ಲೋಕದರ್ಶನ ವರದಿ
ವಿಜಯಪುರ 11: ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಈಶಾನ್ಯ ಕನರ್ಾಟಕ ರಸ್ತೆ ಸಾರಿಗೆ ಮಜ್ದೂರ ಸಂಘ ವಿಜಯಪುರ ವಿಭಾಗದ ಭಾರತೀಯ ಮಜ್ದೂರ ಸಂಘದ ಕಾಮರ್ಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಚ್.ಬಿ. ಬಬಲೇಶ್ವರ ಅವರು ಮಾತನಾಡಿ ಈ ಸಾರಿಗೆ ಸಂಸ್ಥೆ ಪ್ರಾರಂಭವಾದ ದಿನದಿಂದಲೂ ನಮ್ಮ ಸಾರಿಗೆ ನೌಕರರ ಕಷ್ಟ ತುಂಬಾ ಹೀನಾಯವಾಗಿದ್ದು ಹಗಲೂ ರಾತ್ರಿ ಎನ್ನದೆ ಸಂಸ್ಥೆಯ ಹಿತಕ್ಕಾಗಿ ಪ್ರಮಾಣಿಕರ ಅನುಕೂಲಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು ಇರುತ್ತದೆ. ಇಲ್ಲಿಯವರಗೆ ಈ ರಾಜ್ಯದಲ್ಲಿ ಅನೇಕ ಮುಖ್ಯಮಂತ್ರಿಗಳು ಆಗಿಹೋಗಿರುತ್ತಾರೆ. ಯಾವ ಮುಖ್ಯಮಂತ್ರಿಗಳು ಕೂಡ ಈ ಸಾರಿಗೆ ಸಂಸ್ಥೆಯ ನೌಕರರ ಕಷ್ಟವನ್ನು ಬಗೆ ಹರಿಸಿಲ್ಲ ಎಂದು ದೂರಿದರು.
ಪ್ರಧಾನ ಕಾರ್ಯದರ್ಶಿ ಎ.ಎಂ. ಲಮಾಣಿ ಮಾತನಾಡಿ ಚುನಾವಣೆ ಪೂರ್ವದಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನಾನು ರಾಜ್ಯದ ಮುಖ್ಯಮಂತ್ರಿಯಾದರೆ ಈ ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಘೋಷಿಸುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರು ನುಡಿದಂತೆ ನಮ್ಮ ಬಹುದಿನದ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷರಾದ ಪಿ.ಎಂ. ಮೇಟಿ, ಜಿ.ಡಿ. ಮಠ, ಆರ್.ಆರ್. ಪಾಟೀಲ, ಸಿ.ಎಚ್. ಕಲಕುಟಗಿ, ಎಂ.ಎಸ್. ಬಡಿಗೇರ, ಸಹ ಸಂಘಟನಾ ಕಾರ್ಯದರ್ಶಿ ವಿ.ಎಂ. ಮರೋಳ, ಎಚ್.ಎಸ್. ಜಂಬೂರೆ, ಎಸ್.ಸಿ. ಬೇನಾಳಮಠ, ವಿ.ಟಿ. ಲಮಾಣಿ, ಎಚ್.ಬಿ. ಬಿರಾದಾರ, ಖಜಾಂಚಿ ಬಿ.ಎ. ಮರಾಠೆ, ಕಾರ್ಯದರ್ಶಿ ಕೃಷ್ಣಮೂರ್ತಿ ಜೋಗಿ, ಪುಂಡಲೀಕ ಛತ್ರಿ, ಎಂ.ಎಸ್. ಗಲಗಲಿ, ಗುಲ್ಲು ರಆಠೋಡ, ಮತಾಬಸಾಬ ಕಲಬುರ್ಗಿ, ಎಸ್.ಬಿ. ಕರಡಿ, ಎ.ಎಸ್. ಮೋಮಿನ ಶ್ರೀಕಾಂತ ಕೊಪ್ಪಳ, ಕೆ.ಬಿ. ಚವ್ಹಾಣ, ಶಿವನಗೌಡ ಮೇಟಿ, ಮಲ್ಲನಗೌಡ ಬಿರಾದಾರ, ಬಿ.ಬಿ. ಕುಂಬಾರ ಎಸ್.ಎನ್. ಬಿರಾದಾರ ಭಾಗವಹಿಸಿದ್ದರು.