ಹಾಲೇಶ್ ಶಿವಪ್ಪನವರ
ರಾಣೇಬೆನ್ನೂರು13: ಉತ್ತರ ಕನರ್ಾಟಕದಲ್ಲಿ ಹೆಚ್ಚಾಗಿ ಈರುಳ್ಳಿ, ಬೆಳ್ಳುಳ್ಳಿ ದ್ವಿದಳ ಧಾನ್ಯಗಳು ಮೆಕ್ಕೆಜೋಳ, ಹತ್ತಿಯನ್ನು ರೈತರು ಬೆಳೆಯುತ್ತಿದ್ದಾರೆ. ಇವುಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಳೆಗಳ ಕೊಡುಗೆ ಅಪಾರ.
ಇಲ್ಲಿಯ ಕಪ್ಪು ಮಣ್ಣು ಈ ಬೆಳೆಗಳನ್ನು ಬೆಳೆಯಲು ಉತ್ಕೃಷ್ಟವಾಗಿ ಬೆಳ್ಳುಳ್ಳಿ ಬೆಳೆಗಳನ್ನು ಆಹಾರವಾಗಿ ಔಷಧಿಗಳಿಗಾಗಿ ಹಾಗೂ ಸಂಬಾರ ಪದಾರ್ಥಗಳನ್ನಾಗಿ ಇದನ್ನು ಹೆಚ್ಚಾಗಿ ಜನರು ಉಪಯೋಗಿಸುತ್ತಿರುವುದರಿಂದ ವಾಣಿಜ್ಯ ಬೆಳೆಯಾಗಿ ಇದು ಪ್ರಸಿದ್ಧಿಯಾಗಿದೆ. ಮುಂಗಾರಿ ಹಂಗಾಮಿನಲ್ಲಿ ಈ ಬೆಳೆಗಳನ್ನು ಹೆಚ್ಚಾಗಿ ಮಳೆಯಾಶ್ರೀತ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ.
ಹೊರ ರಾಜ್ಯಗಳಿಗೆ ಮಾತ್ರವಲ್ಲದೆ ಹೊರ ದೇಶಗಳಿಗೂ ಕೂಡ ಬೆಳ್ಳುಳ್ಳಿಯನ್ನು ರಪ್ತು ಮಾಡುತ್ತಿರುವುದರಿಂದ ಈ ಬೆಳೆಗೆ ಹೆಚ್ಚಿನ ಬೆಲೆ ಬಂದಿದ್ದು ಮಾರುಕಟ್ಟೆಯಲ್ಲಿ ಇದು ಹೆಚ್ಚಿನ ಬೇಡಿಕೆಯಲ್ಲಿ ಇರುತ್ತದೆ.
ಈ ವರ್ಷ ಮುಂಗಾರು ಮಳೆ ಹೆಚ್ಚಾಗಿದ್ದಾರಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳ್ಳುಳ್ಳಿ ಬೆಳೆ ಆಯಾ ಗ್ರಾಮಗಳಲ್ಲಿ ಅಲ್ಪ ಸ್ವಲ್ಪ ಬೆಳೆ ಬಂದಿದ್ದು ಉತ್ತಮ ಬೆಲೆ ಇರುವುದರಿಂದ ಕಳ್ಳರ ಕಣ್ಣು ಈಗ ಬೆಳ್ಳುಳ್ಳಿಯ ಮೇಲೆ ಬಿದ್ದಿರುತ್ತಾದೆ. ಕಳ್ಳರಿಂದ ಈ ಬೆಳೆಯನ್ನು ರಕ್ಷಿಸುವುದೇ ರೈತರಿಗ ದೊಡ್ಡ ತಲೆನೋವು ಆಗಿದೆ.
ಬೆಳ್ಳುಳ್ಳಿಯನ್ನು ಕಿತ್ತು ಹೊಲಗಳಲ್ಲಿ ಮತ್ತು ಕಣಗಳಲ್ಲಿ ಓಣಗಿಸಲಿಕ್ಕೆ ರಾಶಿ ಹಾಕಿದಾಗ ಕಳ್ಳರು ಯಾವ ಮಾಯೆಯಿಂದ ಬಂದು ಕಳ್ಳತನ ಮಾಡುತ್ತಾರೋ ತಿಳಿಯಾದಾಗಿದೆ.
ಈಗಾಗಲೇ ಮಣಕೂರು, ಇಟಗಿ, ಮುಷ್ಠೂರು, ತುಮ್ಮಿನಕಟ್ಟಿ, ಲಿಂಗದಹಳ್ಳಿ, ಹೆಡಿಯಾಲ, ಸುಣಕಲ್ಬಿದರಿ, ಜೋಯಿಸರಹರಳ್ಳಿ, ಉಕ್ಕುಂದ, ಸರ್ವಂದ, ಎರೇಕುಪ್ಪಿ ಮುಂತಾದ ಗ್ರಾಮಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ರೈತರು ಹಗಲಿರುಳು ಕಾಯುವಂತಹ ಪರಿಸ್ಥಿತಿ ಬಂದೊದಗಿದೆ.
ದೂರದ ಊರುಗಳಿಂದ ಬರುವ ಕಳ್ಳರು ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ರೈತರ ಹೊಲಗಳಿಗೆ ಕಣಗಳಿಗೆ ಸಣ್ಣ ವಾಹನಗಳನ್ನು ತೆಗೆದುಕೊಂಡು ಬಂದು ಅದರಲ್ಲಿ ಬೆಳ್ಳುಳ್ಳಿಯನ್ನು ತುಂಬಿಕೊಂಡು ಹೋಗುತ್ತಿದ್ದಾರೆ ಎಂಬ ವದಂತಿ ಇರುತ್ತದೆ. ರಾತ್ರಿ ವೇಳೆ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಹೆಚ್ಚಾಗಿ ಆ ವೇಳೆಯಲ್ಲಿ ರೈತರು ಮನೆಯಲ್ಲಿ ಮಲಗಿ ನಿದ್ರಿಸುತ್ತಿರುವುದರಿಂದ ಹೆಚ್ಚಾಗಿ ಆ ವೇಳೆಯಲ್ಲಿ ಕಳ್ಳರು ಕಳ್ಳತನ ಮಾಡುತ್ತಿದ್ದಾರೆ. ಮೊದಲೇ ಅತೀವೃಷ್ಟಿ, ಅನಾವೃಷ್ಟಿಗಳಿಂದ ನೊಂದ ರೈತರು ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿರುವಾಗ ಕಳ್ಳರ ಹಾವಳಿಯಿಂದ ಮತ್ತಷ್ಟು ಕಂಗಾಲಾಗಿ ಹೋಗಿದ್ದಾರೆ.
ಈಗಾಗಲೇ ಮಣಕೂರು, ಲಿಂಗದಹಳ್ಳಿ, ಮುಷ್ಟೂರು, ಗ್ರಾಮಗಳಲ್ಲಿ ರೈತರು ರಾತ್ರಿ ವೇಳೆ ಕಾಯ್ದು ಕಳ್ಳರನ್ನು ಹಿಡಿದು ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ.
ಈ ರೀತಿ ಕಳ್ಳತನದ ಹಾವಳಿಯನ್ನು ನಿಯಂತ್ರಿಸಲು ಕೆಲವು ಆಯ್ದ ಗ್ರಾಮೀಣ ಮಾರ್ಗಗಳಲ್ಲಿ ಗಸ್ತು ವಾಹನಗಳ ವ್ಯವಸ್ಥೆಯನ್ನು ಮಾಡಲಾಗುವುದು, ಕೇಂದ್ರ ಸ್ಥಾನಗಳಲ್ಲಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗುವುದು ರೈತರ ಸಹಕಾರದೊಂದಿಗೆ ಕಳ್ಳರ ಹಾವಳಿಯನ್ನು ನಿಯಂತ್ರಿಸಲಾಗುವುದು ಎಂದು ಗ್ರಾಮೀಣ ಸಿ.ಪಿ.ಐ ಸದರೆ ಹಾಗೂ ಹಲಗೇರಿ ಪಿ.ಎಸ್.ಐ ಬಡಿಗೇರ ತಿಳಿಸಿದ್ದಾರೆ