪುರಸಭೆ ಮುಖ್ಯಾದಿಕಾರಿಗಳಿಗೆ ಅದನನ್ನು ಸರಿಪಡಿಸುವಂತೆ ಮನವಿಯನ್ನು ಮಾಡಿದಾಗ ತಕ್ಷಣ ಅವರು ಆ ಪೈಪ್ವನ್ನು ಕೂಡಾ ತೆಗೆದು ಬೇರೆ ಪೈಪ್ ಅಳವಡಿಸಿ ಚರಂಡಿ ನೀರು ಸರಾಗವಾಗಿ ದಡ ಸೇರುವಂತ್ತೆ ಮಾಡಿದ್ದಾರೆ. 

ಈ ಸಾರ್ವಜನಿಕರ ಮನವಿಗಳಿಗೆ ತಕ್ಷಣ ಸ್ಪಂದಿಸಿದ ಮುಖ್ಯಾಧಿಕಾರಿಗಳಿಗೆ ನಾಟಿವೈದ್ಯರಾದ ಅಲ್ಲಯ್ಯಾ ಹಿರೇಮಠ ಅವರು ಮತ್ತು ಅಲ್ಲಿನ ಎಲ್ಲ ಹಿರಿಯರು ಜನಸಾಮಾನ್ಯರು ಕೃತಜ್ಞೆತೆಯನ್ನು ಸಲ್ಲಿಸಿದ್ದಾರೆ.