ಲೋಕದರ್ಶನ ವರದಿ
ಹಾವೇರಿ03: ಸಮಾಜವನ್ನು ನೋಡುವ ಮಾಧ್ಯಮಗಳ ಕಣ್ಣುಗಳು ಚನ್ನಾಗಿರಬೇಕು, ಪತ್ರಿಕೆಗಳು ಸಮಾಜದಲ್ಲಿ ಇರುವ ಅಂಕು-ಡೊಂಕುಗಳನ್ನು ತಿದ್ದುವ ಅಂಕುಶದ ಹಾಗೆ ಕಾರ್ಯನಿರ್ವಹಿಸುತ್ತಿವೆ. ಸಮಾಜದ ಅಂತರಂಗ ಬಹಿರಂಗವನ್ನು ಸಮ ದೃಷ್ಟಿಯಿಂದ ನೋಡುವ ಮೂಲಕ ಧ್ವನಿ ಇಲ್ಲದವರಿಗೆ ಪತ್ರಿಕೆ ಧ್ವನಿಯಾಗಲಿ ಎಂದು ಹೊಸಮಠದ ಬಸವಶಾಂತಲಿಂಗಶ್ರೀ ಹೇಳಿದರು.
ನಗರದ ಕಾಗಿನಲೆ ರಸ್ತೆಯಲ್ಲಿರುವ ಮುರುಘಾಮಠದಲ್ಲಿ ಜರುಗಿದ ನ್ಯಾಯದಪರ ಮಾಸಪತ್ರಿಕೆಯ ವಾಷರ್ಿಕೋತ್ಸವದ ಸಮಾರಂಭದ ಭಾಗವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿನ ಮೌಢ್ಯಗಳನ್ನು, ಅಂಧಾಚಾರಣೆಗಳನ್ನು ಪ್ರಚುರಪಡಿಸುವ ಮೂಲಕ ಜನರ ಬದುಕನ್ನು ಬದಲಾಯಿಸುವ ಶಕ್ತಿ ಮಾಧ್ಯಮಗಳಿಗಿದೆ ಎನ್ನುವುದನ್ನು ಈಗಾಗಲೇ ಅನೇಕ ಪ್ರಕರಣಗಳಲ್ಲಿ ಪತ್ರಿಕೆಗಳು ಸಾಭೀತು ಪಡಿಸಿವೆ. ಇದೇ ಮಾರ್ಗದಲ್ಲಿ ನ್ಯಾಯದಪರ ಪತ್ರಿಕೆ ಸಾಗಿ ಕತ್ತಲಲ್ಲಿರುವ ಜನರನ್ನು ಬೆಳಕಿಗೆ ತರುವ ಪ್ರಯತ್ನ ಮಾಡಲಿ ಎಂದು ಶ್ರೀಗಳು ಹಾರೈಸಿದರು.
ಯುವಮುಖಂಡ ಮಂಜುನಾಥ ನೀಲಗುಂದ ವಾಷರ್ಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಪತ್ರಿಕೆಗಳನ್ನು ಮುನ್ನಡೆಸಿಕೊಂಡು ಬರುವುದು ಬಹಳ ಕಷ್ಟದ ಕೆಲಸ, ಇಂದಿನ ಜಾಗತೀಕರಣದ ಭರಾಟೆಯಲ್ಲಿ ವಿಶ್ವವೇ ಕುಬ್ಜವಾಗುತ್ತಿದೆ. ಜನರು ಮಾರುಕಟ್ಟೆಯ ವ್ಯವಸ್ಥೆಯ ಜಾಲದಲ್ಲಿ ಸಿಲುಕಿ ಓದುವ ಸಂಸ್ಕ್ರತಿಯಿಂದ ವಿಮುಖರಾಗುತ್ತಿದ್ದಾರೆ. ಓದಿನಿಂದ ಶ್ರವಿಮುಖವಾಗುತ್ತಿರುವ ಯುವ ಜನಾಂಗವನ್ನು ಮತ್ತೆ ಓದಿನೆಡೆಗೆ ಕರೆತರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮುಖ್ಯಅತಿಥಿಯಾಗಿ ಧಾರವಾಡ ಬೌದ್ಧವಿಹಾರದ ಪಬ್ಬಜೋ ರವಿತಿಪಾಲಿವಿಜ್ಜಾಮುನಿಯೋ ಮಾತನಾಡಿ, ಸಮಾಜದಲ್ಲಿ ಸತ್ಯ ಹಾಗೂ ಅಸತ್ಯ ಎನ್ನುವ ಎರಡು ಮಾರ್ಗಗಳಿವೆ. ಸತ್ಯದ ಮಾರ್ಗದಲ್ಲಿ ನಡೆಯುವುದೇ ಧರ್ಮಮಾರ್ಗವಾಗಿದೆ. ಅಸತ್ಯದ ಮಾರ್ಗದಲ್ಲಿ ಸಾಗುವುದು ಅಧರ್ಮಮಾರ್ಗವಾಗಿದೆ.
ಸತ್ಯ ಬಲು ಕಠಿಣವಾಗಿರುತ್ತದೆ. ಏನೆಲ್ಲಾ ತೊಂದರೆಗಳು ಬಂದರೂ ಸಹ ಸತ್ಯದ ಮಾರ್ಗದಲ್ಲಿ ನಡೆಯಬೇಕು. ಇಂದಿನ ಸಮಾಜದಲ್ಲಿ ಅಸತ್ಯವೆ ವಿಜ್ರಂಭಿಸುತ್ತಿದ್ದು, ಅಹಿಂಸೆ ತಾಂಡವಾಡುತ್ತಿದೆ. ಈಅಂಹಿಂಸೆಯನ್ನು ಬಹುತೇಕ ಮಾಧ್ಯಮಗಳಲ್ಲಿ ವೈಭವಿಕರಣ ಮಾಡಲಾಗುತ್ತದೆ. ಇದನ್ನು ತಡೆಯಬೇಕು. ಬುದ್ಧ ಮಾರ್ಗಒಂದರಿಂದಲೇ ಇದನ್ನು ತಡೆಯಲು ಸಾಧ್ಯ ಎಂದು ಅವರು ತಿಳಿಸಿದರು.
ಮುಖ್ಯಅತಿಥಿ, ಹಿರಿಯ ನ್ಯಾಯವಾದಿ ವಿ.ಎಫ.ಕಟ್ಟೆಗೌಡ್ರ ಮಾತನಾಡಿ, ಪತ್ರಿಕೆಗಳು ಸಮಾಜಮುಕಿ ಬರವಣೆಗೆಯಿಂದ ಜನಮನಾಸದಲ್ಲಿ ಹೆಚ್ಚುಕಾಲ ಉಳಿಯಲು ಸಾಧ್ಯ. ಸಮಾಜಮುಖಿ ಬರವಣಿಗೆಗೆ ತಮ್ಮ ಬೆಂಬಲ ಸದಾಕಾಲ ಇರುತ್ತದೆ ಎಂದರು.
ಸಾಹಿತಿ, ಪತ್ರಕರ್ತ ಮಾಲತೇಶ ಅಂಗೂರ ಉಪನ್ಯಾಸ ನೀಡಿ, ಸಣ್ಣಪತ್ರಿಕೆಗಳನ್ನು ನಡೆಸಿಕೊಂಡು ಬರುವುದು ಕಷ್ಟದ ಕಾರ್ಯ. ಮಾಧ್ಯಮ ರಂಗ ಇಂದು ಉದ್ಯಮ ರಂಗವಾಗಿದೆ.
ಸಣ್ಣ ಪತ್ರಿಕೆಗಳ ಮೇಲೆ ಏನೇಲ್ಲಾ ಗದಾಪ್ರವಾಹವಾದರು ಓದುಗರು ಸಣ್ಣ ಪತ್ರಿಕೆಗಳನ್ನು ಕೈಬಿಡುವುದಿಲ್ಲ, ಆದರೆ ಓದುಗರ ವಿಶ್ವಾಸಾರ್ಹತೆಯನ್ನು ಸಣ್ನ ಪತ್ರಿಕೆಗಳು ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎನ್.ಎನ್.ಗಾಳೆಮ್ಮನವರ ಮಾತನಾಡಿ, ಪತ್ರಿಕೆಯ ಕಳೆದ ಒಂದು ವರ್ಷದಲ್ಲಿ ನ್ಯಾಯದಪರ ಎನ್ನುವ ಹೆಸರಿಗೆ ತಕ್ಕಹಾಗೆ ಸಮಾಜದಲ್ಲಿನ ಅಂಕುಡೊಂಕುಗಳನ್ನು ಪ್ರಕಟಿಸುವ ಮೂಲಕ ನ್ಯಾಯದ ಪರ ನಿಂತಿದೆ ಎಂದರು.
ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಹಿರಿಯ ಪತ್ರಕರ್ತ ನಿಂಗಪ್ಪ ಚಾವಡಿ, ಹಿರಿಯ ಕಲಾವಿದ ಬೀರಪ್ಪ ಡೊಳ್ಳಿನ, ರುದ್ರಪ್ಪ ಜಾಭೀನ, ಆನಂದ ಗುರೂಜಿ, ಡಿ.ಎಂ.ಬುರಡಿ ಮತ್ತಿತರರು ಮಾತನಾಡಿದರು.
ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಛಾಯಾಗ್ರಾಹಕರಾದ ಸಂಜಯಕುಮಾರ ರಿತ್ತಿ, ನಾಗೇಶ ಬಾಕರ್ಿ, ನ್ಯಾಯವಾದಿ ಮನೋಹರ ಸೊನ್ನದ, ರಾಣಿ ಮೊಚ್ಚಿಗಾರ,ಶಂಭುಲಿಂಗಪ್ಪ ನಾಗನೂರ, ಡಾ.ನಿಂಗಪ್ಪ ಕಾಳೇರ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ನಿಂಗಪ್ಪ ಎಂ ಆರೇರ ಸ್ವಾಗತಿಸಿದರು, ವಿನಾಯಕ ಕುರುಬರ ನಿರೂಪಿಸಿದರು.