ಲೋಕದರ್ಶನ ವರದಿ
ಬೆಳಗಾವಿ 20: ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಿವಲ್ಲಿ ಮಹಾವಿದ್ಯಾಲಯಗಳಲ್ಲಿ ನಡೆಯುವ ಕಾರ್ಯಾಗಾರಗಳು ಸಹಕಾರಿಯಾಗಿವೆ ಎಂದು ಹಾಂಗ್ಕಾಂಗ್ನ ಎಟಿಐಟಿಎಸ್ ಸಿಸ್ಟಮ್ಸ್ ಸಂಸ್ಥೆ ಸಿಇಓ ಅಮಿತ್ ಲೋಬೋ ಅಭಿಪ್ರಾಯಪಟ್ಟರು.
ನಗರದ ಜೈನ್ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಉದ್ಯಮಶೀಲತೆ ಪ್ರಾರಂಭ ಮತ್ತು ಮಾರುಕಟ್ಟೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾರ್ಯಾಗಾರಗಳಲ್ಲಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ನಾವೀನ್ಯತೆ ಅಳವಡಿಸಿಕೊಳ್ಳಬೇಕು. ಉದ್ಯಮಶೀಲತೆಯತ್ತ ಸಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಕೆ.ಜಿ. ವಿಶ್ವನಾಥ ಮಾತನಾಡಿ, ಯಶಸ್ವಿ ಉದ್ಯಮಿಯಾಗಲು ಕೇವಲ ಪದವಿ ಸಾಲದು. ಆದರೆ ಉದ್ಯಮದಲ್ಲಿ ಯಶಸ್ಸು ಗಳಿಸುವ ಕೌಶಲ್ಯವನ್ನು ಅಳವಡಿಸಿಕೊಳ್ಳಲು ನೆರವಾಗುವುದರಲ್ಲಿ ಸಂಶಯವಿಲ್ಲ. ಯುವ ಜನಾಂಗ ಉದ್ಯೋಗ ಹುಡುಕುವ ಬದಲು ಉದ್ಯೋಗ ಸೃಷ್ಟಿಸುವತ್ತ ಗಮನ ನೀಡಬೇಕು ಎಂದರು.
ಪ್ರೊ. ಡಿ.ಬಿ. ಪಾಟೀಲ ಸ್ವಾಗತಿಸಿದರು. ಡಾ. ಅನಿಲ ಶಿರಹಟ್ಟಿ ಪರಿಚಯಿಸಿದರು.