ಕಂಪ್ಲಿ 20: ಮಳೆಯ ಆವಾಂತರದಿಂದಾಗಿ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಮೂರು ಎಮ್ಮೆಗಳು ಸ್ಥಳದಲ್ಲೇ ಜೀವತೆತ್ತ ಘಟನೆ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ಸೂಗಪ್ಪ ಎಂಬುವರ ಹೊಲದಲ್ಲಿ ಬಿ.ಮಲಿಕ್ ಬೀ ಎಂಬುವರು ಮೂರು ಎಮ್ಮೆಗಳನ್ನು ಮೇಯಿಸಲು ಬಿಟ್ಟಿದ್ದರು. ನಂತರ ಬಂದ ಮಂಗಳವಾರ ಸುರಿದ ಮಳೆ ಗಾಳಿಯ ರಭಸಕ್ಕೆ ಹೊಲದ ಬಳಿಯಲ್ಲಿದ್ದ ಟಿ.ಸಿ ಮೋಟರ್ನ ವೈರ್ ಕಳಚಿ ಬಿದ್ದದ್ದರಿಂದ ಮೂರು ಎಮ್ಮೆಗಳು ಅಸುನೀಗಿವೆ. ಬಿ.ಮಲಕ್ ಬೀ ಎಂಬುವರಿಗೆ ಸೇರಿದ ಸುಮಾರು 270000 ರೂ.ಗಳ ಮೌಲ್ಯದ ಮೂರು ಎಮ್ಮೆಗಳು ಮೃತಪಟ್ಟಿದ್ದು, ಸಂಕಷ್ಟಕ್ಕ ಈಡಾಗಿದ್ದಾರೆ. ಆದ್ದರಿಂದ ಸರ್ಕಾರ ನಷ್ಟ ಪರಿಹಾರ ಒದಗಿಸಬೇಕೆಂಬುದು ಮಾಲೀಕರ ಮತ್ತು ಗ್ರಾಮಸ್ಥರ ಒತ್ತಾಯವಾಗಿದೆ.
ಪಶು ಇಲಾಖೆಯ ಪಶುವೈದ್ಯಾಧಿಕಾರಿ ಕೆ.ಬಸವರಾಜ ಇವರು ಘಟನಾ ಸ್ಥಳಕ್ಕೇ ಭೇಟಿ ನೀಡಿ, ಪರೀಶೀಲಿಸಿ, ನಷ್ಟ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.