ವಿಜಯಪುರ: ಡಾ.ಷ.ಶೆಟ್ಟರಗೆ ಪ್ರಶಸ್ತಿ ಪ್ರಧಾನ

ಲೋಕದರ್ಶನ ವರದಿ

ವಿಜಯಪುರ 29: ವಿಜಯಪುರ ಹಲಸಂಗಿ ಗೆಳೆಯರ ಪ್ರತಿಷ್ಠಾನದ 2017ನೇ ಸಾಲಿನ ಪ್ರಶಸ್ತಿಯನ್ನು ಇತಿಹಾಸ ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಅಧಿಕ ಸಂಶೋಧನಾ ಗ್ರಂಥಗಳನ್ನು ಪ್ರಕಟನೆ ಮಾಡಿದ ಡಾ.ಷ.ಶೆಟ್ಟರ ಅವರಿಗೆ ಇತ್ತೀಚೆಗೆ ಬೆಂಗಳೂರಿನ ಅವರ ಸ್ವಗೃಹದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿದರ್ೇಶಕಕರಾದ ಶ್ರೀಮತಿ ಕೆ.ಎಂ.ಜಾನಕಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. 

ಇತ್ತೀಚೆಗೆ ಡಾ.ಷ.ಶೆಟ್ಟರ ಅವರ ಬೆಂಗಳೂರಿನ ಸ್ವಗೃಹದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ಮೊತ್ತ 51 ಸಾವಿರ ರೂ. ನಗದು ಹಾಗೂ ಫಲಕವನ್ನು ನೀಡಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಬೆಳಗಾವಿ ವಲಯದ ಜಂಟಿ ನಿದರ್ೇಶಕರಾದ ಬಸವರಾಜ ಹೂಗಾರ, ಹಲಸಂಗಿ ಗೆಳೆಯ ಪ್ರತಿಷ್ಠಾನದ ವಿಜಯಪುರದ ಸದಸ್ಯ ಕಾರ್ಯದಶರ್ಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ  ವಿದ್ಯಾವತಿ ಎಚ್.ಬಿ. ಸಂಶೋಧಕರಾದ ಡಾ.ಷ.ಶೆಟ್ಟರ ಅವರ ಶ್ರೀಮತಿ ಪ್ರೇಮಲತಾ ಶೆಟ್ಟರ ಹಾಗೂ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.