ವಿಜಯಪುರ 10: ವಿಜನ್ ಗ್ರೂಪ್ ಆಫ್ ಸೈನ್ಸ್ ್ಘ ಟೆಕ್ನಾಲಜಿ (ವಿಜಿಎಸ್ಟಿ), ಕರ್ನಾಟಕ ಸರ್ಕಾರ, ಬೆಂಗಳೂರು, ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲ ಸೌಕರ್ಯಾಭಿವೃದ್ಧಿಗೆ ನಿಧಿ (ಕೆ-ಫಿಸ್ಟ್) ಹಂತ-2 ಯೋಜನೆಯಡಿ ರೂ.30 ಲಕ್ಷ ಸಂಶೋಧನಾ ಅನುದಾನವನ್ನು ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯ ಸಂಶೋಧಕ ಡಾ. ಕೆ. ಮಹೇಶ್ ಕುಮಾರ್ ಮತ್ತು ಭೌತಶಾಸ್ತ್ರ ವಿಭಾಗದ ಸಹ-ಮುಖ್ಯ ಸಂಶೋಧಕ ಡಾ. ಪರುತಗೌಡ ಎಸ್. ಪಾಟೀಲ ಅವರಿಗೆ ಮಂಜೂರು ಮಾಡಿದೆ.
"ಟೈಲರ್ಡ್ ಆರ್ಕಿಟೆಕ್ಚರ್ಸ್: ಜುಲೋಲಿಡಿನ್-ಹೆಟೆರೋಸೈಕಲ್ ಕಾಂಜುಗೇಟ್ಸ್ ಫಾರ್ ನಾನ್ಲೀನಿಯರ್ ಆಪ್ಟಿಕ್ಸ್, ಡೈ-ಸೆನ್ಸಿಟೈಸ್ಡ್ ಸೋಲಾರ್ ಸೆಲ್ಸ್, ಅಂಡ್ ಸೆನ್ಸಿಂಗ್ ಅಪ್ಲಿಕೇಶನ್ಸ್ " ಎಂಬ ಸಂಶೋಧನಾ ಯೋಜನೆಗೆ ಈ ಅನುದಾನವನ್ನು ನೀಡಲಾಗಿದೆ. ಈ ಯೋಜನೆಯು ನವೀನ ಅಣು ಸಂರಚನೆಗಳನ್ನು ರೂಪಿಸಿ, ಅವುಗಳನ್ನು ನಾನ್ಲೀನಿಯರ್ ಆಪ್ಟಿಕ್ಸ್, ಸೌರಶಕ್ತಿ ಉತ್ಪಾದನೆ (ಡೈ-ಸೆನ್ಸಿಟೈಸ್ಡ್ ಸೋಲಾರ್ ಸೆಲ್ಸ್), ಮತ್ತು ಸಂವೇದಿ ಉಪಕರಣಗಳ ರೂಪದಲ್ಲಿ ಅನ್ವಯಿಸುವ ನಿಟ್ಟಿನಲ್ಲಿ ಮಹತ್ವದ ಸಂಶೋಧನೆ ನಡೆಸಲಿದೆ. ಈ ಅನುದಾನದಿಂದ ಕಾಲೇಜಿನ ಸಂಶೋಧನಾ ಚಟುವಟಿಕೆಗಳು ಮತ್ತಷ್ಟು ಬಲಪಡಿಸಲ್ಪಡುವ ನೀರೀಕ್ಷೆಯಿದೆ.
ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಬಿ. ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿಯಾದ ಶ್ರೀ. ಸುನೀಲಗೌಡ ಪಾಟೀಲ್, ಮುಖ್ಯ ಶೈಕ್ಷಣಿಕ ಅಧಿಕಾರಿ ಡಾ. ವೈ. ಎಂ. ಜಯರಾಜ್, ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ, ಆಡಳಿತಾಧಿಕಾರಿ ಡಾ. ವಿ. ಎಸ್. ಬಗಲಿ, ಕಾಲೇಜಿನ ಪ್ರಾಚಾರ್ಯರಾದ ಡಾ. ಆರ್.ಎಂ. ಮಿರ್ಧೆ ಮತ್ತು ಸಿಬ್ಬಂದಿ ಸಂಶೋಧಕರಾದ ಡಾ. ಕೆ. ಮಹೇಶ್ ಕುಮಾರ್ ಮತ್ತು ಡಾ. ಪಿ. ಎಸ್. ಪಾಟೀಲ್ ಅವರಿಗೆ ಈ ಪ್ರತಿಷ್ಠಿತ ಅನುದಾನವನ್ನು ಪಡೆದಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.