ಲೋಕದರ್ಶನವರದಿ
ಹಾವೇರಿ : ಮಾನವನ ಬದುಕಿಗೆ ವಾಲ್ಮೀಕಿ ಮಹಷರ್ಿಯವರ ರಾಮಾಯಣ ಮಹಾಕಾವ್ಯ ಶ್ರೇಷ್ಠವಾಗಿದೆ ಎಂದು ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿ ವೀರಮದಕರಿ ವಾಲ್ಮೀಕಿ ಸಂಘದ ವತಿಯಿಂದ ವಾಲ್ಮೀಕಿ ಮಹಷರ್ಿಯವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ ವೀರಮದಕರಿ ವಾಲ್ಮೀಕಿ ಸಂಘದ ಮುಖಂಡ ಕೊಟೆಪ್ಪ ತಳವಾರ ಮಾತನಾಡಿದರು.
ಪ್ರತಿಯೊಬ್ಬರೂ ಮೌಲ್ಯಯುತವಾಗಿ ಬದುಕಲು ಹೇಗೆ ಬಾಳಬೇಕು ಎಂದು ತಮ್ಮ ಕಾವ್ಯದಲ್ಲಿ ವಿವರವಾಗಿ ತಿಳಿಸಿದ್ದಾರೆ.
ಕುಟುಂಬ ಹಾಗೂ ಸಮಾಜ ಜೀವಿಯಾಗಿ ಎಲ್ಲರೊಂದಿಗೆ ಬೆರತು ಬಾಳುವ ಸಂದೇಶ ನೀಡಿದವರು ಮಹರ್ಷಿ ವಾಲ್ಮೀಕಿಯವರಾಗಿದ್ದು, ಅವರ ಜೀವನ ದಾರಿಯೇ ಮನುಕುಲಕ್ಕೆ ದಾರಿದ್ವೀಪವಾಗಿದೆ. ಅವರ ಜೀವನ ಆದರ್ಶಗಳನ್ನು ಅಳವಡಿಸಿಕೊಂಡು ಬದುಕಿದರೆ ಉತ್ತಮ ಸಮಾಜ ನಿಮರ್ಾಣ ಸಾಧ್ಯವಾಗಲಿದೆ. ಎಲ್ಲರೂ ಅವರ ತತ್ವ ಸಿದ್ಧಾಂತ ಪಾಲಿಸೋಣ ಎಂದು ಕೊಟೆಪ್ಪ ತಳವಾರ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರು ಹಾಗೂ ಗ್ರಾಪಂ ಮಾಜಿ ಸದಸ್ಯರಾದ ಮಲ್ಲಪ್ಪ ಮಾ ತಳವಾರ, ಗ್ರಾಪಂ ಸದಸ್ಯ ಈರಣ್ಣ ಚಪ್ಪರದಳ್ಳಿಮಠ. ವಾಲ್ಮೀಕಿ ಸಮುದಾಯದ ಮುಖಂಡರಾದ ಮಾಲತೇಶ ತಳವಾರ, ಚಂದ್ರಪ್ಪ ಸೋ ತಳವಾರ, ಮಲ್ಲಾರೆಪ್ಪ ತಳವಾರ,ಹನುಮಂತಪ್ಪ ತಳವಾರ, ರವಿ ತಳವಾರ, ನಿಂಗಪ್ಪ ತಳವಾರಚಂದ್ರ ಟಿ.ಸಣ್ಣಪ್ಪ ಹೊಸಮನಿ ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.