ಲೋಕದರ್ಶನ ವರದಿ
ವಿಜಯಪುರ 11: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸಾಂಸ್ಕೃತಿಕ ಕಲರವ ರಂಗೇರಿದೆ. 16 ನೇ ಶಕ್ತಿ ಸಂಭ್ರಮದ ಮೊದಲ ದಿನ ಭರತನಾಟ್ಯ, ಜನಪದ ನೃತ್ಯ, ಹೆಜ್ಜೆ ಕುಣಿತ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ಎರಡನೆ ದಿನ ಕಿರುನಾಟಕ, ಮೈಮ್, ಸ್ಕಿಟ್, ಸಂಗೀತ ಹೀಗೆ ಮುಂತಾದ ಸ್ಪರ್ಧೆಗಳು ವಿದ್ಯಾರ್ಥಿನಿಯರ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದ್ದವು.
ವಿವಿಯಲ್ಲಿ ವಿಜೃಂಭನೆ:
ಮುಂಜಾನೆಯೆ ಸೂರ್ಯನ ಕಿರಣಗಳು ಭೂವಿಗೆ ತಲುಪುವ ಮುನ್ನವೇ ವಿವಿಯ ಆವರಣದ ತುಂಬ ಅಭ್ಯಾಸದ ಸದ್ದು ಎಲ್ಲೆಡೆ ಹರಡಿತ್ತು. ಅಭ್ಯಾಸದಲ್ಲಿ ತೊಡಗಿಕೊಂಡಿದ್ದರು. ಅಲ್ಲಲ್ಲಿ ಗೆಜ್ಜೆ ಸದ್ದುಗಳ ಸುಮಧುರ ಹಾವಳಿಯಾಗುತ್ತಿದ್ದರೆ, ಮತ್ತೊಂದೆಡೆ ತಬಲ, ಹಾರ್ಮೋನಿಯಂ, ಮುಂತಾದ ವಾದ್ಯಗಳ ಧ್ವನಿ ಆವರಣದ ತುಂಬ ರಾರಾಜಿಸುತ್ತಿರುವುದು ಕಂಡು ಬಂದಿತು.
ರಂಜಿಸಿದ ನೃತ್ಯಗಳು:
ಮೊದಲ ದಿನ ರಾತ್ರಿ ಜರುಗಿದ ಭರತನಾಟ್ಯ, ಕುಚ್ಚಿಪುಡಿ, ಹೆಜ್ಜೆ ಕುಣಿತ, ಲಂಬಾಣಿ ನೃತ್ಯ, ಕೋಲಾಟ ಮುಂತಾದ ಜಾನಪದ ನೃತ್ಯಗಳು ನೋಡುಗರನ್ನು ರಂಜಿಸಿದವು. ಬಣ್ಣ-ಬಣ್ಣದ ವಿದ್ಯುತ್ ದೀಪಗಳ ಮಧ್ಯ ವಿದ್ಯಾಥರ್ಿನಿಯರು ಹೆಜ್ಜೆ ಹಾಕುತ್ತಿದ್ದರೆ ನೋಡುಗರು ಸಿಳ್ಳೆ, ಚಪ್ಪಾಳೆಗಳ ಸುರಿಮಳೆಗರೆದರು. ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜುಗಳಿಂದ ಬಂದಿದ್ದ ವಿದ್ಯಾಥರ್ಿನಿಯರು ವಿವಿಧ ನೃತ್ಯ ಸ್ಪಧರ್ೆಗಳಲ್ಲಿ ತಮ್ಮ ಅಗಾಧ ಪ್ರತಿಭೆ ಮೆರೆದರು.
ಜಾಗೃತಿ ಮೂಡಿಸಿದ ನಾಟಕಗಳು:
ವಿವಿಯ ಜ್ಞಾನಶಕ್ತಿ ಆವರಣದಲ್ಲಿ ವಿದ್ಯಾಥರ್ಿನಿಯರದಿಂದ ಪ್ರದರ್ಶನಗೊಂಡ ಹಲವಾರು ನಾಟಕಗಳು ಅತ್ಯಂತ ಅದ್ಭುತವಾಗಿ ಮೂಡಿ ಬರುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದವು. ಹೆಚ್ಚಾಗಿ ಮಹಿಳಾಪರ ವಿಷಯಗಳನ್ನ ಹೊಂದಿದ್ದ ನಾಟಕಗಳು ಮಾನವ ಸಾಗಾಣಿಕೆ, ಬಾಲಕಾರ್ಮಿಕ ಕರ್ಮಕಾಂಡ, ಅತ್ಯಾಚಾರ ಅಪರಾದ, ಮಂಗಳಮುಖಿ, ರೈತರ ಆತ್ಮಹತ್ಯೆ, ಸ್ವಚ್ಛಭಾರತ ಹೀಗೆ ಹತ್ತು-ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದವು.