ವಿಜಯಪುರ: ಜಲಧಾರೆ ಯೋಜನೆ ಕುರಿತು ಸಮಾಲೋಚನೆ

ಲೋಕದರ್ಶನ ವರದಿ

ವಿಜಯಪುರ 12; ಜಿಲ್ಲೆಯಾದ್ಯಂತ ನೀರು ಸಂಪರ್ಕ ಕಲ್ಪಿಸುವ ಜಲಧಾರೆ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಈ ಯೋಜನೆಯ ಅಧ್ಯಯನಕ್ಕಾಗಿ ಆಗಮಿಸಿರುವ ರಾಜ್ಯ ಸಾಮಾಜಿಕ ಸಲಹೆಗಾರ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ನಿರ್ವಹಣಾ ಘಟಕದ ಪ್ರತಿನಿಧಿಗಳನ್ನೊಳಗೊಂಡ ತಂಡದೊಂದಿಗೆ ಇಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಸಮಾಲೋಚನೆ ನಡೆಸಿದರು. 

ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿಂದು ಈ ತಂಡದೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಗಳು ಯೋಜನಾ ವೆಚ್ಚ, ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಯೋಜನೆಯ ನಿರ್ವಹಣೆ, ಖರ್ಚು ವೆಚ್ಚ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಅಧ್ಯಯನ ತಂಡದೊಂದಿಗೆ ಸಮಾಲೋಚನೆ ನಡೆಸಿದರು.

ಜಿಲ್ಲೆಯ ಒಂದು ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಒಟ್ಟು 2 ಪ್ಯಾಕೇಜ್ಗಳಲ್ಲಿ ಜಿಲ್ಲೆಯಾದ್ಯಂತ ಜಲಧಾರೆ ಯೋಜನೆ ಅನುಷ್ಠಾನಗೊಳ್ಳಲಿದೆ. ಇದಕ್ಕಾಗಿ ಮೊದಲನೇ ಪ್ಯಾಕೇಜ್ಅಡಿಯಲ್ಲಿ ಆಲಮಟ್ಟಿ ಜಲಾಶಯದ ನೀರನ್ನು ಸಂಪನ್ಮೂಲವಾಗಿ ಗುರುತಿಸಿದ್ದು, ವಿಜಯಪುರ, ಬಸವನಬಾಗೇವಾಡಿ ಹಾಗೂ ಇಂಡಿ ತಾಲೂಕುಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. 

ಅದರಂತೆ 2ನೇ ಪ್ಯಾಕೇಜ್ ಅಡಿಯಲ್ಲಿ ಜಿಲ್ಲೆಯ ಮುದ್ದೇಬಿಹಾಳ, ಸಿಂದಗಿ ತಾಲೂಕುಗಳನ್ನು ಗುರುತಿಸಲಾಗಿದ್ದು, ನಾರಾಯಣಪುರ ಜಲಾಶಯದ ಜಲಸಂಪನ್ಮೂಲವನ್ನು ಗುರುತಿಸಲಾಗಿದ್ದು, ಇತರ ನಗರ ಸ್ಥಳೀಯ ವ್ಯಾಪ್ತಿಯಲ್ಲಿ 131 ಎಲ್ಪಿಸಿಡಿ (ಲೀಟರ್ಪರ್ಕ್ಯಾಪಿಟಾ ಪರ ಡೇ) ನೀರು ಸರಬರಾಜು ಉದ್ದೇಶ ಇದರಡಿ ಹೊಂದಲಾಗಿದೆ ತಂಡವು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವರಿಕೆ ಮಾಡಿ ಈಗಾಗಲೇ ನಾರಾಯಣಪುರ, ಇಂಡಿ, ಆಲಮಟ್ಟಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದ್ದು, ಇಂದು ಮುದ್ದೇಬಿಹಾಳ, ಬಸವನಬಾಗೇವಾಡಿ ತಾಲೂಕು ವಿಶೇಷವಾಗಿ ಅತಿ ಹೆಚ್ಚು ಬುಡಕಟ್ಟು ಜನಸಂಖ್ಯೆ ಹೆಚ್ಚಿರುವ ಮುದ್ದಾಪುರ ಹಾಗೂ ಹೊನ್ನೂರಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.

ರಾಜ್ಯದ ವಿಜಯಪುರ ಸೇರಿದಂತೆ 4 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಕ್ಕಾಗಿ ಒಟ್ಟು 5 ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಲಾಗಿದ್ದು, ಈ ಪೈಕಿ ವಿಜಯಪುರ ಜಿಲ್ಲೆಗೆ 2018 ಕೋಟಿ ರೂ.ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. 

ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಅವಶ್ಯಕತೆ ಇರುವ ಮೂಲ ಸೌಕರ್ಯಗಳ ಬಗ್ಗೆ ತಂಡವು ಅಧ್ಯಯನ ನಡೆಸುತ್ತಿದ್ದು, ಅವಶ್ಯಕ ನಿವೇಶನಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಂಡಕ್ಕೆ ಮನವರಿಕೆ ಮಾಡಿದರು. 

ಅದರಂತೆ ಈ ಯೋಜನೆಗೆ ಸಂಬಂಧಪಟ್ಟಂತೆ ಗುತ್ತಿಗೆದಾರರಿಂದ ತಾಂತ್ರಿಕ ಆಧಾರದ ಮೇಲೆ ನೀಲನಕ್ಷೆ ಸಿದ್ಧಪಡಿಸಬೇಕು. ತಾಂತ್ರಿಕವಾಗಿ ಯೋಜನೆ ಅನುಷ್ಠಾನಕ್ಕೆ ಅನುಕೂಲಕರ ಸ್ಥಳವನ್ನು ಗುರುತಿಸುವಂತೆ ತಂಡಕ್ಕೆ ತಿಳಿಸಿದ, ಜಿಲ್ಲಾಧಿಕಾರಿಗಳು ಯೋಜನೆ ಅನುಷ್ಠಾನ ನಂತರ ನಿರ್ವಹಣೆ ಕುರಿತು, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯಲ್ಲಿ ಪ್ರಾತ್ಯಕ್ಷಿಕೆ ವಲಯಗಳನ್ನಾಗಿ ಯಶಸ್ವಿಗೊಳಿಸಿದ 24/7 ಕುಡಿಯುವ ನೀರಿನ ಸರಬರಾಜು ಯೋಜನೆಯ ಕುರಿತು ಚಚರ್ೆ ನಡೆಸಿ, ಇದರಿಂದ ಜಲಸಂಪನ್ಮೂಲದ ಸದ್ಭಳಕೆಗೆ ಸಹಕಾರಿಯಾಗಲಿದೆ ಎಂದು ತಂಡದ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು, ಈ ಯೋಜನೆ ಅನುಷ್ಠಾನದ ಜೊತೆಗೆ ಈಗಾಗಲೇ ಜಾರಿಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಗಮನ ನೀಡುವುದು ಅವಶ್ಯಕವಾಗಿದ್ದು, ತಾಂತ್ರಿಕವಾಗಿ ಯೋಜನೆ ಜಾರಿಗೊಳ್ಳಬೇಕು. ಯೋಜನೆ ಜಾರಿ ನಂತರ ಮೇಲ್ವಿಚಾರಣೆಯು ಮುಖ್ಯವಾಗಿದೆ ಎಂಬುದರ ಬಗ್ಗೆ ತಂಡದ ಗಮನ ಸೆಳೆದರು. 

ಸಮಾಲೋಚನೆ ಸಂದರ್ಭದಲ್ಲಿ  ಗ್ರಾಮೀಣ ಕುಡಿಯುವ ನೀರು ಯೋಜನಾ ನಿರ್ವಹಣಾ ಘಟಕದ ಪಿ.ಕುರಿಯನ್, ಸಾಮಾಜಿಕ ಸಲಹೆಗಾರ ಬೋಕೆಪಲ್ಲಿ ಕನಕದುರ್ಗರಾಜಾ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯನಿವರ್ಾಹಕ ಅಭಿಯಂತರ ಎಸ್.ಕುಮಾರ್, ಇಂಡಿ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ಎಲ್.ಟಿ.ರಾಠೋಡ ಅವರು ಉಪಸ್ಥಿತರಿದ್ದರು.