ಬೆಳಗಾವಿ, 15: ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳಿಂದ ಮನುಷ್ಯನ ಆರೋಗ್ಯದ ಮೇಲೆ ಹಲವಾರು ರೀತಿಯ ದುಷ್ಪರಿಣಾಮ ಬಿರುತ್ತವೆ ಹಾಗೂ ತಂಬಾಕಿನಲ್ಲಿ ವಿವಿಧ ರೀತಿಯ ರಾಸಾಯನಿಕ ಆಂಶಗಳಿರುತ್ತವೆ ಹೀಗಾಗಿ ಸಾರ್ವನಿಕರು ತಂಬಾಕು ಸೇವನೆ ತ್ಯೆಸಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿದೇಶಕರಾದ ರಾಜಶೇಖರ ಪಟ್ಟಣಶಟ್ಟಿ ಅವರು ತಿಳಿಸಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸರಕಾರಿ ಸದರ್ಾರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ (ಅ.14) ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ನಡೆದ ತಂಬಾಕು ಹಾಗೂ ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮ ಹಾಗೂ ಕೊಟ್ಪಾ 2003ರ ಕಾಯ್ದೆಯ ಕುರಿತು ತರಬೇತಿ ಕಾಯರ್ಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯನ ಆರೋಗ್ಯದ ಮೇಲೆ ಹಲವಾರು ರೀತಿಯ ದುಷ್ಪರಿಣಾಮ ಬಿರುತ್ತವೆ ಹಾಗೂ ತಂಬಾಕಿನಲ್ಲಿ ವಿವಿಧ ರೀತಿಯ ರಾಸಾಯನಿಕ ಅಂಶಗಳಿರುತ್ತವೆ. ಇತ್ತ್ತಿಚಿನ ದಿನಗಳಲ್ಲಿ ಯುವ ಜನಾಂಗದವರಲ್ಲಿ ತಂಬಾಕು ಸೇವನೆ ಹೆಚ್ಚಾಗುತ್ತಿದ್ದು, ಇದರಿಂದ ಯುವ ಜನರಲ್ಲಿ ಬಾಯಿ ಕ್ಯಾನ್ಸರಿನ ರೋಗಗಳು ಹೆಚ್ಚಾಗುತ್ತಿದ್ದು. ಮತ್ತು ಆರೋಗ್ಯದ ಮೇಲೆ ತಂಬಾಕು ಪರಿಣಾಮವಾಗಿ ದೇಶದ ಆಥರ್ಿಕ ಪ್ರಗತಿ ಕುಂಠಿತವಾಗುತ್ತದೆ. ತಂಬಾಕು ಹಾಗೂ ತಂಬಾಕು ಉತ್ಪನ್ನಗಳಿಂದ ಆಗುವ ದುಷ್ಪರಿಣಾಮದ ಕುರಿತು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಎಲ್ಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗಳು ತಂಬಾಕು ಸೇವನೆ ಮಾಡಬಾರದು ತಮ್ಮ ಕಾಲೇಜನ್ನು ತಂಬಾಕು ಮುಕ್ತ ಕಾಲೇಜುಗಳನ್ನಾಗಿ ಘೋಷಿಸಲು ಸೂಚಿಸಿದರು ಮತ್ತು ಇಂದಿನ ಯುವ ಪೀಳಿಗೆ ತಂಬಾಕು ಸೇವನೆಯಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದಾರೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್, ಜಿ ಕಾಡನ್ನವರು ಇವರು ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳಿಂದ ಮನುಷ್ಯನ ಆರೋಗ್ಯದ ಮೇಲೆ ಹಲುವಾರು ರೀತಿಯ ದುಷ್ಪರಿಣಾಮ ಬಿರುತ್ತವೆ ಹಾಗೂ ತಂಬಾಕಿನಲ್ಲಿ ವಿವಿಧ ರೀತಿಯ ರಾಸಾಯನಿಕ ಆಂಶಗಳಿರುತ್ತವೆ ಹೀಗಾಗಿ ಸಾರ್ವನಿಕರು ತಂಬಾಕು ಸೇವನೆ ತ್ಯೆಸಿಸಬೇಕು ಎಂದು ತಿಳಿಸಿದರು
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಜ್ಯ ತಂಬಾಕು ನಿಯಂತ್ರಣ ಘಟಕ ಬೆಳಗಾವಿ ವಿಭಾಗಿಯ ಸಂಯೋಜಕರಾದ ಮಹಾಂತೇಶ ಉಳ್ಳಾಗಡ್ಡಿ ಅವರು ಮಾತನಾಡಿದರು ತಂಬಾಕಿನ ಕಾನೂನು ಅರಿವು ಕೋಟ್ಪಾ-2003 ರ ಬಗ್ಗೆ ಸೆಕ್ಷನ್-4 ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮಾಡಲಾಗಿದೆ.
ಈ ಕಾನೂನು ಉಲ್ಲಂಘಿಸಿದ ವ್ಯಕ್ಕಿಗೆ ರೂ.200 ದಂಡ ವಿಧಿಸಲಾಗುವುದು. ಸೆಕ್ಷನ್-5 ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ನಿಷೇದ. ಸೆಕ್ಷನ್-6ರ ಪ್ರಕಾರ ತಂಬಾಕು ಉತ್ಪನ್ನಗಳ ಅಪ್ರಾಪ್ತ ವಯಸ್ಕರಿಗೆ ನಿಯಂತ್ರಣ ಮಾಡುವುದು ಹಾಗೂ ಸೆಕ್ಷನ್ -6(ಬಿ) ಪ್ರಕಾರ ಶಿಕ್ಷಣ ಸಂಸ್ಥೆಗಳ 100 ಮೀಟರ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಸೆಕ್ಷನ್-7 ಪ್ರಕಾರ ಸಿಗರೇಟ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ನಿಧರ್ಿಷ್ಡ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಿ ಕೋಟ್ಪಾ ಕಾಯ್ದೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು