ವಿಜಯಪುರ: ನೀರಿಗಾಗಿ ಡಿಸಿ ಕಚೇರಿ ಎದುರು ಖಾಲಿ ಕೊಡ ಪ್ರದಶರ್ಿಸಿ ಪ್ರತಿಭಟನೆ

ಲೋಕದರ್ಶನ ವರದಿ

ವಿಜಯಪುರ 08: ನಗರದಲ್ಲಿ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಸೋಷಿಯಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಜಿಲ್ಲಾ ಕಚೇರಿ ಎದುರು ಖಾಲಿ ಕೊಡಗಳನ್ನು ಪ್ರದರ್ಶಿಸಿ  ಪ್ರತಿಭಟನೆ ನಡೆಸಲಾಯಿತು.

   ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್ಯುಸಿಐ ಜಿಲ್ಲಾ ಘಟಕದ ಕಾರ್ಯದಶರ್ಿ ಭಿ.ಭಗವಾನರೆಡ್ಡಿ ಮಾತನಾಡಿ, ವಿಜಯಪುರಕ್ಕೆ  ನಿಯಮಿತವಾಗಿ ಕುಡಿಯುವ ನೀರು ಬರುತ್ತಿಲ್ಲ. ಹಾಗಾಗಿ ದಿನ ನಿತ್ಯದ ಬಳಕೆಗೆ ನೀರು ಸಿಗದೆ ಇರುವುದರಿಂದಾಗಿ ಜನ ಪರದಾಡುವಂತಾಗಿದೆ. ಒಂದೆಡೆ ಸರಕಾರ ಕುಡಿಯುವ ನೀರಿಗೆ ಯಾವುದೇ ತೊಂದರೆಯಿಲ್ಲ ಅವಶ್ಯವಿರುವೆಡೆ ಟ್ಯಾಂಕರ್ ಮೂಲಕ  ಹಾಕಲಾಗುವುದು ಎಂದು ಹೇಳುತ್ತಿದೆ ಆದರೆ ವಾಸ್ತವದಲ್ಲಿ ಕುಡಿಯುವ ನೀರು 10-12 ದಿನಗಳು ಕಳೆದರೂ ಸಿಗುತ್ತಿಲ್ಲ. ಜನತೆ ತಿರ್ವ ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರಬೇಕಾದರೆ, ನಮ್ಮ ಸರಕಾರಗಳು, ಜನಪ್ರತಿನಿಧಿಗಳು ಸ್ವಾರ್ಥ ರಾಜಕೀಯದಲ್ಲಿ ಹಾಗೂ ಕುಚರ್ಿ ಭದ್ರಪಡಿಸಿಕೊಳ್ಳುವದರಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪ್ರಮುಖ ಜಲಮೂಲ ಅಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರು ಇದ್ದರೂ ಕೂಡ ನಗರದಲ್ಲಿ 15 ದಿನಕ್ಕೂಮ್ಮೆ ನೀರು ಬಿಡುತ್ತಿರುವದಕ್ಕೆ ಯಾರು ಕಾರಣ ಎಂಬುದನ್ನು ಜನತೆಗೆ ಉತ್ತರಿಸಬೇಕು. ಜಿಲ್ಲೆಯ ಜನತೆ ಉಗ್ರ ಹೊರಾಟಕ್ಕೆ ಜಿಲ್ಲೆಯ ಜನತೆ ಮುಂದಾಗಬೇಕೆಂದು ಕರೆ ನೀಡಿದರು.

ಎಸ್ಯುಸಿಐ ಜಿಲ್ಲಾ ಸಮಿತಿ ಸದಸ್ಯ ಎಚ್.ಟಿ. ಭರತಕುಮಾರ ಮಾತನಾಡಿ, ವಿಜಯಪುರದ ಬಹುತೇಕ ಎಲ್ಲಾ ಬಡಾವಣೆಗಲ್ಲಿ ನೀರಿನ ಸಮಸ್ಯೆಯಿದೆ, ಮನುಷ್ಯನ ಕನಿಷ್ಠ ಸೌಲಭ್ಯವಾದ ನೀರನ್ನು ಸಹ ಜಿಲ್ಲಾಡಳಿತಕ್ಕೆ ಒದಗಿಸಲು ಆಗುತ್ತಿಲ್ಲ. ಕೂಡಲೆ ಎತ್ತೆಚ್ಚುಗೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲವಾದರೆ ಉಗ್ರವಾದ ಹೊರಾಟಕ್ಕೆ ಕರೆನೀಡಲಾಗುವದು ಎಂದರು.  

ಪುಲಕೇಶಿ ನಗರ, ನವಭಾಗ, ಗುಮಾಸ್ತ ಕಾಲನಿ, ಅಕ್ಕಿ ಕಾಲನಿ, ಜಯ ಕನರ್ಾಟಕ ಕಾಲನಿ, ಬಾಗಾಯತಗಲ್ಲಿ, ಸುಹಾಗ ಕಾಲನಿ, ಪಚ್ಚಾಪುರ ಪೇಟೆ, ಪೈಲವಾನ ಗಲ್ಲಿ, ಅಲ್ಲಾಪುರ ಓಣಿ, ರಾಜಾಜಿನಗರ, ಖಾಸಗೇರಿ, ಇನಾಮದಾರ ಕಾಲೊನಿ, ನಿಸಾರ ಮಡ್ಡಿ, ಟಿಪ್ಪು ಸುಲ್ತಾನ ನಗರ ಹೀಗೆ ನೀರಿನ ಪೂರೈಕೆ ವ್ಯತ್ಯಯವಾಗಿರುವ ಬಡಾವಣೆಗಳ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ ಎಂದು ಸಮಸ್ಯೆ ವಿವರಿಸಿದರು,

ಎಸ್ಯುಸಿಐ ಮುಖಂಡರಾದ ಸಿದ್ಧಲಿಂಗ ಬಾಗೇವಾಡಿ, ಬಾಳೂ ಜೇವೂರ, ಸುನೀಲ, ಶಿವಬಾಳಮ್ಮ ಕೊಂಡಗುಳಿ, ಶೋಭಾ ಯರಗುದ್ರಿ, ಸುರೇಖಾ ಕಡಪಟ್ಟಿ, ಮಹಾದೇವಿ, ಸಂಗೀತಾ, ರೆಣುಕಾ ಸಾಳುಂಕೆ, ಪಿರಾ ಜಮಾದಾರ, ನೂರಜಾನ್ ಮೂಳ್ಯಾಳ, ಎಸ್.ಎ ಇನಾಮದಾರ, ಮಮತಾಜಬೇಗಂ, ಹಣಮಂತ ಕಂಠಿ ಪಾಲ್ಗೊಂಡಿದ್ದರು.